Shahjahan and Mumtaz: ಪ್ರೀತಿಯಲ್ಲಿ ಅಚ್ಚರಿ ಮೂಡುವಂತದ್ದು ಏನು ಇಲ್ಲಾ? ಆದರೆ ಕಣ್ಣಿಗೆ ಕಾಣಸದೆ ಇರುವ ಪ್ರಪಂಚವೇ ಈ ಪ್ರೀತಿ.ತಾನಾಗಿಯೆ ಪ್ರತಿಯೊಂದು ದಾರಿಯನ್ನಾ ತೋರಿಸಿಕೊಡುತ್ತದೆ. ಅವುಗಳಲ್ಲಿ ಷಹಜಹಾನ್ ಹಾಗೂ ಮುಮ್ತಾಜ್ ಪ್ರೀತಿ ಕೂಡ ಒಂದು. ಇವರ ಸುಂದರ ಪ್ರೀತಿಯ ಪಯನದ ಕುರಿತು ತಿಳಿಯಲು ಮುಂದೆ ಓದಿ...
ಲವ್ , ದಿಲ್ , ಪ್ರೇಮಂ , ಪ್ರೀತಿ -ಪ್ರೇಮ ಶುರು ಹೇಗೆ ಅನ್ನುವ ಸತ್ಯ ಇತಿಹಾಸಗಳಲ್ಲಿ ನೋಡಿದರೆ ಇದು ಹೊಸದು ಅಂತಾ ಏನಿಲ್ಲಾ.ಆದರೆ ಪ್ರೀತಿ ಎಂದ ಕೂಡಲೆ ನಮಗೆ ಕ್ಷಣಾರ್ಧದಲ್ಲಿ ನೆನಪಾಗೋದು ಅಂದ್ರೇ ಶಿವ-ಪಾರ್ವತಿ , ಆಕೆ ತನ್ನ ಪತಿಗಾಗಿ ಅಗ್ನಿಗೆ ಆಹುತಿಯಾಗಲು ಸಿದ್ಧವಾದ ಶಿವ-ಪಾರ್ವತಿ , ಈ ಭೂಮಿಗೆ ಪ್ರೀತಿ ಅನ್ನೋ ಸತ್ಯಾನಾ ಹೇಳಿಕೊಟ್ಟೋರು ಇವರೆʻ ಅಂತಾ ಹೇಳಬಹುದು . ಆ ಪ್ರೀತಿ ಹೇಗೆ ನಿಷ್ಕಲ್ಮಶವಾಗಿ ಸ್ವಾರ್ಥವಾಗಿರದೆ ಹೇಗೆ ಪ್ರೀತಿ ಮತ್ತು ಭಕ್ತಿಯಾ ನಡುವಿನ ಸತ್ಯಾಂಶವನ್ನ ತಿಳಿಸಿ ಕೊಟ್ಟೋರು ರಾಧ-ಕೃಷ್ಣ . ಯಾಕೆ ಅಂದ್ರೇ ಪ್ರೀತಿ ಆತ್ಮೀಕ ಶುದ್ಧತೆಯನ್ನು ಹೊಂದಿರಬೇಕು , ಅಂತಾ ಜಗತ್ತಿಗೆ ಪ್ರೀತಿಯಲ್ಲಿ ನಡೆಯುವ ಹಾದಿಯನ್ನ ತಿಳಿಸಿಕೊಟ್ಟಿದ್ದಾರೆ. ಈ ಜಗತ್ತಲ್ಲಿ ಪ್ರೀತಿನಾ ತಿಳಿಸೋಕೆ , ಅಳಿಸೋಕೆ ಯಾರ್ ಯಾರೋ ಬಂದರು ಸಹಾ , ಆದ್ರೇ ಯಾರು ಆ ಪ್ರೀತಿನಾ ಸೋಲಿಸೋಕೆ ಆಗಿಲ್ಲ ಅಂತಾನೆ ಹೇಳಬಹುದು .
ಹೀಗೆ ಅಂತಾದೇ ಕೆಲವು ಪ್ರೀತಿಗಳೂ ಜನ್ಮತಾಳಿವೆ ಎಂದೇ ಹೇಳಬಹುದು .ಅವುಗಳಲ್ಲಿ ರೋಮಿಯೋ-ಜೂಲಿಯೆಟ್, ಸಲೀಂ-ಅನಾರ್ಕಲಿ, ದುಷ್ಯಂತ-ಶಾಕುಂತಲೆ..ಹೀಗೆ ಅತ್ಯಂತ ಆಶ್ಚರ್ಯಕರ ಪ್ರೀತಿಗಳಲ್ಲಿ ಷಹಜಹಾನ್-ಮುಮ್ತಾಜ್ ಎಂಬ ಅಪೂರ್ವ ಪ್ರೇಮ ಸಂಗಮ ಒಂದಾಗಿದೆ.
