100% ನಿಮ್ಮ ಕೈಯಲ್ಲಿ ಆಗಲ್ಲ..!! ಆದ್ರೂ... ಈ ಚಿತ್ರದಲ್ಲಿ ಎಷ್ಟು ಪ್ರಾಣಿಗಳಿವೆ.. ಥಟ್‌ ಅಂತ ಹೇಳುವಿರಾ..?

Optical illusion challenge : ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿರುವ ಒಗಟನ್ನು ಬಿಡಿಸಲು ಜನರು ಒದ್ದಾಡುತ್ತಿದ್ದಾರೆ. ಹಾಗಿದ್ರೆ ಈ ಪೋಟೋದಲ್ಲಿ ಎಷ್ಟು ಪ್ರಾಣಿಗಳಿಗೆ ಅಂತ ನೀವು ಕೇವಲ 8 ಸೆಕೆಂಡ್ ಗಳಲ್ಲಿ ಹುಡುಕಬಲ್ಲಿರಾ..?

Written by - Krishna N K | Last Updated : Dec 19, 2024, 03:18 PM IST
    • ಈ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿರುವ ಒಗಟನ್ನು ಬಿಡಿಸಲು ಜನರು ಒದ್ದಾಡುತ್ತಿದ್ದಾರೆ.
    • ಆಪ್ಟಿಕಲ್ ಇಲ್ಯೂಷನ್ ಫೋಟೋ ಗೇಮ್ ಮೆದುಳಿನ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
    • ಈ ಒಂದೇ ಫೋಟೋದಲ್ಲಿ ಹಲವು ಪ್ರಾಣಿಗಳಿದ್ದು, ಆ ಪ್ರಾಣಿಗಳನ್ನು ಅತ್ಯಂತ ನಿಖರವಾಗಿ ಹುಡುಕುವುದೇ ಸವಾಲು.
100% ನಿಮ್ಮ ಕೈಯಲ್ಲಿ ಆಗಲ್ಲ..!! ಆದ್ರೂ... ಈ ಚಿತ್ರದಲ್ಲಿ ಎಷ್ಟು ಪ್ರಾಣಿಗಳಿವೆ.. ಥಟ್‌ ಅಂತ ಹೇಳುವಿರಾ..? title=

Free Onlie game : ಆಪ್ಟಿಕಲ್ ಇಲ್ಯೂಷನ್ ಫೋಟೋ ಗೇಮ್ ಮೆದುಳಿನ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇತ್ತೀಚಿಗೆ ಈ ಮೇಲೆ ನೀಡಿರುವ ಆಪ್ಟಿಕಲ್ ಇಲ್ಯೂಷನ್ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಸಂಪೂರ್ಣವಾಗಿ ಭಿನ್ನವಾಗಿದ್ದು, ಇದರಲ್ಲಿರುವ ಒಗಟು ಬಿಡಿಸಲು ಜನರು ಒದ್ದಾಡುತ್ತಿದ್ದಾರೆ..

ಸಾಮಾನ್ಯವಾಗಿ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸಂಖ್ಯೆಗಳನ್ನು ಕಂಡುಹಿಡಿಯುವುದು, ಅಕ್ಷರಗಳನ್ನು ಕಂಡುಹಿಡಿಯುವುದು ಮುಂತಾದ ಸವಾಲುಗಳನ್ನು ಹೊಂದಿರುತ್ತವೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋ ವಿಭಿನ್ನ ಸವಾಲನ್ನು ನೀಡುತ್ತವೆ. ಅದೇನೆಂದರೆ, ಈ ಒಂದೇ ಫೋಟೋದಲ್ಲಿ ಹಲವು ಪ್ರಾಣಿಗಳಿದ್ದು, ಆ ಪ್ರಾಣಿಗಳನ್ನು ಅತ್ಯಂತ ನಿಖರವಾಗಿ ಹುಡುಕುವುದೇ ಸವಾಲು. 

