Bigg Boss Kannada 11 Double Elimination: ಬಿಗ್ಬಾಸ್ ಕನ್ನಡ 11 ಫಿನಾಲೆಗೆ ಸಮೀಪಿಸುತ್ತಿದ್ದಂತೆಯೇ ಮನೆಯಿಂದ ಒಬ್ಬೊಬ್ಬರಾಗಿ ಹೊರಗೆ ಕಾಲಿಡುತ್ತಿದ್ದಾರೆ. ಸದ್ಯ ಉಳಿದ 8 ಸ್ಪರ್ಧಿಗಳಲ್ಲಿ 16ನೇ ವಾರ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನುವುದು ಪಕ್ಕಾ ಎಂದು ಹೇಳಲಾಗುತ್ತಿದೆ..
ಬಿಗ್ಬಾಸ್ ಮನೆಯಲ್ಲಿ ಉಳಿದಿರೋ 8 ಸ್ಪರ್ಧಿಗಳಿಗೆ ಪ್ರತಿ ಹೆಜ್ಜೆಗೊಂದು ಟ್ವಿಸ್ಟ್ ನೀಡಲಾಗುತ್ತಿದೆ.. ಇದೇ ವಾರದಲ್ಲಿ ಮಿಡ್ವೀಕ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗಿತ್ತು.. ಆದರೆ ಇದನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಯಿತು.. ಆ ಮೂಲಕ ಮನೆಯಿಂದ ಯಾರೂ ಹೊರಬರಲಿಲ್ಲ..
ನಡುರಾತ್ರಿ ಬಿಗ್ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡಿದ ಬಿಗ್ಬಾಸ್ ಮಂಜು, ಮೋಕ್ಷಿತಾ, ಗೌತಮಿ, ಭವ್ಯಾ, ತ್ರಿವಿಕ್ರಮ್, ರಜತ್, ಅವರ ಹಾರ್ಟ್ಬೀಟ್ ಹೆಚ್ಚಾಗಿತ್ತು.. ಕೊನೆಗೆ ಯಾರೂ ಮುಖ್ಯದಾರದಿಂದ ಹೊರಬರುವಂತಿಲ್ಲ ಎಂದು ಘೋಷಣೆ ಮಾಡಲಾಗಿತ್ತು..
ಇದರ ಬಳಿಕ ಬಿಗ್ಬಾಸ್ ಸ್ಪರ್ಧಿಗಳಿಗೆ ಮತ್ತೊಂದು ಬಿಗ್ಟ್ವಿಸ್ಟ್ ಎದುರಾಯಿತು.. ಧನರಾಜ್ ಟಾಸ್ಕ್ನಲ್ಲಿ ಮೋಸಮಾಡಿರುವುದಾಗಿ ತಿಳಿದುಬಂದಿದ್ದು, ಇದರಿಂದ ಧನರಾಜ್ಗೆ ನೀಡಲಾಗಿದ್ದ ಇಮ್ಯೂನಿಟಿಯನ್ನು ಹಿಂಪಡೆಯಲಾಯಿತು.. ಇದರಿಂದ ಧನರಾಜ್ ಅವರು ಸಹ ನಾಮಿನೇಟ್ ಆದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ..
ಬಿಗ್ಬಾಸ್ ನಿಯಮಾವಳಿಯಂತೆ ಈ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗುವುದು ಪಕ್ಕಾ ಆಗಿದೆ.. ಇದಲ್ಲದೇ ನಾಳೆ ಕಿಚ್ಚನ ಪಂಚಾಯಿತಿಯಲ್ಲಿ ಹಲವು ವಿಚಾರಗಳು ಚರ್ಚೆಯಾಗಲಿದ್ದು, ಡಬಲ್ ಎಲಿಮಿನೇಷಬ್ ನಡೆಯುವುದಂತೂ ಖಚಿತ ಎನ್ನಲಾಗಿದೆ..
ಸದ್ಯ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಹನುಮಂತನನ್ನು ಹೊರತುಪಡಿಸಿ ಉಳಿದ ಏಳು ಸ್ಪರ್ಧಿಗಳು ಡೇಂಜರ್ ಝೋನ್ನಲ್ಲಿದ್ದಾರೆ.. ಫಿನಾಲೆಗೆ ಒಂದೇ ಒಂದು ವಾರ ಬಾಕಿ ಇರುವಾಗಲೇ ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್, ರಜತ್, ಗೌತಮಿ, ಧನರಾಜ್, ಮಂಜು ಇವರಲ್ಲಿ ಈ ವಾರ ಇಬ್ಬರು ತಮ್ಮ ಬಿಗ್ಬಾಸ್ ಪ್ರಯಾಣವನ್ನು ಅಂತ್ಯ ಗೊಳಿಸುತ್ತಾರೆ..
ಸೋಷಿಯಲ್ ಮಿಡಿಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ಚರ್ಚೆಯ ಪ್ರಕಾರ ಧನರಾಜ್, ಗೌತಮಿ, ರಜತ್ ಈ ಮೂವರಲ್ಲಿ ಇಬ್ಬರು ಈ ವಾರ ಮನೆಯಿಂದ ಹೊರಹೋಗಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ.. ಇವು ಬರೀ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಾಗಿವೆ.. ಹಾಗಾಗಿ ಬಿಗ್ಬಾಸ್ ಮನೆಯಿಂದ ಯಾರು ಹೊರಹೋಗುತ್ತಾರೆ ಎನ್ನುವುದನ್ನು ತಿಳಿಯಲು ಮುಂದಿನ ಸಂಚಿಕೆಯವರೆಗೂ ಕಾಯಬೇಕಿದೆ..