ನವದೆಹಲಿ:ವಿತ್ತೀಯ ಬಲದಲ್ಲಿ ಅಮೇರಿಕಾ ಹಾಗೂ ಯುರೋಪ್ ನ ಸೆಂಟ್ರಲ್ ಬ್ಯಾಂಕ್ ಗಳಿಗಿಂತ ಹಿಂದೆ ಇದ್ದರೂ ಕೂಡ ಜನಪ್ರೀಯತೆಯ ದೃಷ್ಟಿಯಿಂದ Twitterನಲ್ಲಿ ಜನಪ್ರೀಯ ಕೇಂದ್ರೀಯ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಕೊವಿಡ್ 19 ಪ್ರಕೋಪ ಮತ್ತು ಸಂಕಷ್ಟದ ಇಂದಿನ ಸಮಯದಲ್ಲಿ ಕೊರೊನಾ ವೈರಸ್ ಕುರಿತು ಸೂಚನೆಗಳ ಪ್ರಸಾರಕ್ಕೆ ಟ್ವಿಟ್ಟರ್ ಒಂದು ಪ್ರಭಾವಿ ಮಾಧ್ಯಮವಾಗಿ ಹೊರಹೊಮ್ಮಿದೆ. ಇದೆ ಕಾರಣದಿಂದ ಎಲ್ಲ ದೇಶಗಳ ಕೇಂದ್ರೀಯ ಬ್ಯಾಂಕ್ ಗಳು ಟ್ವಿಟ್ಟರ್ ಪ್ಲಾಟ್ಫಾರ್ಮ್ ಮೇಲೆ ಭಾರಿ ಸಕ್ರೀಯವಾಗಿವೆ. ಸುಮಾರು 85 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಅದರ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಟ್ವಿಟ್ಟರ್ ಪ್ಲಾಟ್ ಫಾರ್ಮ್ ಮೇಲೆ ವಿಭಿನ್ನ ಖಾತೆಗಳಿವೆ. ವಿಶ್ವದ ಎಲ್ಲ ಕೇಂದ್ರೀಯ ಬ್ಯಾಂಕ್ ಗಳು ಟ್ವಿಟ್ಟರ್ ಮೇಲೆ ಹೊಂದಿರುವ ಖಾತೆಗಳ ವಿಶ್ಲೇಷಣೆ ನಡೆಸಿದಾಗ, ಇತರೆ ದೇಶಗಳ ಬ್ಯಾಂಕ್ ಗಳ ತುಲನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅತಿ ಹೆಚ್ಚು ಫಾಲೋವರ್ಸ್ ಗಳನ್ನೂ ಹೊಂದಿರುವುದು ಗಮನಕ್ಕೆ ಬಂದಿದೆ. ಗುರುವಾರ ಬೆಳಿಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಟ್ವಿಟ್ಟರ್ ಹ್ಯಾಂಡಲ್ ಮೇಲೆ ಫಾಲ್ಲೋವೆರ್ಸ್ ಗಳ ಸಂಖ್ಯೆ 45 ಲಕ್ಷದಷ್ಟಿತ್ತು.
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ಕೇವಲ ಏಪ್ರಿಲ್ 20ಕ್ಕೆ RBI ಟ್ವಿಟ್ಟರ್ ಹ್ಯಾಂಡಲ್ ಜೊತೆಗೆ 1.31 ಲಕ್ಷ ಹೊಸ ಫಾಲ್ಲೋವೆರ್ಸ್ ಗಳು ಸೇರಿಕೊಂಡಿದ್ದಾರೆ. ಸದ್ಯ ನಡೆಸಲಾಗುತ್ತಿರುವ ಅಭಿಯಾನದ ಕಾರಣ RBI ಹಿಂಬಾಲಕರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿದೆ. ಮಾರ್ಚ್ 2019 ರ ಹೋಲಿಕೆಯಲ್ಲಿ RBI ಹಿಂಬಾಲಕರ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. ಅಂದರೆ, 3,42,000ರಷ್ಟಿದ್ದ ಹಿಂಬಾಲಕರ ಸಂಖ್ಯೆ 7,50,000ಕ್ಕೆ ಬಂದು ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವರಿ 2012ರಲ್ಲಿ RBIನ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನಂತರ ಎರಡನೇ ಸ್ಥಾನದಲ್ಲಿ ದಕ್ಷಿಣ ಏಷ್ಯಾ ದೇಶವಾಗಿರುವ ಇಂಡೊನೆಷ್ಯಾದ 'ಬ್ಯಾಂಕ್ ಆಫ್ ಇಂಡೊನೆಷ್ಯಾ' ಇದೆ. ಈ ಬ್ಯಾಂಕ್ ಗೆ ಸುಮಾರು 7.11 ಲಕ್ಷ ಹಿಂಬಾಲಕರಿದ್ದಾರೆ. ಮೂರನೇ ಸ್ಥಾನದಲ್ಲಿ ಬ್ಯಾಂಕ್ ಡಿ ಮೆಕ್ಸಿಕೋ ಇದೆ. ಈ ಬ್ಯಾಂಕ್ ಗೆ 7.11 ಲಕ್ಷ ಹಿಂಬಾಲಕರಿದ್ದಾರೆ.