ಬಂಡೀಪುರದಲ್ಲಿ ಮತ್ತೇ ಹೊಸ ಚರ್ಚೆಗೆ ನಾಂದಿ ಹಾಡಿದೆ ಸುರಂಗ ಮಾರ್ಗದ ಮಾತು

ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ತೆರವಿಗೆ ಸುರಂಗ ಮಾರ್ಗ ನಿರ್ಮಾಣದ ಚಿಂತನೆ ಕೇಂದ್ರ ಸರ್ಕಾರ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟಿದ್ದಾರೆ.

Written by - Yashaswini V | Last Updated : Dec 24, 2024, 03:01 PM IST
  • ಕೇರಳ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಮತ್ತು ನಿತಿನ್ ಗಡ್ಕರಿ ಭೇಟಿ ವೇಳೆ ಸುರಂಗ ಮಾರ್ಗಕ್ಕೆ ಚಿಂತನೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.
  • ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವಂತೆ ಮನವಿ ಮಾಡಲು ಬ್ರಿಟಾಸ್ ತೆರಳಿದ್ದ ವೇಳೆ 25 ಕಿಮೀ ದೂರದ 6 ಲೇನ್ ಸುರಂಗ ಮಾರ್ಗ ನಿರ್ಮಾಣ ಮಾಡಲು ಡಿಪಿಆರ್ ಗೆ ಸೂಚಿಸಿರುವುದಾಗಿ ಗಡ್ಕರಿ ಹೇಳಿರುವುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.
  • ಕೇಂದ್ರ ಸರ್ಕಾರದ ಚಿಂತನೆಗೆ ಆಕ್ಷೇಪವೂ ವ್ಯಕ್ತವಾಗಿದೆ.
ಬಂಡೀಪುರದಲ್ಲಿ ಮತ್ತೇ ಹೊಸ ಚರ್ಚೆಗೆ ನಾಂದಿ ಹಾಡಿದೆ ಸುರಂಗ ಮಾರ್ಗದ ಮಾತು title=

ಚಾಮರಾಜನಗರ: ರಾತ್ರಿ ಸಂಚಾರದ ಬಗ್ಗೆ ಸದಾ ಸುದ್ದಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಮತ್ತೇ ಹೊಸ ಚರ್ಚೆಗೆ ನಾಂದಿ ಹಾಡಿದೆ‌.

ಹೌದು..., ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ತೆರವಿಗೆ ಸುರಂಗ ಮಾರ್ಗ ನಿರ್ಮಾಣದ ಚಿಂತನೆ ಕೇಂದ್ರ ಸರ್ಕಾರ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟಿದ್ದಾರೆ.

ಕೇರಳ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಮತ್ತು ನಿತಿನ್ ಗಡ್ಕರಿ ಭೇಟಿ ವೇಳೆ ಸುರಂಗ ಮಾರ್ಗಕ್ಕೆ ಚಿಂತನೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ. ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವಂತೆ ಮನವಿ ಮಾಡಲು ಬ್ರಿಟಾಸ್ ತೆರಳಿದ್ದ ವೇಳೆ 25 ಕಿಮೀ ದೂರದ 6 ಲೇನ್ ಸುರಂಗ ಮಾರ್ಗ ನಿರ್ಮಾಣ ಮಾಡಲು ಡಿಪಿಆರ್ ಗೆ ಸೂಚಿಸಿರುವುದಾಗಿ ಗಡ್ಕರಿ ಹೇಳಿರುವುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಚಿಂತನೆಗೆ ಆಕ್ಷೇಪವೂ ವ್ಯಕ್ತವಾಗಿದೆ.

ಇದನ್ನೂ ಓದಿ- ಮೂರು ಚಿರತೆಗಳ ನಡುವೆ ಭಯಾನಕ ಕಾಳಗ ಕಣ್ತುಂಬಿಕೊಂಡ ಸಫಾರಿಗರು: ವಿಡಿಯೋ ವೈರಲ್

ಪರಿಸರವಾದಿ ಹೂವರ್ ಕಿಡಿ: 
ಬಂಡೀಪುರದಲ್ಲಿ ಹಾದು ಹೋಗಿರುವ ವೈನಾಡು ಹೆದ್ದಾರಿಯನ್ನು ದಿನದ 24 ಗಂಟೆಯೂ ಸಂಚಾರ ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ಮಾಡಬೇಕು ಎಂದು ನ್ಯಾಯಾಲಯವೇ ಅಭಿಪ್ರಾಯ ಹೊರಹಾಕಿತ್ತು. ಈ ನಡುವೆ ಸಚಿವ ಮತ್ತು ಸಂಸದರ ಸ್ಥಾನದಲ್ಲಿ ಇರುವವರು ಯೋಜಿಸಿ ಮಾತನಾಡಬೇಕು. ಸುರಂಗ ಮಾರ್ಗ ಮಾಡಿದರೇ ವನ್ಯಜೀವಿಗಳ ಸಹಜ ಜೀವನಕ್ಕೆ, ನೀರಿನ ಮೂಲಕ್ಕೆ, ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ.‌ 1 ಕಿಮೀ ಸುರಂಗ ಮಾಡುವುದೇ ಕಷ್ಟಸಾಧ್ಯ ಆಗಿರುವಾಗ 25 ಕಿಮೀ ಇವರು ಕಾಡಲ್ಲಿ ಹೇಗೆ ಮಾಡುತ್ತಾರೆ ಎಂದು ಪರಿಸರ ಹೋರಾಟಗಾರ ಜೋಸೆಪ್ ಹೂವರ್  ಪ್ರತಿಕ್ರಿಯೆ ನೀಡಿದ್ದಾರೆ‌.

ಇನ್ನು, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಕೂಡ ಇದರ ಬಗ್ಗೆ ಮಾತನಾಡಿದ್ದು ರಾತ್ರಿ ಸಂಚಾರ ನಿರ್ಬಂಧ ಮುಂದುವರೆದುಕೊಂಡು ಹೋಗಲಿ. ಸರ್ಕಾರ ಮತ್ತು ನ್ಯಾಯಾಲಯ ಏನು ತೀರ್ಮಾನ ಮಾಡಲಿದೆ ಅದನ್ನು ಪಾಲಿಸಬೇಕು.‌ಆದರೆ, ಪರಿಸರ ಪ್ರೇಮಿಯಾಗಿ ಈ ಸುರಂಗ ಮಾರ್ಗಕ್ಕೆ ವಿರೋಧವಿದೆ ಎಂದಿದ್ದಾರೆ.

ಇದನ್ನೂ ಓದಿ- ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ?

ಒಟ್ಟಿನಲ್ಲಿ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಸುರಂಗ ಮಾರ್ಗದ ಚಿಂತನೆ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News