Viral Video: ರೀಲ್ಸ್‌ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!

Viral Video: ವೈರಲ್ ಆಗಿರೋ ಈ ವಿಡಿಯೊದಲ್ಲಿ ಮೆಟ್ಟಿಲಿನ ಮೇಲೆ ಕುಳಿತು ಯುವತಿಯೊಬ್ಬರು ವಿಡಿಯೋ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆ ಮೆಟ್ಟಿಲುಗಳಿಂದ ಉರುಳಿ ಬೀಳುತ್ತಿರುವಾಗ ಅಲ್ಲೇ ಇದ್ದ ವೃದ್ಧರೊಬ್ಬರು ರಕ್ಷಿಸಲು ಪ್ರಯತ್ನಿಸಿದ್ದಾರೆ.

Written by - Puttaraj K Alur | Last Updated : Nov 18, 2024, 06:45 PM IST
  • ರೀಲ್ಸ್‌ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಯುವತಿ
  • ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌‌ ವೈರಲ್
Viral Video: ರೀಲ್ಸ್‌ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!   title=
ಯುವತಿಯ ರೀಲ್ಸ್‌ ಹುಚ್ಚಾಟ!

Viral Reels Video: ಇಂದು ಅನೇಕರು ರಾತ್ರೋರಾತ್ರಿ ತಾವು ಫೇಮಸ್ ಆಗಬೇಕು ಅಂತಾ ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಬೇಕು ಅಂತಾ ಹಲವರು ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಜಲಪಾತದ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಸಮುದ್ರದ ಬಳಿ ರೀಲ್ಸ್‌ ಮಾಡುವುದು, ಬೆಂಕಿಯ ಜೊತೆಗೆ ಸರಸವಾಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಚಿತ್ರ-ವಿಚಿತ್ರ ರೀಲ್ಸ್‌ ಮಾಡಲು ಪ್ರಯತ್ನಿಸುತ್ತಾರೆ. 

ರೀಲ್ಸ್‌ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡವರು ಅನೇಕರಿದ್ದಾರೆ. ಅದೇ ರೀತಿ ಇತ್ತೀಚೆಗೆ ರೀಲ್ಸ್‌ ಮಾಡಲು ಹೋಗಿ ಯುವತಿಯೊಬ್ಬರು ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಕೆಳಗೆ ಉರುಳು ಬಿದ್ದಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಯುವತಿಯ ರೀಲ್ಸ್‌ ಹುಚ್ಚಾಟಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ಇದನ್ನೂ ಓದಿ: ಮುಂದಿನ 15 ದಿನ ರಾಜ್ಯದ ಎಲ್ಲಾ ಶಾಲೆಗಳು ಬಂದ್‌: ಸೋಮವಾರವೂ ಇರಲ್ಲ ಕ್ಲಾಸ್‌... ದಿಢೀರ್‌ ಆದೇಶ ಹೊರಡಿಸಿದ ರಾಜ್ಯ ಸರ್ಕಾರ!

ವೈರಲ್ ಆಗಿರೋ ಈ ವಿಡಿಯೊದಲ್ಲಿ ಮೆಟ್ಟಿಲಿನ ಮೇಲೆ ಕುಳಿತು ಯುವತಿಯೊಬ್ಬರು ವಿಡಿಯೋ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆ ಮೆಟ್ಟಿಲುಗಳಿಂದ ಉರುಳಿ ಬೀಳುತ್ತಿರುವಾಗ ಅಲ್ಲೇ ಇದ್ದ ವೃದ್ಧರೊಬ್ಬರು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯನ್ನು ಹಿಡಿಯಲು ಅವರಿಗೆ ಆಗಲಿಲ್ಲ. ಕೊನೆಗೆ ಕೆಳಗಿದ್ದ ಮತ್ತೊಬ್ಬ ವ್ಯಕ್ತಿ ಯುವತಿಯನ್ನು ರಕ್ಷಿಸಿದ್ದಾರೆ. ಮೇಲೆದ್ದ ಯುವತಿಗೆ ಮುಜುಗರವಾಗಿದ್ದು, ನಾಚಿಕೆಯಿಂದ ಮುಖವನ್ನು ಮುಚ್ಚಿಕೊಂಡು ನಕ್ಕಿದ್ದಾಳೆ. 

ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಲು, ಖ್ಯಾತಿ ಗಳಿಸಲು ಜನರು ಏನೂ ಬೇಕಾದರೂ ಮಾಡುತ್ತಾರೆ ಅಂತಾ ಟೀಕಿಸಿದ್ದಾರೆ.

ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲಿಯೂ 12 ನೇ ತರಗಗತಿವರೆಗೆ ಆನ್ಲೈನ್ ಕ್ಲಾಸ್ : ತಕ್ಷಣದಿಂದಲೇ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ಆದೇಶ

@ManojSh28986262 ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ʼಇಂತಹ ಅಜಾಗರೂಕ ಕೆಲಸಗಳಿಂದ ಜನರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತವರು ಮಾಡುವ ಕೆಲಸದಿಂದ ಜನರು ನಿಜವಾಗಿಯೂ ಅಪಾಯದಲ್ಲಿರುವವರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆʼ ಅಂತಾ ಈ ವಿಡಿಯೋಗೆ ಕ್ಯಾಪ್ಶನ್‌ ನೀಡಲಾಗಿದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News