Dead Body Viral Video: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಶವಪೆಟ್ಟಿಗೆಯೊಳಗಿನ ಮಹಿಳೆ ಕ್ಯಾಮೆರಾವನ್ನು ನೋಡುತ್ತಾಳೆ. ಈ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಎದೆಯನ್ನು ಜಲ್ ಎನ್ನುವಂತೆ ಮಾಡಿದೆ.
ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ ಶವಪೆಟ್ಟಿಗೆಯೊಳಗೆ ಮಲಗಿರುವಂತೆ ಕಾಣುತ್ತಿದೆ.ಆದರೆ, ಅನಿರೀಕ್ಷಿತವಾಗಿ, ಮಹಿಳೆ ತನ್ನ ಕಣ್ಣುಗಳನ್ನು ಅಗಲವಾಗಿ ತೆರೆಯುತ್ತಾಳೆ. ಇದನ್ನು ನೋಡಿದ ಅನೇಕರು ಮಹಿಳೆ ನಿಜವಾಗಿಯೂ ಜೀವಂತವಾಗಿ ಹಿಂತಿರುಗಿದ್ದಾರೆ ಎಂದು ಭಾವಿಸಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಈ ರೀತಿಯ ನಕಲಿ ಸ್ಕ್ರಿಪ್ಟ್ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಇದೀಗ ಈ ವಿಡಿಯೋ ಕೂಡ ಇಂತಹದ್ದೆ ಒಂದು ಗುಂಪಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.
A video of a woman seemingly coming back from the dead is going viral.
But here is the truth. 🧵 pic.twitter.com/L860jTS5S0
— DramaAlert (@DramaAlert) December 8, 2024
ಮಹಿಳೆಯ ಕಣ್ಣಿನ ಚಲನೆಯು ನೈಜವಾಗಿದೆ, ಶವಪರೀಕ್ಷೆಯ ನಂತರ ಸ್ನಾಯುಗಳು ವಿಶ್ರಾಂತಿ ಪಡೆಯುವುದರಿಂದ ಸಾವಿನ ನಂತರವೂ ಇದು ಸಂಭವಿಸಬಹುದು ಎಂದು ಇನ್ನೂ ಕೆಲವರು ನಂಬುತ್ತಾರೆ.
ಈ ವಿಡಿಯೋ ಹಿಂದೆ ಏನಾಯಿತು ಎಂಬುದಕ್ಕೆ ಮತ್ತೊಂದು ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಮಹಿಳೆ ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ನಟಿಸುವುದು ಮತ್ತು ನಂತರ ಎದ್ದು ಹೋಗುವುದು ಸ್ಪಷ್ಟವಾಗಿ ದಾಖಲಾಗಿದೆ. ಇದನ್ನು ನೋಡಿದ ಅನೇಕರು ಕಾಮೆಂಟ್ ಸೆಕ್ಷನ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದವರಿಗೆ ಕಾಮೆಂಟ್ ಮತ್ತು ಬ್ಲಾಂಕಿಂಗ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋಗೆ ಭಿನ್ನ ವಿಭಿನ್ನ ರೀತಿಯಲ್ಲಿ ಕಾಮೆಂಟ್ಗಳು ಕೇಳಿ ಬರುತ್ತಿದ್ದು, ವಿಡಿಯೋ ನೋಡಿದ ಜನರಂತೂ ಬೆಚ್ಚಿ ಬಿದ್ದಿದ್ದಾರೆ.
A second video, which is not being shared, looks far more staged.
Her lungs are also clearly moving normally too. pic.twitter.com/v1gORil3xt
— DramaAlert (@DramaAlert) December 8, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.