ಮಾರ್ಕೆಟ್‌ನಲ್ಲಿ ಸುಲಭವಾಗಿ ಸಿಗುವ ʻಈʼ ತರಕಾರಿ, ನಿಮ್ಮ ದೇಹದಲ್ಲಿ ಯೂರಿಕ್‌ ಆಸಿಡ್‌ ಅನ್ನು ತೆಗೆದು ಹಾಕುತ್ತದೆ!

Uric acid: ಬದಲಾಗುತ್ತಿರುವ ಹವಾಮಾನ ಮತ್ತು ಜೀವನಶೈಲಿಯಿಂದ ಅನೇಕ ಜನರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚಳಿಗಾಲದ ಕಾರಣದಿಂದ ದೇಹದಲ್ಲಿನ ಯೂರಿಕ್‌ ಆಸಿಡ್‌ ಅಂಶ ಕೂಡ ಹೆಚ್ಚಾಗುತ್ತದೆ. 
 

1 /9

Uric acid: ಬದಲಾಗುತ್ತಿರುವ ಹವಾಮಾನ ಮತ್ತು ಜೀವನಶೈಲಿಯಿಂದ ಅನೇಕ ಜನರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚಳಿಗಾಲದ ಕಾರಣದಿಂದ ದೇಹದಲ್ಲಿನ ಯೂರಿಕ್‌ ಆಸಿಡ್‌ ಅಂಶ ಕೂಡ ಹೆಚ್ಚಾಗುತ್ತದೆ.   

2 /9

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜಂಕ್ ಫುಡ್ ತಿನ್ನುವುದು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿದ ಯೂರಿಕ್ ಆಮ್ಲವು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  

3 /9

ಯೂರಿಕ್ ಆಸಿಡ್ ಮಟ್ಟವು 7.0 mg/dl ಗಿಂತ ಹೆಚ್ಚಿದ್ದರೆ ಅದು ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.   

4 /9

ಚಳಿಗಾಲದಲ್ಲಿ ಮೂಲಂಗಿ ಹೆಚ್ಚು ಸಿಗುತ್ತದೆ. ಮೂಲಂಗಿ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಿಂದ ಸಮೃದ್ಧವಾಗಿದೆ.  

5 /9

ಮೂಲಂಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲಂಗಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ರಾಮಬಾಣ.  

6 /9

ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಮ್ಮ ಆಹಾರದಲ್ಲಿ ಮೂಲಂಗಿಯನ್ನು ಸೇರಿಸಿಕೊಳ್ಳುವುದು ಉತ್ತಮ.  

7 /9

ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಏಕೆಂದರೆ ಇದರಲ್ಲಿರುವ ಫೋಲೇಟ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.   

8 /9

ಮೂಲಂಗಿಯಲ್ಲಿ ವಿಟಮಿನ್ ಬಿ6, ಫೋಲೇಟ್ ಮತ್ತು ವಿಟಮಿನ್ ಸಿ ಇದೆ. ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಲಂಗಿಯು ಪ್ಯೂರಿನ್‌ಗಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  

9 /9

ದೇಹದಲ್ಲಿ ಯೂರಿಕ್‌ ಆಸಿಡ್‌ ಪ್ರಮಾಣ ಹೆಚ್ಚಾದಾಗ, ಪ್ಯೂರಿನ್ಗಳು ಮೂಳೆಗಳು ಮತ್ತು ಕೀಲುಗಳಲ್ಲಿ ಸ್ಫಟಿಕಗಳ ರೂಪದಲ್ಲಿ ಸಂಗ್ರಹವಾಗುತ್ತವೆ. ಇದು ಗೌಟ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಮೂಲಂಗಿ ಸೇವನೆಯಿಂದ ಯೂರಿಕ್‌ ಆಸಿಡ್‌ ಅನ್ನು ತೆಗೆದು ಹಾಕಲು ಸಹಾ ಮಾಡುತ್ತದೆ.