Deepika Padukone: ದೀಪಿಕಾ ಪಡುಕೋಣೆ ಹಾಗೂ ರನವೀರ್ ಸಿಂಗ್ ಜೋಡಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮಗಳಿಗೆ ʻದುವಾʼ ಎಂದು ನಾಮಕರಣ ಕೂಡ ಮಾಡಿದ್ದರು.
Deepika Padukone: ದೀಪಿಕಾ ಪಡುಕೋಣೆ ಹಾಗೂ ರನವೀರ್ ಸಿಂಗ್ ಜೋಡಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಮಗಳಿಗೆ ʻದುವಾʼ ಎಂದು ನಾಮಕರಣ ಕೂಡ ಮಾಡಿದ್ದರು.
ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಬ್ಬರು ಕೂಡ ಇಲ್ಲಿಯವರೆಗೂ ತಮ್ಮ ಮಗಳ ಫೇಸ್ ರಿವೀಲ್ ಮಾಡಿಲ್ಲ. ಆದರೆ ಮಗುವಿಗೆ ಸಂಬಂಧ ಪಟ್ಟ ಫೋಟೋಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ.
ಇತ್ತೀಚೆಗಷ್ಟೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಈವೆಂಟ್ ಒಂದರಲ್ಲಿ ಹಾಜರ್ ಆಗಿದ್ದರು. ಈ ಈವೆಂಟ್ನಲ್ಲಿ ಜೋಡಿ ತಮ್ಮ ಮಗಳು ದುವಾ ಅವರ ಫೋಟೊ ಕ್ಲಿಕ್ಕಿಸಿಕೊಳ್ಳದಂತೆ ಮಾಧ್ಯಮಗಳ ಬಳ ಮನವಿ ಮಾಡಿತ್ತು.
ದಂಪತಿಯ ವಿನಂತಿಗೆ ಒಪ್ಪಿ ಪಾಪ್ಪರಜಿಗಳು ದುವಾ ಅವರ ಫೋಟೋಗಳನ್ನು ಕ್ಲಿಕ್ಕಿಸಲಿಲ್ಲ ಹಾಗೂ ಎಲ್ಲಿಯೂ ಕೂಡ ಫೋಟೋಗಳನ್ನು ಪೋಸ್ಟ್ ಕೂಡ ಮಾಡಲಿಲ್ಲ.
ಈಗಿರುವಾಗ, ನಟಿ ದೀಪಿಕಾ ಪಡುಕೋಣೆ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟಿಹಾಕಿವೆ.
ಈವೆಂಟ್ನಲ್ಲಿ ಪತಿಯ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಹೆರಿಗೆಯ ನಂತರ ದೀಪಿಕಾ ಪಡುಕೋಣೆ ಅವರ ಕಂಪ್ಲೀಟ್ ಲುಕ್ ಚೇಂಜ್ ಆಗಿದೆ. ನಟಿಯನ್ನು ನೋಡಿ ಫ್ಯಾನ್ಸ್ ಇದೀಗ ಶಾಕ್ ಆಗಿದ್ದಾರೆ.
ಸ್ಲಿಮ್ ಟ್ರಿಮ್ ಆಗಿ, ತಮ್ಮ ಬಳಕುವ ಸೊಂಟದ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ್ದ ನಟಿ ದೀಪಿಕಾ ಪಡುಕೋಣೆ ಸದ್ಯ ದಪ್ಪಗಾಗಿದ್ದಾರೆ. ಅವರ ಲುಕ್ ಫುಲ್ ಚೇಂಜ್ ಆಗಿ ಹೋಗಿದೆ.
ನಟಿಯ ಬದಲಾದ ರೂಪವನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದು. ಸದ್ಯ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡಿ ಫೋಟೋಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.