Lockdown:Work From Home ಕೆಲಸದ ಹುಡುಕಾಟದಲ್ಲಿ ಭಾರತೀಯರು

ಕೊರೊನಾ ವೈರಸ್ ನಿಂದ ಬಚಾವಾಗಲು ಇದೀಗ ಹೆಚ್ಚಿನ ಭಾರತೀಯರು ವರ್ಕ್ ಫ್ರಮ್ ಹೋಮ್ ಕೆಲಸವಹ್ಹು ಹೆಚ್ಚಾಗಿ ಹುಡುಕುತ್ತಿದ್ದಾರೆ.

Last Updated : May 24, 2020, 05:51 PM IST
Lockdown:Work From Home ಕೆಲಸದ ಹುಡುಕಾಟದಲ್ಲಿ ಭಾರತೀಯರು title=

ನವದೆಹಲಿ: ಲಾಕ್‌ಡೌನ್ ನಡುವೆ, ಕೆಲಸ ಮಾಡುವ ಎಲ್ಲಾ ಸಮೀಕರಣಗಳು ಈಗ ಬದಲಾಗುತ್ತಿವೆ. ಲಾಕ್ ಡೌನ್ ಗಿಂತಲೂ ಮೊದಲು ಜನರು ಹೆಚ್ಚಿನ ಸಂಬಳದ ಕಡೆಗೆ ಮಾತ್ರ ಆಕರ್ಷಿತರಾಗುತ್ತಿದ್ದರು. ಆದರೆ ಇದೀಗ, ಎಲ್ಲವೂ ಬದಲಾಗಿದೆ. ಈಗ ಹೆಚ್ಚಿನ ಜನರು ಕರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮನೆಯಿಂದ ಕೆಲಸಗಳನ್ನು ಹುಡುಕುತ್ತಿದ್ದಾರೆ. ಉದ್ಯೋಗಿಗಳ ಚಿಂತನೆ ಮತ್ತು ಆದ್ಯತೆಯಲ್ಲಿ ಈ ಮಹತ್ತರವಾದ ಬದಲಾವಣೆಯನ್ನು ಕಾಣಿಸಲಾರಂಭಿಸಿದೆ.

ಶೇ.337 ರಷ್ಟು ವೃದ್ಧಿ
ಕೊರೊನಾ ವೈರಸ್ ಮಹಾಮಾರಿ ಜನರು ಕೆಲಸ ಮಾಡುವ ವಿಧಾನದಲ್ಲಿ ತೀವ್ರ ಬದಲಾವಣೆಯನ್ನು ತಂದಿದೆ. ಫೆಬ್ರವರಿಯಿಂದ ಮೇ ವರೆಗೆ ದೇಶದಲ್ಲಿ 'ರಿಮೋಟ್ ವರ್ಕ್' (ಆಫ್-ಸೈಟ್ ಆಫೀಸ್ ವರ್ಕ್) ಉದ್ಯೋಗಗಳ ಹುಡುಕಾಟದಲ್ಲಿ ಶೇಕಡಾ 377 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಈಗ ದೂರದಿಂದ ಕೆಲಸ ಮಾಡಲು ಹೆಚ್ಚು ಸಿದ್ಧರಿದ್ದಾರೆ ಎಂದು ವರದಿ ಹೇಳಿದೆ. ತಮ್ಮ ಹುಡುಕಾಟದಲ್ಲಿ ಉದ್ಯೋಗಾಕಾಂಕ್ಷಿಗಳು 'ರಿಮೋಟ್ ವರ್ಕ್ ಹಾಗೂ ಮನೆಯಿಂದ ಕೆಲಸ ಅಂದರೆ ವರ್ಕ್ ಫ್ರಮ್ ಹೋಮ್ ರೀತಿಯ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಉದ್ಯೋಗ ಹುಡುಕಾಟದ ಸೈಟ್ ಇಂಡೀಡ್ ವರದಿ ಮಾಡಿದೆ.

2020 ರ ಫೆಬ್ರವರಿಯಿಂದ ಮೇ ಅವಧಿಯಲ್ಲಿ, ರಿಮೋಟ್ ಕೆಲಸಕ್ಕಾಗಿ ಶೇ 377 ರಷ್ಟು ಏರಿಕೆ ಕಂಡುಬಂದಿದೆ. ಅಂತೆಯೇ, ರಿಮೋಟ್ ವರ್ಕ್ ಮತ್ತು ಮನೆಯಿಂದ ಮಾಡುವ ಕೆಲಸಗಳಲ್ಲಿ ಶೇಕಡಾ 168 ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ

ಈ ಕುರಿತು ಹೇಳಿಕೆ ನೀಡಿರುವ ಇಂಡೀಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶಶಿ ಕುಮಾರ್, 'ಕೋವಿಡ್ -19 ಕಾರಣ ಬಹಳಷ್ಟು ಜನರು ಕೆಲಸ ತಮ್ಮ ಮಾಡುವ ವಿಧಾನವನ್ನು ಬದಲಾಯಿಸಿದ್ದಾರೆ. ರಿಮೋಟ್ ವರ್ಕ್ ಬಗ್ಗೆ ಜನರ ಒಲವು ವೇಗವಾಗಿ ಹೆಚ್ಚಾಗಿದೆ. ಸದ್ಯಕ್ಕೆ ಇದು ಮುಂದುವರಿಯುವ ನಿರೀಕ್ಷೆಯಿದೆ. ಉದ್ಯಮವು ಈಗ ಭವಿಷ್ಯಕ್ಕಾಗಿ ಇದೇ ರೀತಿಯ ಉದ್ಯೋಗಿಗಳನ್ನು ಸಿದ್ಧಪಡಿಸುವತ್ತ ಗಮನ ಹರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

83 ರಷ್ಟು ಉದ್ಯೋಗಾಕಾಂಕ್ಷಿಗಳುರಿಮೋಟ್ ವರ್ಕ್ ನೀತಿಯನ್ನು ಪ್ರಮುಖವೆಂದು ಪರಿಗಣಿಸುತ್ತಾರೆ ಎಂದು ಈ ಮೊದಲು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಅಷ್ಟೇ ಅಲ್ಲ, ಶೇಕಡಾ 53 ರಷ್ಟು ಉದ್ಯೋಗಿಗಳು ವೊರ್ಕ್ ಫ್ರಮ್ ಹೋಮ್ ಮಾಡುವ ಆಯ್ಕೆ ಒದಗಿಸಿದರೆ ವೇತನ ಕಡಿತಕ್ಕೂ ಸಹ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
 

Trending News