ನವದೆಹಲಿ: ಸಿಬಿಎಸ್ಇ ಮಂಡಳಿ 12 ನೇ ತರಗತಿಯ ಪರೀಕ್ಷೆಗಳಿಗಾಗಿ ವೆಳಾಪಟ್ಟಿ ಬಿಡುಗಡೆ ಮಾಡಿದೆ. ಕರೋನಾ ಪ್ರಕೋಪದ ಹಿನ್ನೆಲೆ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ 12 ನೇ ತರಗತಿಯ ಪರೀಕ್ಷೆಗಳು ಜುಲೈ 1 ರಿಂದ ಜುಲೈ 15 ರ ನಡುವೆ ನಡೆಯಲಿವೆ. ಇವುಗಳ ಜೊತೆಗೆ ಸಿಬಿಎಸ್ಇ 10 ನೇ ತರಗತಿಯ ಈಶಾನ್ಯ ದೆಹಲಿಯ ಪರೀಕ್ಷೆಗಳು ಜುಲೈ 1 ರಿಂದ ಜುಲೈ 15 ರವರೆಗೆ ನಡೆಯಲಿವೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಈ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ, ಸಿಬಿಎಸ್ಇ ಮಂಡಳಿ ಮಾರ್ಚ್ನಲ್ಲಿಯೇ 10 ನೇ ಮತ್ತು 12ನೇ ತರಗತಿಯ ಪರೀಕ್ಷೆಗಳನ್ನುನಿಲ್ಲಿಸಿತ್ತು. ಅದರ ನಂತರ, ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಎರಡನೇ ಲಾಕ್ಡೌನ್ ಸಮಯದಲ್ಲಿ ಹತ್ತನೇ ಮಂಡಳಿಯ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಘೋಷಿಸಿದ್ದರು. ಆದರೆ 12 ನೇ ತರಗತಿಯ ಉಳಿದ 29 ಮುಖ್ಯ ವಿಷಯಗಳಿಗಾಗಿ ಪರೀಕ್ಷೆಗಳು ಇದೀಗ ನಡೆಸಲಾಗುತ್ತಿದೆ.
ಈ ಮುಖ್ಯ ವಿಷಯಗಳು ವಿಶ್ವವಿದ್ಯಾನಿಲಯದಲ್ಲಿ ಪದವಿಪೂರ್ವ ಮಟ್ಟದಲ್ಲಿ ಪ್ರವೇಶವನ್ನು ಖಾತರಿಪಡಿಸುವ ವಿಷಯಗಳಾಗಿವೆ. ಅನೇಕ ವಿಶ್ವವಿದ್ಯಾಲಯಗಳು ಅರ್ಹತೆಯ ಆಧಾರದ ಮೇಲೆ ಪ್ರವೇಶವನ್ನು ತೆಗೆದುಕೊಳ್ಳುತ್ತವೆ, ಅಲ್ಲಿ ಈ ವಿಷಯಗಳ ಅಂಕಗಳು ಕಡ್ಡಾಯವಾಗಿರುತ್ತದೆ. ವೆಳಾಪಟ್ಟಿ ಕೆಳಗಿನಂತಿದೆ.
प्रिय विद्याथिर्यों,
आप सभी से #CBSE की 12वीं की बची हुई परीक्षाओं की डेट शीट साझा कर रहा हूँ।
मैं आप सभी को आगामी परीक्षाओं के लिए हार्दिक शुभकामनाएं देता हूँ।#StaySafe #StudyWell@HRDMinistry @mygovindia @PIBHindi @MIB_Hindi pic.twitter.com/NL2LDiJvh6— Dr Ramesh Pokhriyal Nishank (@DrRPNishank) May 18, 2020
प्रिय विद्याथिर्यों,
आप सभी से #CBSE की 10वीं की बची हुई परीक्षाओं की डेट शीट साझा कर रहा हूँ। ये परीक्षाएं केवल उत्तर पूर्वी दिल्ली के विद्यार्थियों के लिए होंगी।
मैं आप सभी को आगामी परीक्षाओं के लिए हार्दिक शुभकामनाएं देता हूँ।
All the best 👍#StaySafe #StudyWell pic.twitter.com/iEtJ9vgWXX— Dr Ramesh Pokhriyal Nishank (@DrRPNishank) May 18, 2020
ಸಿಬಿಎಸ್ಇ ಈಗಾಗಲೇ ದೇಶಾದ್ಯಂತ ಎಲ್ಲಿಯೂ ಕೂಡ 10 ನೇ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ತಿಳಿಸಿತ್ತು. ಕೇವಲ ಈಶಾನ್ಯ ದೆಹಲಿಯ ವಿದ್ಯಾರ್ಥಿಗಳ ಉಳಿದ ವಿಷಯಗಳ ಪರೀಕ್ಷೆಗಳನ್ನು ಮಾತ್ರ ನಡೆಸಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ ಸಿಬಿಎಸ್ಇ ಈಗಾಗಲೇ ನಡೆಸಿರುವ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸ ಈಗಾಗಲೇ ಆರಂಭಿಸಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 50 ದಿನಗಳ ಕಾಲಾವಕಾಶ ಬೇಕಾಗಲಿದೆ. ಈ ಕುರಿತು ಮಾಹಿತಿ ನೀಡಿದ್ದ ಡಾ. ನಿಶಾಂಕ್ ಈಗಾಗಲೇ 173 ವಿಶಯಗ ಪರೀಕ್ಷೆ ಮುಕ್ತಾಯಗೊಂಡಿದ್ದು, 29 ವಿಷಯಗಳ ಪರೀಕ್ಷೆಗಳು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದ್ದರು. ಸದ್ಯ 173 ವಿಷಯಗಳ ಸುಮಾರು 1.5 ಕೋಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಗೃಹ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಮೌಲ್ಯಮಾಪನ ಪ್ರಕ್ತಿಯೇಗಾಗಿ ಸಿಬಿಎಸ್ಇ ಈಗಾಗಲೇ ಸುಮಾರು 3000 ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳಾಗಿ ಗುರುತಿಸಿದೆ. ಈಗ ಈ ಉತ್ತರ ಪತ್ರಿಕೆಗಳನ್ನು 3000 ಮೌಲ್ಯಮಾಪನ ಕೇಂದ್ರಗಳಿಂದ ಶಿಕ್ಷಕರ ಮನೆಗಳಿಗೆ ಕಳುಹಿಸಲಾಗುತ್ತಿದ್ದು, ನಂತರ ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ.