Drinking Water at the Right Time: ಯಾವಾಗಲೂ ಹೆಚ್ಚು ಬಿಸಿ ಇರದ ಅಥವಾ ಹೆಚ್ಚು ತಣ್ಣಗೂ ಇರುವ ನೀರನ್ನು ಕುಡಿಯುವುದು ಒಳ್ಳೆಯದು. ಫ್ರಿಜ್ನಲ್ಲಿಟ್ಟ ತಂಪಾದ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀರನ್ನು ಯಾವತ್ತೂ ಕುಳಿತುಕೊಂಡೇ ಕುಡಿಯಬೇಕು. ನಿಂತುಕೊಂಡು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
Tips for drinking water: ಬಾಯಾರಿಕೆ ಆದಾಗ ಎಲ್ಲರೂ ನೀರನ್ನೇ ಕುಡಿಯುತ್ತಾರೆ. ಆದರೆ ಆ ನೀರನ್ನು ಕುಡಿಯಲು ಸಹ ಕೆಲವೊಂದು ನಿಯಮಗಳಿವೆ. ನೀರನ್ನು ಸರಿಯಾದ ವಿಧಾನದಲ್ಲಿ ಕುಡಿದರೆ ಮಾತ್ರ ಅದರ ಪ್ರಯೋಜನಗಳು ನಿಮಗೆ ಸಿಗುತ್ತವೆ. ಹಾಗಿದ್ರೆ ಇವತ್ತಿನ ವಿಡಿಯೋದಲ್ಲಿ ನೀರನ್ನು ಕುಡಿಯುವ ಸರಿಯಾದ ವಿಧಾನ ಮತ್ತು ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅಂತಾ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಬೆಳಗ್ಗೆ ಎದ್ದ ಮೇಲೆ ಹಲ್ಲುಜ್ಜಿ ಮೊದಲು ಉಗುರು ಬೆಚ್ಚಗಿನ ನೀರು ಕುಡಿಯಬೇಕು. ತಿಂಡಿ ತಿಂದ ಕೂಡಲೇ ಅಥವಾ ಊಟ ಮಾಡಿದ ಕೂಡಲೇ ನೀರು ಕುಡಿಯುವುದು ವಿಷ ಕುಡಿದಂತೆ. ಊಟ ಅಥವಾ ತಿಂಡಿಯಾದ ಒಂದು ಗಂಟೆಯ ನಂತರವೇ ನೀರು ಕುಡಿಯಬೇಕು.
ನೀರನ್ನು ಯಾವಾಗಲೂ ಗುಟುಕು ಗುಟುಕಾಗಿ ಕುಡಿಯಬೇಕು. ಇದರಿಂದ ಬಾಯಿಯ ಜೊಲ್ಲು ಹೊಟ್ಟೆಯೊಳಗೆ ಹೋಗುತ್ತದೆ. ಇದು ಹೊಟ್ಟೆಯ ಆಮ್ಲವನ್ನು ಶಾಂತಗೊಳಿಸುತ್ತದೆ. ಇದರಿಂದ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ. ಗುಟುಕು ಗುಟುಕಾಗಿ ನೀರು ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗದಂತೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಯಾವಾಗಲೂ ಹೆಚ್ಚು ಬಿಸಿ ಇರದ ಅಥವಾ ಹೆಚ್ಚು ತಣ್ಣಗೂ ಇರುವ ನೀರನ್ನು ಕುಡಿಯುವುದು ಒಳ್ಳೆಯದು. ಫ್ರಿಜ್ನಲ್ಲಿಟ್ಟ ತಂಪಾದ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀರನ್ನು ಯಾವತ್ತೂ ಕುಳಿತುಕೊಂಡೇ ಕುಡಿಯಬೇಕು. ನಿಂತುಕೊಂಡು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಕುಳಿತುಕೊಂಡು ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ನೀರಿನಾಂಶ ಮತ್ತು ಎಲೆಕ್ಟ್ರೋಲೈಟ್ ಅಂಶಗಳು, ಸಮತೋಲನ ಆಗುವುದರ ಜೊತೆಗೆ ನಮ್ಮ ಕೀಲುಗಳಲ್ಲಿ ಮತ್ತು ಮೂಳೆಗಳಲ್ಲಿ ಸಂಧಿವಾತ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ. ಹೀಗಾಗಿ ಯಾವಾಗಲೂ ಕುಳಿತುಕೊಂಡು ನೀರು ಕುಡಿಯುವುದು ಹಾಗೂ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ಒಂದು ಸಮಯದಲ್ಲಿ ಕೇವಲ ಒಂದು ಗ್ಲಾಸ್ ನೀರನ್ನು ಮಾತ್ರ ಕುಡಿಯಬೇಕು. ತುಂಬಾ ಬಾಯಾರಿಕೆಯಾಗಿದೆ ಎಂದು ಗಟಗಟನೆ ನೀರನ್ನು ಕುಡಿಯಬಾರದು. ಇದರಿಂದ ನಮ್ಮ ದೇಹದ ವಾತ, ಕಫ ಮತ್ತು ಪಿತ್ತ ದೋಷಗಳ ಸಮತೋಲನ ತಪ್ಪುತ್ತದೆ. ಕಲ್ಲು ಸಕ್ಕರೆ ಬೆರೆಸಿದ ನೀರು ಕುಡಿಯುವುದರಿಂದ ಪಿತ್ತರಸ ನಾಶವಾಗುತ್ತದೆ ಮತ್ತು ಶುಕ್ರದಾತು ಹೆಚ್ಚಾಗುತ್ತದೆ.
ಹಳೆ ಬೆಲ್ಲವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಪಿತ್ತ ನಾಶವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬಾಯಾರಿಕೆ ಎನಿಸಿದರೆ ಬೆಲ್ಲ ತಿಂದ ನಂತರ ನೀರು ಕುಡಿಯಿರಿ. ನೀರು ಕುಡಿದ ತಕ್ಷಣ ಓಡುವುದು, ವ್ಯಾಯಾಮ ಯೋಗಭ್ಯಾಸಗಳನ್ನು ಮಾಡಬೇಡಿ. ಮಲಗಿರುವ ಸ್ಥಿತಿಯಲ್ಲಿ ಎಂದಿಗೂ ನೀರನ್ನು ಕುಡಿಯಬೇಡಿ.