Niharika Konidela viral song : ಮೆಗಾ ಕುಟುಂಬದ ಮಗಳು ನಿಹಾರಿಕಾ ಡಿವೋರ್ಸ್ ಬೆನ್ನಲ್ಲೆ ಸಖತ್ ಹಾಟ್ ಅವತಾರ ತಾಳಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುಂದರಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ... ನಿಹಾರಿಕಾ ಬೋಲ್ಡ್ ಅವತಾರ ನೋಡಿ ಮೆಗಾ ಫ್ಯಾನ್ಸ್ ಬೇಸರಗೊಂಡಿದ್ದಾರೆ..
ಟಾಲಿವುಡ್‌ನಲ್ಲಿ ಮೆಗಾ ಕುಟುಂಬದ ಹೀರೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.. ತೆಲುಗು ಸಿನಿರಂಗದಲ್ಲಿ ಮೆಗಾ ಕುಟುಂಬಕ್ಕೆ ವಿಶೇಷ ಸ್ಥಾನವಿದೆ ಅಂದ್ರೆ ತಪ್ಪಾಗಲಾರದು.
ಈ ಹಿಂದೆ ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಸ್ಥಾಪಿಸಿ, ಜನಸೇವೆ ಮುಂದಾಗಿದ್ದರು. ಸಚಿವರಾಗಿಯೂ ಕೆಲಸ ಮಾಡಿದರು. ಅದೇ ರೀತಿ ಇದೀಗ ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ನಾಗಬಾಬು ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ ಎಂದು ತಿಳಿದುಬಂದಿದೆ.
ತೆಲುಗು ರಾಜ್ಯಗಳಲ್ಲಿ ಮೆಗಾ ಕುಟುಂಬಕ್ಕೆ ಸಾಕಷ್ಟು ಅಭಿಮಾನಿ ಬಳಗ ಇದೆ.. ಈ ಕುಟುಂಬವೂ ಅಷ್ಟೇ ಅಭಿಮಾನಿಗಳ ಕಷ್ಟಕ್ಕೆ ಸದಾ ಮಿಡಿಯುತ್ತದೆ.. ಎಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಸಹ ಮೆಗಾ ಹೀರೋಗಳು ಅಲ್ಲಿ ಇದ್ದು, ತಮ್ಮ ಕೈಲಾದಷ್ಟು ಸಹಾರ ಮಾಡುತ್ತಾರೆ..
ಇವುಗಳ ನಡುವೆ ಇತ್ತೀಚಿಗೆ ಡಿವೋರ್ಸ್ ಪಡೆದು ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಿಹಾರಿಕಾ ವಿಡಿಯೋ ಒಂದು ಸಖತ್ ಸೌಂಡ್ ಮಾಡುತ್ತಿದೆ.. ಏಕಾಏಕಿ ಹಸಿಬಿಸಿ ಪಾತ್ರದಲ್ಲಿ ಕಾಣಿಸಿಕೊಂಡ ನಿಹಾರಿಕ ನಡೆ ಮೆಗಾ ಅಭಿಮಾನಿಗಳಿಗೆ ಬೇಸರ ತಂದಿದೆ..
ಮಲಯಾಳಂನ ʼಮದ್ರಾಸಕಾರನ್ʼ ಚಿತ್ರದಲ್ಲಿ ನಿಹಾರಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೇನ್ ನಿಗಮ್ ನಟನೆಯ ಈ ಚಿತ್ರವನ್ನು ವಾಲಿ ಮೋಹನ್ ದಾಸ್ ನಿರ್ದೇಶಿಸಿದ್ದಾರೆ..
ಇತ್ತೀಚಿಗೆ ಈ ಚಿತ್ರದ ʼಕಾದಲ್ ಸದುಗುಡುʼ ಎಂಬ ಹಾಡು ಬಿಡುಗಡೆಯಾಗಿದ್ದು, ಈ ವಿಡಿಯೋದಲ್ಲಿ ನಿಹಾರಿಕಾ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ.
ಬೆಡ್ ರೂಮ್ ದೃಶ್ಯದಲ್ಲಿ ನಿಹಾರಿಕಾ ಚಿಕ್ಕ ಗೌನ್ ಧರಿಸಿ ಕಾಣಿಸಿಕೊಂಡಿದ್ದು, ಮೆಗಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿಹಾರಿಕಾ ಇಂತಹ ಪಾತ್ರಗಳಲ್ಲಿ ನಟಿಸಿ ಮೆಗಾ ಫ್ಯಾಮಿಲಿ ಖ್ಯಾತಿ ಹಾಳು ಮಾಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ನಿಹಾರಿಕಾ ಆ್ಯಂಕರ್ ಆಗಿ ಹಲವು ವೆಬ್ ಸಿರೀಸ್ ಮತ್ತು ಸಿನಿಮಾಗಳನ್ನು ಮಾಡಿದ್ದಾರೆ. ಸಿನಿಮಾಗಳ ಜೊತೆ ನಿರ್ಮಾಪಕಿಯಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.. ಸಧ್ಯ ಟ್ರೋಲ್ ಕುರಿತು ಮೆಗಾ ಪುತ್ರಿ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಅಂತ ಕಾಯ್ದು ನೋಡಬೇಕಿದೆ..