Ration Card Updates: ತಮ್ಮ ಗುರುತು ನೋಂದಣಿ ಅಥವಾ ಮರುನೋಂದಣಿ ಮಾಡಿಸದಿರುವ ಪಡಿತರ ಚೀಟಿದಾರರು ಇದೇ ಡಿ.31ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಮ್ಮ ಬೆರಳಚ್ಚು ನೀಡಿ e-KYC ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
e-KYC ಮಾಡಿಸಿಕೊಳ್ಳಲು ಯಾವುದೇ ಹಣ ನೀಡುವಂತಿಲ್ಲ. ಆಧಾರ್ ದೃಢೀಕರಣ (e-KYC) ಮಾಡಿಸದಿರುವ ಫಲಾನುಭವಿಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಪಡಿತರ ನೀಡವುದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ e-KYC ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಸಹ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಹೆಬ್ಬೆರಳು ನೀಡಿ ಹೆಸರು ಮರು ನೋಂದಾವಣಿ (e-KYC) ಮಾಡಿಸಿಕೊಳ್ಳಬೇಕು ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ!ಇನ್ನು ಫೈನಲ್ ಚಾರ್ಟ್ ರೆಡಿಯಾದ ಮೇಲೂ ಸುಲಭವಾಗಲಿದೆ ಕನ್ಫರ್ಮ್ ಟಿಕೆಟ್ ಪಡೆಯುವ ಪ್ರಕ್ರಿಯೆ
ಪಡಿತರ ಚೀಟಿ e-KYC ಮಾಡಿಸಲು ಬೇಕಾಗುವ ದಾಖಲೆಗಳು
* ನಿಮ್ಮ ಪಡಿತರ ಚೀಟಿಯ ಅಸಲಿ ಪ್ರತಿ
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಫೋಟೋ ಕಾಪಿ
* ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ
* ಬ್ಯಾಂಕ್ ಪಾಸ್ಬುಕ್ನ ಫೋಟೋ ಕಾಪಿ
* ಕುಟುಂಬದ ಯಜಮಾನನ ಎರಡು ಪಾಸ್ಪೋರ್ಟ್ ಅಳತೆಯ ಪೋಟೋ
ಪಡಿತರ ಚೀಟಿ ಮತ್ತು ಆಧಾರ್ ಆನ್ಲೈನ್ನಲ್ಲಿ ಲಿಂಕ್ ಮಾಡುವುದು ಹೇಗೆ?
* ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್ಗೆ ಭೇಟಿ ನೀಡಿ
* ಸಕ್ರಿಯ ಕಾರ್ಡೊಂದಿಗೆ ಆಧಾರ್ ಲಿಂಕ್ ಆಯ್ಕೆ ಮಾಡಿರಿ
* ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* Proceed / Submit ಬಟನ್ ಆಯ್ಕೆ ಮಾಡಿ.
* ಈಗ ನಿಮ್ಮ ಮೊಬೈಲ್ ಫೋನ್ OTPಯನ್ನು ಸ್ವೀಕರಿಸುತ್ತೀರಿ.
* ಆಧಾರ್ ಪಡಿತರ ಲಿಂಕ್ ಪುಟದಲ್ಲಿ OTPಯನ್ನು ನಮೂದಿಸಿ. ಈಗ ನಿಮ್ಮ requestಅನ್ನು submit ಮಾಡಿರಿ.
ಇದನ್ನೂ ಓದಿ: Income Tax ಸ್ಲ್ಯಾಬ್ನಲ್ಲಿ ಬರದವರೂ ಐಟಿಆರ್ ಫೈಲ್ ಮಾಡಬಹುದು, ಸಿಗುತ್ತೆ ಈ 10 ಪ್ರಯೋಜನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.