Hair care tips : ಆಯುರ್ವೇದದಲ್ಲಿ ಕೂದಲಿನ ಆರೈಕೆಗಾಗಿ ಕೆಲವು ನೈಸರ್ಗಿಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಇಂದು ನಾವು ಕೆಲವು ಆಯುರ್ವೇದ ಕೂದಲಿನ ಎಣ್ಣೆಗಳ ಬಗ್ಗೆ ತಿಳಿದುಕೊಳ್ಳೋಣ. ಈ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತವೆ.. ಅಷ್ಟೇ ಅಲ್ಲ, ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು..
ಸೊಂಟದವರೆಗೆ ಉದ್ದ ಮತ್ತು ಕಪ್ಪು ಹೊಳೆಯುವ ಕೂದಲು ಪ್ರತಿಯೊಬ್ಬ ಹುಡುಗಿಯ ಕನಸು. ಆದರೆ ಮಾಲಿನ್ಯ ಮತ್ತು ಕಳಪೆ ಆಹಾರ ಸೇವನೆಯಿಂದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಸ್ಥಿತಿಯಲ್ಲಿ ಕೂದಲು ಉದ್ದವಾಗಿ ಬೆಳೆಯುವುದಿಲ್ಲ, ಹೊಳಪು ಕಳೆದುಕೊಳ್ಳುತ್ತವೆ, ಕ್ರಮೇಣ ಉದುರಲು ಪ್ರಾರಂಭಿಸುತ್ತದೆ. ಆಯುರ್ವೇದವು ಕೂದಲಿನ ಆರೈಕೆಗಾಗಿ ಕೆಲವು ನೈಸರ್ಗಿಕ ಪರಿಹಾರಗಳನ್ನು ಉಲ್ಲೇಖಿಸುತ್ತದೆ. ಬನ್ನಿ ಕೆಲವು ಆಯುರ್ವೇದ ಕೂದಲಿನ ತೈಲಗಳ ಬಗ್ಗೆ ತಿಳಿದುಕೊಳ್ಳೋಣ..
ಭೃಂಗರಾಜ್ : ಭೃಂಗರಾಜ ಎಲ್ಲಾ ಗಿಡಮೂಲಿಕೆಗಳ ರಾಜ. ಭೃಂಗರಾಜ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕೂದಲು ಬಲಗೊಳ್ಳುತ್ತದೆ. ಭೃಂಗರಾಜ್‌ನಲ್ಲಿರುವ ವಸ್ತುವು ಕೂದಲಿನ ಬೇರುಗಳನ್ನು ಬಲಪಡಿಸುತ್ತವೆ. ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಆಮ್ಲಾ ಎಣ್ಣೆ : ಆಮ್ಲಾ ಎಣ್ಣೆಯು ಉದ್ದ ಮತ್ತು ಹೊಳೆಯುವ ಕೂದಲಿಗೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ. ಆಮ್ಲಾವು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ಕೂದಲನ್ನು ಬಲಪಡಿಸುತ್ತದೆ. ಆಮ್ಲಾ ಎಣ್ಣೆಯನ್ನು ಬಳಸುವುದರಿಂದ ಕೂದಲಿನ ಬಣ್ಣವೂ ಕಪ್ಪಾಗುತ್ತದೆ ಮತ್ತು ಹೊಳಪು ಹೆಚ್ಚುತ್ತದೆ.
ಬ್ರಾಹ್ಮಿ ಎಣ್ಣೆ : ಕೂದಲಿನ ಆರೈಕೆಗಾಗಿ ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಸಹ ಪ್ರಯೋಜನಕಾರಿ. ಬ್ರಾಹ್ಮಿ ಎಣ್ಣೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ಕೂದಲಿಗೆ ಒಳಗಿನಿಂದ ಪೋಷಣೆ ನೀಡುತ್ತದೆ ಮತ್ತು ಒಣಗುವುದನ್ನು ತಡೆಯುತ್ತದೆ. ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಕೂದಲು ಬಲಗೊಳ್ಳುತ್ತದೆ ಹಾಗೂ ಉದುರುವುದು ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಬೇವಿನ ಎಣ್ಣೆ : ಬೇವಿನ ಎಣ್ಣೆ ಕೂದಲು ಉದ್ದ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಈ ಎಣ್ಣೆಯನ್ನು ಬಳಸುವುದರಿಂದ ತಲೆಹೊಟ್ಟು ಮತ್ತು ತುರಿಕೆ ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ. ಇದರ ಆ್ಯಂಟಿ ಫಂಗಲ್ ಗುಣಲಕ್ಷಣಗಳು ತಲೆಹೊಟ್ಟು ನಿವಾರಿಸುತ್ತದೆ, ನೆತ್ತಿಯ ಸಮಸ್ಯೆಗಳನ್ನು ಸಹ ದೂರ ಮಾಡುತ್ತವೆ..
ಕ್ಯಾಸ್ಟರ್ ಆಯಿಲ್ : ಕ್ಯಾಸ್ಟರ್ ಆಯಿಲ್ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ಕೂದಲನ್ನು ಉದ್ದ ಮತ್ತು ಕಪ್ಪು ಮಾಡುತ್ತದೆ. ಈ ಎಣ್ಣೆಯು ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಅಲ್ಲದೆ, ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಇದನ್ನು ಖಚಿತಪಡಿಸುವುದಿಲ್ಲ.)