ತನ್ನ ಪ್ರೀತಿ ಎಷ್ಟು ಪ್ರಾವಿತ್ರಯತೆಗೆ ತಾಜ್ ಮಹಲ್ . ತಾಜ್ ಮಹಲ್ ಎಂಬುದು ಈಗಾ ವಿಶ್ವದ ಅತ್ಯಂತ ದೊಡ್ಡ ಅದ್ಬುತಗಳಲ್ಲಿ ಇದು ಸಹ ಒಂದಾಗಿದೆ . ಹೇಗೆ ತನ್ನ ಪ್ರೀತಿ ಆರಂಭವಾಯಿತು..? ಅವರ ಪ್ರೇಮಕಥೆಯಲ್ಲಿ ಹೃದಯ ಸ್ಪರ್ಶವಿಚಾರಗಳೇನು ಅನ್ನೋ ಸತ್ಯನಾ ನೋಡ್ಕೊಂಡು ಹೋಗೋಣಾ....
ಭಾರತವನ್ನ ಸಂಪೂರ್ಣವಾಗಿ ಆಳುತ್ತಿದ್ದ ಮೊಘಲ್ ಸಾಮ್ರಾಜ್ಯದ ಸುಲ್ತಾನ ಷಜಹಾನ್ ಎಲ್ಲಿಗೂ ಸೋಲೆ ಇಲ್ಲದವಾನಾತ ಈತಾ ಪ್ರೀತಿಗೆ ಸೋತಾ ಎಂದೇ ಹೇಳಬಹುದು.
ಒಂದು ದಿನ ಆಗ್ರಾದ ಮೀನಾ ಬಜಾರ್ನಲ್ಲಿ ಹೋಗುತ್ತಿರುವಾಗ ಆಕೆಯನ್ನು ಮೊದಲ ನೋಟದಲ್ಲೇ ಕಂಡು ಮನಸೋತಿದನು. ಕಾಂತಿಗೆ ಕತ್ತಿಯಂತೆ ಹೊಳೆಯುತ್ತಿರುವ ಕಣ್ಣುಗಳು, ಆಕೆ ಧರಿಸಿರುವ ಮಣಿಗಳು ಹಾಗೂ ತನ್ನ ಉಡುಗೆ ತೊಡುಗೆಗಳಲ್ಲಿ ಆಕರ್ಷಿಸುತ್ತಿರುವ ರೇಷ್ಮೆಸೀರೆ ನಿಜಕ್ಕೂ ಬೆರಗಾದನು . ಆದರೂ ಅಷ್ಟು ಜನರ ನಡುವೆ ಸಂತೆ ಯಲ್ಲಿ ಅವಳ ಲಾಲನೆ ಪಾಲನೆ , ಸಂತೈಸುವಿಕೆ ಷಜಹಾನ್ಗೆ ಒಂದು ಕ್ಷಣ ಅಚ್ಚರಿಯಾಗಿ ಸ್ತಬ್ಧವಂಚಿತನಾದನು.
ಮೊದಲನೋಟದಲ್ಲಿ ಆರಂಭವಾದ ಈ ಪ್ರೇಮವು ಸರಿಸುಮಾರು ಐದು ವರ್ಷಗಳಕಾಲ ಆಕೆಯಾನ್ನ ಹಿಂಬಾಲಿಸುತ್ತಿದ್ದನು. ಕೊನೆಗೆ ಮುಮ್ತಾಜ್ ಮತ್ತು ಷಹಜಹಾನ್ ಇಬ್ಬರು ನಿಶ್ಚಿತಾರ್ಥ ̆೧೬೦೭ ರಲ್ಲಿ ಕೂಡಿಬಂದಿತು . ಆದರೇ ಇವರ ಈ ಭಾಂಧವ್ಯಕ್ಕೆ ವಿವಾಹದ ದಿನಗಳೆ ಗೋಚರವಾಗದಂತಾಯಿತು . ದುರಾದೃಷ್ಟವಶತ್ಅವರಿಗೆ ಐದು ವರ್ಷಗಳಕಾಲ ಕಾಯಬೇಕಾಗಿತ್ತು ........
ಸಾಮ್ರಾಜ್ಯಕ್ಕಾಗಿ ಆತನು " ಕದರಿ ಬೇಗಂ" ಅನ್ನುವ ಯುವತಿಯನ್ನ ವಿವಾಹವಾಗುತ್ತಾನೆ , ಹಾಗೆಯೇ ಇನ್ನು ಹಲವರನ್ನ ವಿವಾಹಗೊಂಡು ಮರಳಿ ಮುಮ್ತಾಜ್ ನ ವಿವಾಹ ಮಾಡಿಕೊಳ್ಳುತ್ತಾನೆ . ಕೊನೆಗೆ ತಾನು ಇಷ್ಟಪಟ್ಟ ಯುವತಿಯನ್ನ ಮದುವೆ ಆಗುತ್ತಾನೆ . ಆಕೆಗೆ "ಮುಮ್ತಾಜ್ ಮಹಲ್" ಬೇಗಂ ಎಂದು ಬಿರುದನ್ನ ನೀಡುತ್ತಾನೆ .ಆಗಾ ಷಹಜಹಾನ್ಗೆ 20 , ಮುಮ್ತಾಜ್ಗೆ 19 ವರ್ಷ ವಯಸ್ಸಾಗಿತ್ತು .
