ತಮನ್ನಾ ಭಾಟಿಯಾಗೆ ಕೂಡಿಬಂತು ಕಂಕಣ ಭಾಗ್ಯ..! ಮಿಲ್ಕಿ ಬ್ಯೂಟಿ ಕೈ ಹಿಡಿಯಲಿರುವ ವರ ಯಾರು ಗೊತ್ತಾ..?

Tamannaah Bhatia: ತಮನ್ನಾ ಭಾಟಿಯಾ ಸೌತ್‌ ಸಿನಿಮಾಗಳ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಇದೀಗ ಪ್ಯಾನ್‌ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ, ಅಷ್ಟೆ ಏಕೆ, ಟಾಲಿವುಡ್‌ ಬಾಲಿವುಡ್‌ ಅಂತ ಸಿಕ್ಕಾಪಟ್ಟೆ ಸೌಂಡ ಮಾಡುತ್ತಿದ್ದಾರೆ, ಆದರೆ ಇದೀಗ ಮಿಲ್ಕಿ ಬ್ಯೂಟಿ ಕುರಿತಾದ ಇನ್ಟ್ರೆಸ್ಟಿಂಗ್‌ ಸುದ್ದಿಯೊಂದು ಹೊರ ಬಿದ್ದಿದೆ,. ಏನದು ಇನ್ಟ್ರೆಸ್ಟಿಂಗ್‌ ಸ್ಟೋರಿ? ತಿಳಿಯಲು ಮುಂದೆ ಓದಿ..
 
1 /8

2 /8

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಗೆ 34 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ.  

3 /8

ತಮನ್ನಾ ಭಿಮಾನಿಗಳಂತೂ ನಟಿಯನ್ನು ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಲೇ ಇರುತ್ತಾರೆ, ಅದರಲ್ಲೂ ಇವರ ಡೇಟಿಂಗ್‌ ವಿಚಾರದ ಕುರಿತಂತೂ ಒಂದಲ್ಲಾ ಒಂದು ಸುದ್ದಿ ಹೊರಬರುತ್ತಲೇ ಇರುತ್ತದೆ.  

4 /8

ವಿಜಯ್‌ ವರ್ಮಾ ಹಾಗೂ ತಮನ್ನಾ ಭಾಟಿಯಾ ಇಬ್ಬರು ಕೂಡ ಹಲವು ದಿನಗಳಿಂದ ಡೇಟಿಂಗ್‌ ಮಾಡುತ್ತಿರುವುದು ಗೊತ್ತೇ ಇದೆ. ಆದರೆ ಇಬ್ಬರೂ ಕೂಡ ತಮ್ಮ ಮದುವೆಯ ಕುರಿತು ಎಂದು ಮಾಹಿತಿ ಹಂಚಿಕೊಂಡಿಲ್ಲ, ಆದರೆ ಇದೀಗ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ.  

5 /8

ಈ ಮುಂಚೆ ಪ್ರೀತಿಯಲ್ಲಿ ಸೋತು ನಂಬಿಕೆ ಕಳೆದುಕೊಂಡಿದ್ದ ತಮನ್ನಾ ಅವರಿಗೆ ಮದುವೆಯ ಮೇಲೆ ನಂಬಿಕೆ ಇರಲಿಲ್ಲ, ಇದೇ ಕಾರಣದಿಂದ ಅವರು ಮದುವೆಯನ್ನು ತಳ್ಳಿ ಹಾಕುತ್ತಿದ್ದರು, ಆದರೆ ಇದೀಗ ವಿಜಯ್‌ ವರ್ಮಾ ಅವರ ಜೊತೆ ತಮನ್ನಾ ಭಾಟಿಯ ಮದುವೆಯಾಗಲು ಸಜ್ಜಾಗಿದ್ದಾರೆ.  

6 /8

ಹೌದು, ತಮನ್ನಾ ಭಾಟಿಯಾ ಹಾಗೂ ವಿಜಯ್‌ ವರ್ಮಾ ಮುಂದಿನ ವರ್ಷ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನುವ ವಿಚಾರ ಸದ್ಯ ಬಿ ಟೌನ್‌ನ ಚರ್ಚೆಯ ಹಾಟ್‌ ಟಾಪಿಕ್‌ ಆಗಿದೆ.  

7 /8

ತಮನ್ನಾ ಭಟಿಯಾ ಹಾಗೂ ವಿಜಯ್‌ ವರ್ಮಾ ಇಬ್ಬರೂ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಸದ್ಯ ಕೇಳಿ ಬರುತ್ತಿದ್ದು, ಇದೇ ಕಾರಣದಿಂದಾಗಿ ಇಬ್ಬರು ಜೊತೆಯಲ್ಲಿ ವಾಸ ಮಾಡಲು ಮನೆಯನ್ನು ಹುಡುಕುತ್ತಿದ್ದಾರೆ ಎನ್ನುವ ವಿಚಾರ ಇದೀಗ ಕೇಳಿ ಬಂದಿದೆ.  

8 /8

ಇನ್ನೂ, ಈ ವಿಷಯದ ಕುರಿತು ಈ ಜೋಡಿ ಯಾವುದೇ ಮಾಹಿತಿ ನೀಡಿಲ್ಲವಾದರೂ, ಸುದ್ದಿ ಕೇಳಿ ಅಭಿಮಾನಿಗಳಂತೂ ಫುಲ್‌ ಕುಷ್‌ ಆಗಿದ್ದಾರೆ, ಮಿಲ್ಕಿ ಬ್ಯೂಟಿಯನ್ನು ವಧುವಿನ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.