ನವದೆಹಲಿ: ದೇಶಕ್ಕೆ ದೇಶವನ್ನೇ ದಿಗ್ಬಂಧನಗೊಳಿಸಿದರೂ ಕೊರೊನಾವೈರಸ್ (Coronavirus) COVID 19 ಎಂಬ ಕಂಡುಕೇಳರಿಯದ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಭಾರತದ COVID 19 ಸೋಂಕು ಪೀಡಿತರ ಸಂಖ್ಯೆ ಒಂದೂಕಾಲು ಲಕ್ಷ ದಾಟಿದೆ. ಕೊರೋನಾ ತವರಾದ ಚೀನಾವನ್ನು ಹಿಂದಿಕ್ಕಿದೆ. ಈಗ ಅತಿಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪೈಕಿ ಟಾಪ್ ಟೆನ್ ಆಗುವ ಸರದಿ.
ಕೆಲವರು ಕೊರೋನಾ ಸೋಂಕು ನಿಯಂತ್ರಣ ಮಾಡುವುದರಲ್ಲಿ ಭಾರತ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದಾರೆ. ಆದರೆ ಭಾರತದ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ದಿನದಿಂದ ದಿನಕ್ಕೆ COVID 19 ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇದಕ್ಕೆ ಕಳೆದರಡು ದಿನಗಳು ದಾಖಲಾದ ಕೋವಿಡ್ -19 (Covid-19) ವೈರಾಣು ಪೀಡಿತರ ಸಂಖ್ಯೆಯೇ ಉತ್ತಮ ಉದಾಹರಣೆ. ಎರಡೂ ದಿನವೂ 6 ಸಾವಿರಕ್ಕಿಂತ ಹೆಚ್ಚು ಜನ ಸೋಂಕು ಪೀಡಿತರಾಗುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಖಾಸಗಿ ಆಸ್ಪತ್ರೆಗಳ ಶೇ. 80ರಷ್ಟು ಬೆಡ್ ಗಳು ಕೊರೊನಾಗೆ ಮೀಸಲು
ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸುತ್ತಿವೆ. ಮೇ 21ರಂದು 6,088 ಮತ್ತು ಮೇ 22ರಂದು 6,654 ಪ್ರಕರಣಗಳು ವರದಿಯಾಗಿವೆ.
ಇದರಿಂದ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1,25,101ಕ್ಕೆ ಏರಿಕೆಯಾಗಿದೆ. ಅಲ್ಲದೆ ನಿನ್ನೆ ಒಂದೇ ದಿನ ದೇಶದಲ್ಲಿ 137 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 3,720ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ.
ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...
- ಮೇ 6ರಂದು 3,561,
- ಮೇ 7ರಂದು 3,390,
- ಮೇ 8ರಂದು 3,320,
- ಮೇ 9ರಂದು 3,277,
- ಮೇ 10ರಂದು 4,213,
- ಮೇ 11ರಂದು 3,064,
- ಮೇ 12ರಂದು 3,525,
- ಮೇ 13ರಂದು 3,722,
- ಮೇ 14ರಂದು 3,967,
- ಮೇ 15ರಂದು 3,970,
- ಮೇ 16ರಂದು 4,987,
- ಮೇ 17ರಂದು 5,242,
- ಮೇ 18ರಂದು 4,970,
- ಮೇ 19ರಂದು 5,611,
- ಮೇ 20ರಂದು 5,609,
- ಮೇ 21ರಂದು 6,088,
- ಮೇ 22ರಂದು 6,654.
ರಾಜ್ಯಾವಾರು COVID-19 ಪೀಡಿತರ ಸಂಖ್ಯೆ
ಇದೇ ರೀತಿ ದೇಶದ COVID 19 ಸೋಂಕು ಪೀಡಿತರ ಸಂಖ್ಯೆ ದಿನವೊಂದಕ್ಕೆ 6 ಸಾವಿರಕ್ಕಿಂತಲೂ ಹೆಚ್ಚಾದರೆ ಎರಡು ಅಥವಾ ಮೂರು ದಿನದಲ್ಲಿ ಭಾರತ ಜಗತ್ತಿನ COVID 19 ಸೋಂಕು ಪೀಡಿತರ ಸಂಖ್ಯೆಯಲ್ಲಿ ಟಾಪ್ ಟೆನ್ ಆಗಲಿದೆ. ಏಕೆಂದರೆ ಭಾರತ ಈಗ 11ನೇ ಸ್ಥಾನದಲ್ಲಿದೆ. ಭಾರತದ COVID 19 ಸೋಂಕು ಪೀಡಿತರ ಸಂಖ್ಯೆ 1,25,101. 10ನೇ ಸ್ಥಾನದಲ್ಲಿರುವ ಇರಾನ್ ಸೋಂಕು ಪೀಡಿತರ ಸಂಖ್ಯೆ 1,31,652. ಎರಡೂ ದೇಶಗಳ ನಡುವೆ ಇರುವ ವ್ಯತ್ಯಾಸ 68,551 ಮಾತ್ರ.