Bra Tips: ಸ್ತನದ ಗಾತ್ರ ಚಿಕ್ಕದಾಗಿರುವವರು ಅಗತ್ಯವಿರುವಂತಹ ಸಂದರ್ಭಗಳಲ್ಲಿ ಮಾತ್ರ ಬ್ರಾ ಧರಿಸಬಹುದು. ದಿನವಿಡೀ ಧರಿಸುವ ಅಗತ್ಯವಿಲ್ಲ. ಯಾಕೆಂದರೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲವೆಂಬುದು ತಜ್ಞರ ಅಭಿಪ್ರಾಯವಾಗಿದೆ.
What happens if women don't wear a bra?: ಸ್ತನಗಳು ಫಿಟ್ ಆಗಿ ನಿಲ್ಲಲು ಮಹಿಳೆಯರು ಬ್ರಾವನ್ನು ಧರಿಸುತ್ತಾರೆ. ಕೆಲವರು ಬ್ರಾ ಧರಿಸದೆ ಮನೆಯಿಂದ ಹೊರಗೆ ಹೋಗುವುದಿಲ್ಲ. ಆದರೆ ಕೆಲವರಿಗೆ ಬ್ರಾ ಧರಿಸುವುದೆಂದರೆ ಕಿರಿಕಿರಿ! ಬ್ರಾ ಧರಿಸುವುದರಿಂದ ಕೆಲವರಿಗೆ ಎದೆ ಕಟ್ಟಿದ ಅನುಭವವಾಗುತ್ತದೆ. ಹೀಗಾಗಿ ಅವರು ಬ್ರಾ ಧರಿಸುವುದಿಲ್ಲ. ಆದರೆ ಕೆಲವರು ಬ್ರಾ ಧರಿಸದಿದ್ದರೆ ಕಂಫರ್ಟ್ ಆಗಿರುವುದಿಲ್ಲ ಎನ್ನುತ್ತಾರೆ. ಹಾಗಾದ್ರೆ ಬ್ರಾ ಧರಿಸದಿರುವುದು ಸ್ತನಗಳಿಗೆ ಕೆಟ್ಟದ್ದೇ? ಇದರಿಂದ ಸಮಸ್ಯೆಗಳು ಕಾಡುತ್ತದೆಯೇ? ಹೀಗೆ ಹತ್ತು-ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಬ್ರಾ ಧರಿಸದಿದ್ದಾಗ ಏನಾಗುತ್ತದೆ? ಇದಕ್ಕೆ ತಜ್ಞರ ಉತ್ತರ ಏನು ಎಂಬುದರ ಬಗ್ಗೆ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಬ್ರಾ ಧರಿಸದೆ ಇರುವುದರಿಂದ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಬ್ರಾ ಹಾಕದಿದ್ದರೆ ಸ್ತನಗಳ ಚರ್ಮವು ಜೋತುಬೀಳಲು ಶುರುವಾಗಬಹುದು. ಬ್ರಾ ಮಹಿಳೆಯರ ಸ್ತನವನ್ನು ಜೋತು ಬೀಳದಂತೆ ಕಾಪಾಡುತ್ತದೆ. ಆದರೆ ಬ್ರಾ ಧರಿಸದಿದ್ದರೆ ಕೆಲವೊಂದು ಪ್ರಯೋಜನಗಳೂ ಇವೆ. ಇದು ದೇಹದಲ್ಲಿನ ರಕ್ತಪರಿಚಲನೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಎನ್ನುವುದು ಕೆಲವು ತಜ್ಞರ ಅಭಿಮತ.
ಬ್ರಾ ಧರಿಸದಿದ್ದರೆ ಸ್ತನದ ಗಾತ್ರ ಹೆಚ್ಚಾಗಬಹುದು ಮತ್ತು ಇದರಿಂದ ಚರ್ಮ ಜೋತುಬೀಳಬಹುದು ಎಂದು ಕೆಲವು ತಜ್ಞರು ಎಚ್ಚರಿಸುತ್ತಾರೆ. ಬ್ರಾ ಸ್ತನಗಳ ಗಾತ್ರವನ್ನು ಕುಗ್ಗಿಸುತ್ತದೆ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಸ್ತನಗಳ ಗಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಹ ಬ್ರಾ ಧರಿಸಬೇಕು. ಕೆಲವರು ಪಕ್ಕೆಲುಬುಗಳು, ಕುತ್ತಿಗೆ, ಬೆನ್ನು ಅಥವಾ ಭುಜದ ನೋವು ಅನುಭವಿಸುತ್ತಿದ್ದರೆ, ಇವೆಲ್ಲದಕ್ಕೂ ಬ್ರಾ ಸಹ ಕಾರಣವಾಗಿರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ದೊಡ್ಡ ಸ್ತನಗಳನ್ನು ಹೊಂದಿರುವವರು ಸ್ತನಗಳಿಗೆ ಸರಿಹೊಂದುವಂತಹ ಬ್ರಾವನ್ನು ಧರಿಸಲೇಬೇಕು. ಇಂಥವರು ದಿನವಿಡೀ ಬ್ರಾ ಧರಿಸಬೇಕಾಗುತ್ತದೆ, ಇಲ್ಲವಾದರೆ ಸ್ತನದ ಭಾರಕ್ಕೆ ನೋವಾಗಬಹುದು. ಇದು ಸ್ನಾಯು ಅಂಗಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಇಂಥವರು ಬಿಗಿಯಾದ ಬ್ರಾಗಳನ್ನು ಧರಿಸಬಾರದು. ಇದರಿಂದ ಅನೇಕ ದೈಹಿಕ ಸಮಸ್ಯೆಗಳು ಎದುರಾಗಬಹುದು.
ಸ್ತನದ ಗಾತ್ರ ಚಿಕ್ಕದಾಗಿರುವವರು ಅಗತ್ಯವಿರುವಂತಹ ಸಂದರ್ಭಗಳಲ್ಲಿ ಮಾತ್ರ ಬ್ರಾ ಧರಿಸಬಹುದು. ದಿನವಿಡೀ ಧರಿಸುವ ಅಗತ್ಯವಿಲ್ಲ. ಯಾಕೆಂದರೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲವೆಂಬುದು ತಜ್ಞರ ಅಭಿಪ್ರಾಯವಾಗಿದೆ.
ಸ್ತನಗಳು ದೊಡ್ಡದಿರಲಿ ಅಥವಾ ಚಿಕ್ಕದಿರಲಿ ರಾತ್ರಿ ವೇಳೆ ಯಾರೂ ಬ್ರಾ ಧರಿಸದಿರುವುದು ಸೂಕ್ತ. ರಾತ್ರಿ ಮಲಗುವಾಗಲೂ ಬ್ರಾ ಧರಿಸಿದರೆ ಇದರಿಂದ ಸ್ತನಗಳ ಬಳಿ ರಕ್ತಪರಿಚಲನೆಗೆ ಅಡ್ಡಿಯಾಗಬಹುದು. ಆರೋಗ್ಯ ಸಮಸ್ಯೆ ಕಾಡಬಹುದು ಎನ್ನುವುದು ತಜ್ಞ ವೈದ್ಯರ ಸಲಹೆ.