ಅಮೇರಿಕಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,528,566ಕ್ಕೆ ತಲುಪಿದೆ ಅಲ್ಲದೆ ಈ ಮಾರಕ ವೈರಸ್ ದಾಳಿಗೆ ಅಲ್ಲಿ ಇದುವರೆಗೆ 91,921 ಜನರು ಬಲಿಯಾಗಿದ್ದಾರೆ. ಏತನ್ಮಧ್ಯೆ ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ಕುರಿತು ವಿಚಿತ್ರ ಹೇಳಿಕೆ ನೀಡಿರುವ ರಾಷ್ಟ್ರಾಧ್ಯಕ್ಷ ಡೊನಾಲ್ ಟ್ರಂಪ್ 'ಇದೊಂದು ಹೆಮ್ಮೆಯ' ವಿಚಾರ ಎಂದು ಹೇಳಿದ್ದಾರೆ.
theguardian.com ಪ್ರಕಟಗೊಂಡ ವರದಿಯೊಂದರ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಅಮೆರಿಕಾದಲ್ಲಿ ಪತ್ತೆಯಾಗಿರುವುದು 'ಬ್ಯಾಡ್ಜ್ ಆಫ್ ಆನರ್' ಎಂದು ಟ್ರಂಪ್ ಹೇಳಿದ್ದಾರೆ. ಇದರ ಕಡೆಗೆ ನೋಡುವ ನನ್ನ ದೃಷ್ಟಿಕೋನ ಸ್ವಲ್ಪ ಭಿನ್ನವಾಗಿದ್ದು, ಇದೊಂದು ಒಳ್ಳೆಯ ಸಂಗತಿಯಾಗಿದ್ದು, ಇದರ ಅರ್ಥ ನಮ್ಮ ಟೆಸ್ಟಿಂಗ್ ಕ್ಷಮತೆ ತುಂಬಾ ಉತ್ತಮವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ನಿವಾಸವಾಗಿರುವ ವೈಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, ವಿಶ್ವದಲ್ಲಿ ಕೊರೊನಾ ವೈರಸ್ ನ ಅತಿ ಹೆಚ್ಚು ಪ್ರಕರಣಗಳು ಅಮೆರಿಕಾದಲ್ಲಿವೆ ಎಂದು ನೀವು ಹೇಳಬೇಕಾದರೆ, ಅದರ ಅರ್ಥ ನಮ್ಮ ಬಳಿ ಇರುವ ಟೆಸ್ಟಿಂಗ್ ವ್ಯವಷ್ಟೇ ಇತರೆ ದೇಶಗಳಿಗಿಂತ ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ. ಕೊರೊನಾ ಮಹಾಮಾರಿ ಹರಡಿದ ಬಳಿಕ ಇದೆ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ ತಮ್ಮ ಸಂಪುಟ ಸಭೆ ನಡೆಸಿದ್ದಾರೆ.
ಈ ಮೊದಲೂ ಕೂಡ ಕೊರೊನಾಗೆ ಸಂಬಂಧಿಸಿದಂತೆ ವಿವಾದಾತ್ಮಕ ಟಿಪ್ಪಣಿಗಳನ್ನು ಮಾಡಿರುವ ಡೊನಾಲ್ಡ್ ಟ್ರಂಪ್, "ನಮ್ಮ ದೇಶದಲ್ಲಿ ಕೊರೊನಾ ಸೋಂಕಿನ ಅತಿ ಹೆಚ್ಚು ಪ್ರಕರಣಗಳಿವೆ ಮತ್ತು ನಾನು ಇದರೆಡೆಗೆ ನಕಾರಾತ್ಮಕವಾಗಿ ನೋಡುವುದಿಲ್ಲ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ನಮ್ಮ ಟೆಸ್ಟಿಂಗ್ ಉತ್ತಮವಾಗಿದೆ ಎಂದು ಇದು ಸಾಬೀತು ಪಡಿಸುತ್ತದೆ" ಎಂದಿದ್ದಾರೆ.
ಅಷ್ಟೇ ಅಲ್ಲ ಹಲವಾರು ವೃತ್ತಿಪರರು ಇದಕ್ಕಾಗಿ ಶ್ರಮವಹಿಸಿ ಟೆಸ್ಟಿಂಗ್ ನಡೆಸಿದ್ದಾರೆ. ಅವರಿಗಾಗಿ ಇದೊಂದು ಟ್ರಿಬ್ಯೂಟ್ ಎಂದಿದ್ದಾರೆ. ಅಮೇರಿಕಾದ ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಕಿ-ಅಂಶಗಳ ಪ್ರಕಾರ, ಮಂಗಳವಾರದವರೆಗೆ ಇಡೀ ದೇಶಾದ್ಯಂತ ಒಂದು ಕೋಟಿ 26 ಲಕ್ಷ ಕೊರೊನಾ ಟೆಸ್ಟಿಂಗ್ ನಡೆಸಲಾಗಿದೆ.
ಸಂಪೂರ್ಣ ಟೆಸ್ಟಿಂಗ್ ಕುರಿತು ಹೇಳುವದಾದರೆ, ಅಮೇರಿಕ ಇದುವರೆಗೆ ವಿಶ್ವದಲ್ಲಿ ಅತಿ ಹೆಚ್ಚು ಟೆಸ್ಟ್ ನಡೆಸಿರುವುದು ನಿಜ. ಆದರೆ, ಆಕ್ಸ್ಫರ್ಡ್ ಯುನಿವರ್ಸಿಟಿಯಾ Our World in Data ಪ್ರಕಾರ 'ಪರ್ ಕ್ಯಾಪ್ಟಾ ಬೇಸಿಸ್' ಆಧಾರದ ಮೇಲೆ ಅಮೇರಿಕಾ ನಂ.1 ಸ್ಥಾನದಲ್ಲಿ ಇಲ್ಲ ಎನ್ನಲಾಗಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ Our World in Data ಚಾರ್ಟ್ ಪ್ರಕಾರ ಪ್ರತಿ ಸಾವಿರ ವ್ಯಕ್ತಿಗಳ ಮೇಲೆ ನಡೆಸಲಾಗಿರುವ ಟೆಸ್ಟ್ ನಲ್ಲಿ ಅಮೇರಿಕಾ 16ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ ಈ ಪಟ್ಟಿಯಲ್ಲಿ ಐಸ್ಲ್ಯಾಂಡ್, ನ್ಯೂಜೀಲ್ಯಾಂಡ್ ಹಾಗೂ ಕೆನಡಾ ದೇಶಗಳು ಅಮೇರಿಕಾಗಿಂತ ಮುಂದಿವೆ.