ಸಿಎಂ ಕುರ್ಚಿ ಖಾಲಿ ಇಲ್ಲ: ಸಿದ್ದರಾಮಯ್ಯ ಈಗಲೂ ಸಿಎಂ,ಮುಂದೆಯೂ ಅವರೇ ಸಿಎಂ; ಸಚಿವ ಎಚ್.ಸಿ.ಮಹದೇವಪ್ಪ

ಜಾತಿಗಣತಿಯನ್ನು ಆಧರಿಸಿ ಹಣಕಾಸಿನ ನಿರ್ವಹಣೆ ಆಗಬೇಕು ಎನ್ನುವ ನಿಲುವನ್ನು ನಾವು ಹೊಂದಿದ್ದೇವೆ. ಇದು ಮಂಡನೆ ಆಗಬೇಕು ಎನ್ನುವ ಕಾರಣಕ್ಕಾಗಿಯೇ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಹಿಂದಕ್ಕೆ ಸರಿಯುವ ಪ್ರಶ್ನೆಯಿಲ್ಲ. ನಾಳಿನ ಅಜೆಂಡಾ ಇನ್ನೂ ಬಂದಿಲ್ಲವೆಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

Written by - Puttaraj K Alur | Last Updated : Jan 16, 2025, 05:11 PM IST
  • ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ, ಸಿದ್ದರಾಮಯ್ಯನವರಿಗೆ ಯಾವುದೇ ಕಂಟಕವಿಲ್ಲ
  • 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ
  • ಆ ವೇಳೆ ಸಿಎಂ ಯಾರಾಗಬೇಕೆಂದು ಚರ್ಚಿಸೋಣ, ಸದ್ಯ ಮುಂದಕ್ಕೆ ಹೋಗೋಣ
ಸಿಎಂ ಕುರ್ಚಿ ಖಾಲಿ ಇಲ್ಲ: ಸಿದ್ದರಾಮಯ್ಯ ಈಗಲೂ ಸಿಎಂ,ಮುಂದೆಯೂ ಅವರೇ ಸಿಎಂ; ಸಚಿವ ಎಚ್.ಸಿ.ಮಹದೇವಪ್ಪ title=
ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ!!

HC Mahadevappa on CM Siddaramaiah: ನಮ್ಮ ಸರ್ಕಾರ ಐದು ವರ್ಷವೂ ಗಟ್ಟಿಯಾಗಿರುತ್ತದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ; ಮುಂದೆಯೂ ಕುಳಿತಿರುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. 

ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದ್ದು, ಆ ಪಕ್ಷದ ಒಳಜಗಳ ಬೀದಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಮಹದೇವಪ್ಪ, ʼಸಿಎಂ ಕುರ್ಚಿ ಅಲುಗಾಡುತ್ತಿದೆ, ಖಾಲಿಯಾಗುತ್ತದೆ ಎಂಬ ಯಾವುದೇ ರೀತಿಯ ಚರ್ಚೆಯೂ ಬೇಡʼವೆಂದು ಹೇಳಿದ್ದಾರೆ. 

ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ: ಮಲ್ಲಿಕಾರ್ಜುನ್‌ ಖರ್ಗೆ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಚರ್ಚೆ!!

ʼಮುಖ್ಯಮಂತ್ರಿ ಕುರ್ಚಿಗಾಗಿ ಯಾವುದೇ ರೀತಿಯ ರೇಸ್‌ ನಡೆಯುತ್ತಿಲ್ಲ. ಓಟವೇ ಇಲ್ಲವೆಂದ ಮೇಲೆ ಆಕಾಂಕ್ಷಿಗಳ ಪ್ರಶ್ನೆಯೇ ಬರುವುದಿಲ್ಲ. ರೇಸ್ ಮುಗಿದಿದೆ; ನಾವು ಗುರಿ ತಲುಪಿದ್ದೇವೆ. ಸರ್ಕಾರ ನಡೆಸುತ್ತಿದ್ದೇವೆ. 2028ಕ್ಕೂ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೇಕಾದರೆ ರೇಸ್ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಅದ್ಯಾವ ಪ್ರಶ್ನೆಗಳೂ ಇಲ್ಲ' ಅಂತಾ ಹೇಳಿದರು.

ʼವಿರೋಧ ಪಕ್ಷದವರಿಗೆ ಸಂವಿಧಾನದ ಪ್ರಕಾರ ಕೆಲಸ ಮಾಡಲು ಯಾವುದೇ ರೀತಿಯ ವಿಚಾರವೂ ಇಲ್ಲ. ಈ ಕಾರಣ ಇಲ್ಲದ ವಿಚಾರವನ್ನು ಇದೆ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಬಿಜೆಪಿ ಸೋತಿದೆ ಎಂದು ಟೀಕಿಸಿದರು. 

ಇದನ್ನೂ ಓದಿಹಸು ಕೆಚ್ಚಲು ಕೊಯ್ದ ಪ್ರಕರಣ: ರಾಷ್ಟ್ರದ್ರೋಹಿಗಳನ್ನು ಬಂಧಿಸುವಂತೆ ಕೆ.ಎಸ್.ಈಶ್ವರಪ್ಪ ಆಗ್ರಹ

ಸಿಎಂ ಬದಲಾವಣೆ, ಕೆಪಿಸಿಸಿಗೆ ನೂತನ ಸಾರಥಿ ಮತ್ತು ಜಾತಿಗಣತಿಯ ಬಗ್ಗೆ ನಮ್ಮಲ್ಲಿ ಏನೂ ಗೊಂದಲಗಳಿಲ್ಲ. ಇದೆಲ್ಲಾ ಬಿಜೆಪಿ ಸೃಷ್ಟಿಸುತ್ತಿರುವ ಆವಾಂತರ, ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಸಮಯದಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಹ ಹೇಳಿದ್ದರು. ಜಾತಿಗಣತಿ ಹೊಸ ವಿಚಾರವಲ್ಲ, ಹೀಗಾಗಿ ಸಿಎಂ ಬದಲಾವಣೆಯ ವಿಷಯ ಹಿನ್ನಲೆಗೆ ತಳ್ಳಲು ಜಾತಿಗಣತಿ ಸರ್ವೇ ಮಂಡನೆ ಮುಂದಾಗಿದೆ ಎನ್ನುವುದು ಬಿಜೆಪಿಯವರ ವೃಥಾ ಆರೋಪ. ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ಎನ್ನುವುದನ್ನು ಬಹಳಷ್ಟು ಬಾರಿಗೆ ಸ್ಪಷ್ಟಪಡಿಸಲಾಗಿದೆ ಎಂದು ಸಚಿವ ಮಹದೇವಪ್ಪ ಹೇಳಿದರು.

ಮುಖ್ಯಮಂತ್ರಿ ಕುರ್ಚಿ ಭದ್ರವಾಗಿದೆ, ಸಿದ್ದರಾಮಯ್ಯನವರಿಗೆ ಯಾವುದೇ ಕಂಟಕವಿಲ್ಲ. 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಚರ್ಚಿಸೋಣ, ಸದ್ಯ ಮುಂದಕ್ಕೆ ಹೋಗೋಣವೆಂದು ಅವರು ತಿಳಿಸಿದರು. 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News