Bigg Boss Kannada Lady Finalist: ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.. ಇದೇ ವೇಳೆ ಯಾರು ಫಿನಾಲೆ ತಲುಪಬಹುದು ಎನ್ನುವ ಲೆಕ್ಕಾಚಾರ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ..
ಬಿಗ್‌ಬಾಸ್ ಮನೆಯಲ್ಲಿ ಸದ್ಯ ಘಟಾನುಘಟಿ ಸ್ಪರ್ಧಿಗಳೇ ಉಳಿದುಕೊಂಡಿದ್ದಾರೆ.. ಅವರ ಪೈಕಿ ಈ ವಾರ ಮಿಡ್‌ವೀಕ್ ಎಲಿಮಿನೇಷನ್‌ನಿಂದ ಒಬ್ಬರ ಸ್ಪರ್ಧಿ ಮನೆಯಿಂದ ಹೊರಹೋಗಲಿದ್ದಾರೆ.
ಜನವರಿ 19ಕ್ಕೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ವರದಿಯಾಗಿದೆ. ಇದೇ ವೇಳೆ ಯಾವ ಐದು ಸ್ಪರ್ಧಿ ಫಿನಾಲೆ ತಲುಪಲಿದ್ದಾರೆ ಎನ್ನುವ ಚರ್ಚೆಯೊಂದು ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ..
ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಬಿಗ್‌ಬಾಸ ಟಾಪ್ 5 ಸ್ಪರ್ಧಿಗಳಲ್ಲಿ ತ್ರಿವಿಕ್ರಮ್, ಧನ್‌ರಾಜ್, ಹನುಮಂತ, ಮಂಜು, ಭವ್ಯ ಇರುವುದು ಪಕ್ಕಾ ಎಂದು ಹೇಳಲಾಗಿದೆ.. ಇದರಿಂದಾಗಿ ಈ ವಾರದ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಮೋಕ್ಷಿತಾ, ಗೌತಮಿ, ಭವ್ಯ ಇಲ್ಲವಾದರೇ ರಜತ್ ಹೊರಹೋಗಬಹುದು ಎನ್ನಲಾಗಿದೆ..
ಇನ್ನು ಕಳೆದ ವಾರ ಬಿಗ್‌ಬಾಸ್ ನೀಡಿದ ಟಿಕೆಟು ಟು ಫಿನಾಲೆ ಟಾಸ್ಕ್‌ನಲ್ಲಿ ಹನುಮಂತ ಭರ್ಜರಿಯಾಗಿ ಆಟವಾಡಿ ಮೊದಲ ಫೈನಲಿಸ್ಟ್ ಆದರು.. ಇವರ ಬಳಿಕ ತ್ರಿವಿಕ್ರಮ್ ಸಹ ಟಾಸ್ಕ್ ಗೆದ್ದು ಪೈನಲ್ ಪ್ರವೇಶಿಸಿದರು..
ಕಳೆದವಾರ ಕ್ಯಾಪ್ಟನ್ ಪಟ್ಟ ಪಡೆದುಕೊಂಡಿದ್ದ ರಜತ್ ನೇರವಾಗಿ ಫಿನಾಲೆ ತಲುಪುವ ಅವಕಾಶ ಪಡೆದಿದ್ದರು.. ಆದರೆ ತಮಗೆ ನೀಡಿದ್ದ ಉಸ್ತುವಾರಿ ಕೆಲಸದಲ್ಲಿ ಒಬ್ಬರ ಪರವಾಗಿಯೇ ನಿಂತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.. ಅಲ್ಲದೇ ಈ ವಿಚಾರವಾಗಿ ಕಿಚ್ಚನ ಪಂಚಾಯಿತಿಯಲ್ಲಿ ಅವರಿಗೆ ಕ್ಲಾಸ್ ಕೂಡ ತೆಗೆದುಕೊಳ್ಳಲಾಯಿತು..
ಹೀಗಾಗಿ ಈ ವಾರ ನಡೆಯಲಿರುವ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ರಜತ್, ಮೋಕ್ಷಿತಾ, ಭವ್ಯ ಇಲ್ಲವೇ ಗೌತಮಿ ಇರುವುದು ಕನ್ಫರ್ಮ ಎನ್ನಲಾಗಿದೆ.. ಮತ್ತೊಂಡೆದೆಯ ಮಾಹಿತಿಯನ್ನು ನೋಡುವುದಾದರೇ ಟಾಪ್ 5 ಸ್ಪರ್ಧಿಗಳಲ್ಲಿ ಭವ್ಯ ಇರುವುದು ಪಕ್ಕಾ ಎಂದು ಸಹ ಹೇಳಲಾಗುತ್ತಿದೆ.. ಆದರೆ ಇವು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಗಳಾಗಿವೆ..