ನವದೆಹಲಿ: ವಿಶ್ವದ ಖ್ಯಾತ ಮತ್ತು ಚೀನಾ ಮೂಲದ ಶಾರ್ಟ್ ವಿಡಿಯೋ ಆಪ್ ಟಿಕ್ ಟಾಕ್ ಭಾರಿ ಚರ್ಚೆಯಲ್ಲಿದೆ. ಇತ್ತೀಚೆಗಷ್ಟೇ ಆಸಿಡ್ ಅಟ್ಯಾಕ್ ನಂತಹ ಕಂಟೆಂಟ್ ಬಿತ್ತರಿಸಿದ್ದಕ್ಕಾಗಿ ಈ ಆಪ್ ಅನ್ನು ನಿರ್ಬಂಧಿಸಬೇಕು ಎಂಬ ಕೂಗುಗಳು ಕೇಳಿಬಂದಿದ್ದವು. ಏತನ್ಮಧ್ಯೆ ಟಿಕ್ ಟಾಕ್ ರೀತಿಯೇ ಭಾರತೀಯ ಮೂಲದ 'ಮಿತ್ರೋ' ಹೆಸರಿನ ಆಪ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಅತಿ ಕಡಿಮೆ ಕಾಲಾವಧಿಯಲ್ಲಿ ಈ ಆಪ್ ಖ್ಯಾತಿಯ ಉತ್ತುಂಗಕ್ಕೆ ಏರಲು ತನ್ನ ಯಾತ್ರೆ ಆರಂಭಿಸಿದ್ದು, ಭಾರತದ ಅತ್ಯಂತ ಜನಪ್ರೀಯ ಆಪ್ ಗಳ ಪಟ್ಟಿಯಲ್ಲಿ ಇದು ತನ್ನ ಸ್ಥಾನ ಭದ್ರಪಡಿಸಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಈ ಆಪ್ ಬಿದುಗದೆಯಾಗಿರುವುದು ಇಲ್ಲಿ ಗಮನಾರ್ಹ..
ಕೇವಲ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಈ ಆಪ್ ಅನ್ನು ಇದುವರೆಗೆ ಸುಮಾರು 50 ಲಕ್ಷಕ್ಕೂ ಅಧಿಕ ಬಾರಿಗೆ ಡೌನ್ ಲೋಡ್ ಮಾಡಲಾಗಿದೆ. ಆರಂಭದಲ್ಲಿ ಈ ಆಪ್ ನ ಡೌನ್ ಲೋಡ್ ಸ್ಪೀಡ್ ಗಮನಿಸಿದರೆ, ಇದು ಚೀನಾ ಮೂಲದ ಟಿಕ್ ಟಾಕ್ ಆಪ್ ಗೆ ಭಾರಿ ಪೈಪೋಟಿ ನೀಡಲಿದೆ ಎನ್ನಲಾಗುತ್ತಿದೆ.
ಟಿಕ್ ಟಾಕ್ ಮೇಲೆ ಸಂಕಷ್ಟದ ಕಾರ್ಮೋಡ
ಈ ಆಪ್ ಅನ್ನು ಟಿಕ್ ಟಾಕ್ ಆಧರಿಸಿಯೇ ನಿರ್ಮಿಸಲಾಗಿದೆ. ತನ್ನಷ್ಟಕ್ಕೆ ಇದೊಂದು ಶಾರ್ಟ್ ವಿಡಿಯೋ ಹಾಗೂ ಸೋಶಿಯಲ್ ಮೀಡಿಯಾ ಆಪ್ ಎಂದು ಇದು ಹೇಳಿಕೊಳ್ಳುತ್ತದೆ. ಜನರಿಗೆ ಅವರ ಇನ್ನೋವೇಟಿವ್ ಐಡಿಯಾ ಹಾಗೂ ಹ್ಯೂಮರ್ ಗಳ ಪ್ರದರ್ಶನಕ್ಕೆ ಈ ಆಪ್ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ.
ಟಿಕ್ ಟಾಕ್ ರೀತಿಯೇ ಇದರಲ್ಲಿಯೂ ಕೂಡ ಶಾರ್ಟ್ ವಿಡಿಯೋ ಸಿದ್ಧಪಡಿಸಿ, ಎಡಿಟ್ ಮಾಡಬಹುದಾಗಿದೆ ಹಾಗೂ ಅವುಗಳನ್ನು ಇತರೆ ಸಾಮಾಜಿಕ ಮಾಧ್ಯಮಗಳ ಮೇಲೆ ಹಂಚಿಕೊಳ್ಳಬಹುದು. 7.8 ಎಂಬಿ ಗಾತ್ರದ ಈ ಆಪ್, ನೀವು ಟಿಕ್ ಟಾಕ್ ಗೆ ನೀಡುವ ಎಲ್ಲ ಅನುಮತಿಗಳಿಗೆ ಅನುಮತಿ ನೀಡಲು ಕೇಳುತ್ತದೆ.