ಇದನ್ನೂ ಓದಿ:ಒಂದು ಕಾಲದಲ್ಲಿ ಬೈಕ್‌ ಮೆಕ್ಯಾನಿಕ್‌.. ಓದಿದ್ದು ಬರೀ 10ನೇ ಕ್ಲಾಸ್.. ಇಂದು ಒಂದೇ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟ ಈತ! 

ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ಆನೆ ಇದೆ. ಆದರೆ ಫೋಟೋದಲ್ಲಿ ಆನೆ ಮಾತ್ರವಲ್ಲ, ಹಲವು ಪ್ರಾಣಿಗಳೂ ಇವೆ. ಎಷ್ಟು ಪ್ರಾಣಿಗಳಿವೆ ಅಂತ ಹುಡುಕುವುದೇ ಈಗ ನಿಮ್ಮ ಮುಂದಿರುವ ಕೆಲಸ. ಅದು ನೀವು ಕೇವಲ 8 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. 

8 ಸೆಕೆಂಡ್‌ಗಳಲ್ಲಿ ಸರಿಯಾದ ಉತ್ತರ ಕಂಡುಹಿಡಿಯುವ ಜನರು ತುಂಬಾ ತೀಕ್ಷ್ಣವಾದ ಮೆದುಳು ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ ಅಂತ ಅರ್ಥ. ಆದ್ದರಿಂದ, ನಿಮ್ಮನ್ನು ಪರೀಕ್ಷಿಸಿ ಮತ್ತು ನಿಮ್ಮ ಮೆದುಳು ಹಾಗೂ ಬುದ್ಧಿವಂತಿಕೆಯು ಚುರುಕಾಗಿದೆಯೇ ಎಂದು ನೋಡಿಕೊಳ್ಳಿ.

ಇದನ್ನೂ ಓದಿ:"ರಕ್ತ ಕಾಶ್ಮೀರ" ಚಿತ್ರದಲ್ಲಿ ಉಗ್ರಗಾಮಿಗಳನ್ನು ಮಟ್ಟಹಾಕಿದ‌ ನಾಯಕ - ನಾಯಕಿ

ಕೊಟ್ಟಿರುವ 8 ಸೆಕೆಂಡ್‌ಗಳಲ್ಲಿ ಚಿತ್ರದಲ್ಲಿ ಅಡಗಿರುವ ಪ್ರಾಣಿಗಳನ್ನು ನೀವು ಹುಡುಕಲಾಗದಿದ್ದರೆ ಚಿಂತಿಸಬೇಡಿ. ಉತ್ತರಗಳು ಇಲ್ಲಿವೆ... ಮೊದಲ ನೋಟದಲ್ಲಿ, ಫೋಟೋ ಕಪ್ಪು ಆನೆಯಂತೆ ಕಾಣುತ್ತದೆ. ನೀವು ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೀವು ಆನೆಯೊಳಗೆ ಕತ್ತೆಯನ್ನು ನೋಡುತ್ತೀರಿ. ಆ ಕತ್ತೆಯೊಳಗೆ ನಾಯಿ ಮತ್ತು ಆ ನಾಯಿಯೊಳಗೆ ಬೆಕ್ಕು. ಅದೇ ರೀತಿ ಆನೆಯ ತಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೊಂಡಿಲಿನಲ್ಲಿ ಮೀನು, ಬಾಯಲ್ಲಿ ಮೊಸಳೆ, ಕಣ್ಣಲ್ಲಿ ಚಿಕ್ಕ ಮೀನು. ಅಂತಿಮವಾಗಿ, ನೀವು ಆನೆಯ ಬಾಲವನ್ನು ಹತ್ತಿರದಿಂದ ನೋಡಿದರೆ, ಅದರಲ್ಲಿ ಹಾವು ಇದೆ ಎಂದು ನೀವು ನೋಡುತ್ತೀರಿ.

ಉತ್ತರ :

No description available.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News