ಮುಮ್ತಾಜ್ ಹೆಚ್ಚು ಒಡನಾಡಿಯಾಗಿ ವಿಶ್ವಸಾರ್ಹವಾಗಿ ದಂಗೆಗಳಲ್ಲಿ ಮಿಲಿಟರಿ ಯೋಜನೆಗಳಲ್ಲಿ ಪಾಲ್ಗೋಳ್ಳುತ್ತಿದ್ದಳು.ಇಕೆಯ ಮಹತ್ವ ಷಜಹಾನ್ ಗೆ ಸರಿಸಮಾನಾಗುವಂತೆ ಇತ್ತು .
ಮುಮ್ತಾಜ್ ಮತ್ತು ಷಹಜಹಾನ್ಗೆ 14 ಮಕ್ಕಳನ್ನು ಹೊಂದಿದ್ದು , ಆದರೇ ೧೪ ನೇ ಮಗು ಜನ್ಮ ನೀಡುವ ವೇಳೆಗೆ ಅಧಿಕ ರಕ್ತಸ್ರಾವ ದಿಂದಾಗಿ ಆಕೆಯು ಮರಣಹೊಂದಳು . ಈ ದಾಪಂತ್ಯ ಜೀವನವು ದೀರ್ಘಾವಧಿಯಾಗಿರದೇ ಮಧ್ಯದಲ್ಲಿ ಮುಳುಗುವ ಪರಿಸ್ಥಿತಿ ಕಂಡುಬಂದಿತು . ಅವಳ ಮರಣವು ಹೆಚ್ಚು ಪ್ರಭಾವದಿಂದಾಗಿ ಈ ಒಂದು ಅದ್ಬುತವಾದ ತಾಜ್ ಮಹಲ್ ನಿರ್ಮಾಣಕ್ಕೆ ಪ್ರೇರಣೆಯನ್ನು ನೀಡಿತು ಎಂದು ಹೇಳಬಹುದು .
ನಂತರ ಬೇಸರಗೊಂಡು ಕೊಠಡಿಗೆ ತೆರಳಿ , ತಾನು ಹೆಚ್ಚಾಗಿ ಪ್ರೀತಿಸುತ್ತಿದ್ದಾ ಮುಮ್ತಾಜ್ ಗೆ ಎನನ್ನಾದರೂ ಮಾಡಬೇಕು ಎಂದು ಯೋಚಿಸಿ ಅವಳ ನೆನಪಿಗಾಗಿ ಸಮಾಧಿಯ ಮೇಲೆ ತಾಜ್ ಮಹಲ್ಅನ್ನು ನಿರ್ಮಿಸಿದನು. 1648 ರಲ್ಲಿ ಈ ಸಮಾಧಿಯು ಸಂಪೂರ್ಣಗೊಂಡಿತು . ನಂತರ ಉದ್ಯಾನವನಗಳು , ಮುಳುಗಿದ ಹೂವಿನ ಹಾಸಿಗೆಗಳು ಸೌಂದರ್ಯಕರವಾಗಿ ನಿರ್ಮಾಣವಾಗತೊಡಗಿದವು. ಇದನ್ನು ನಿರ್ಮಿಸಲು 20,000 ಕಾರ್ಮಿಕರು ಭಾಗಿಯಾಗಿದ್ದರು . ಹೀಗೆ ತನ್ನ ಪ್ರೀತಿಯ ಅಜಾಮಾರವನ್ನು ಇಡೀ ಜಗತ್ತನ್ನೇ ಮೆಚ್ಚಿಸುವಂತೇ ಇತಿಹಾಸವನ್ನು ಸೃಷ್ಟಿಸಿದನು.ಇಂದಿಗೂ ಸಹಾ ಭಾರತದ ಆಗ್ರಾದ ಯಮುನಾ ನದಿಯ ದಡದಲ್ಲಿ ನಿರ್ಮಾಣವಾಗಿದ್ದು ಅತಿ ಹೆಚ್ಚಿನ ಪ್ರವಾಸಿಗರು ಸ್ಥಳಕ್ಕೆ ಬಂದು ತನ್ನ ಪ್ರೇಯಸಿಗಾಗಿ ಪಟ್ಟ ಕಷ್ಟಗಳು ಇಂದಿಗೂ ಸಹಾ ತಾಜ್ ಮಹಲ್ ನ ಪ್ರತಿಯೊಂದು ಕಲ್ಲುಗಳು ಸಹಾ ಷಜಹಾನ್ ಮಾತ್ತು ಮುಮ್ತಾಜ್ ನ ನೆನಪುಗಳ ಸ್ಮರಣೀಯವಾಗಿವೆ .
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.