Aishwarya Rai Bachchan: ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಮೂಡಿರುವ ಬಿರುಕು ಸರಿಹೋಗಲ್ಲ, ಅವರಿಬ್ಬರೂ ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿ ಎದ್ದಿರುವುದು ಗೊತ್ತೇ ಇದೆ. ಇದೇ ವಿಷಯವಾಗಿ ಸಂಬಂಧ ಹಳಸಲು ಐಶ್ವರ್ಯ ರೈ ಕಾರಣ, ಅಭಿಷೇಕ್ ಬಚ್ಚನ್ ಕಾರಣ ಅಂತಾ ಅವರಿವರು ಅವರವರ ಮೂಗಿನ ನೇರಕ್ಕೆ ಹೇಳುತ್ತಿದ್ದಾರೆ. ಈ ವಿಚ್ಛೇದನ ವದಂತಿಯ ನಡುವೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಐಶ್ವರ್ಯ ರೈ ‘ಎಂಥಾ ಸುಸಂಸ್ಕೃತವಂತೆ?’ಎಂದು ಹೇಳಿದ್ದಾರೆ.
ಇತ್ತೀಚಿಗೆ ಅವಾರ್ಡ್ ಫಂಕ್ಷನ್ ಒಂದರಲ್ಲಿ ಶಿವರಾಜಕುಮಾರ್ ಮತ್ತು ಐಶ್ವರ್ಯ ರೈ ಮುಖಾಮುಖಿಯಾಗುತ್ತಾರೆ. ಆಗ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಳನ್ನು ಶಿವಣ್ಣಗೆ ಪರಿಚಯಿಸುತ್ತಾರೆ. ತಕ್ಷಣವೇ ಆರಾಧ್ಯ, ಶಿವಣ್ಣನ ಕಾಲಿಗೆ ನಮಸ್ಕಾರ ಮಾಡಲು ಮುಂದಾಗುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿತ್ತು. ಆ ಘಟನಾವಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ ಅವರು ಐಶ್ವರ್ಯ ರೈ ಅವರ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ- ಫ್ಯಾನ್ಸ್ಗೆ ಗುಡ್ನ್ಯೂಸ್ ನೀಡಿದ 'ರಾಮಾಚಾರಿ' ನಟಿ ಚಾರು ಉರ್ಫ್ ಮೌನ ಗುಡ್ಡೆಮನೆ..!
ಐಶ್ವರ್ಯ ರೈ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದವರು. ಸೌಂದರ್ಯದಿಂದ ಮಾತ್ರವಲ್ಲದೆ ತಮ್ಮ ಪ್ರತಿಭೆಯಿಂದಲೂ ಗಮನ ಸೆಳೆದವರು. ದಶಕಗಳ ಕಾಲ ಬಾಲಿವುಡ್ ಹೀರೋಯಿನ್ ಆಗಿ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟವರು. ಹಾಗಾಗಿ ಸಹಜವಾಗಿ ಅವರಲ್ಲಿ ಹಮ್ಮು-ಬಿಮ್ಮು ಇರುತ್ತದೆ. ‘ಸೆಲಬ್ರಿಟಿಗಳಲ್ಲಿ ಅಟಿಟ್ಯೂಡ್ ಇರುವುದು ಕಾಮನ್’ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಐಶ್ವರ್ಯ ರೈ ಕೂಡ ಅದೇ ರೀತಿ ಎಂದೇ ಎಲ್ಲರೂ ಯೋಚಿಸಿರುತ್ತಾರೆ. ಆದರೆ ಶಿವಣ್ಣ ಅವರ ಪ್ರಕಾರ ಐಶ್ವರ್ಯ ಆ ರೀತಿ ಅಲ್ಲವಂತೆ.
ವಿಶ್ವಸುಂದರಿಯಾಗಿ ಅಷ್ಟೆಲ್ಲಾ ಹೆಸರು ಮಾಡಿರುವ ಐಶ್ವರ್ಯ ರೈ ಅಷ್ಟೊಂದು ಸಿಂಪಲ್ ಆಗಿರುತ್ತಾರೆ, ಅಷ್ಟೊಂದು ಸುಸಂಕೃತರಾಗಿರುತ್ತಾರೆ ಎಂದು ನಾನು ಅಂದುಕೊಂಡೇ ಇರಲಿಲ್ಲ. ಅವರ ಮಗಳನ್ನು ಪರಿಚಯಿಸಿದಾಗ ಶೇಕ್ ಹ್ಯಾಂಡ್ ಮಾಡಲು ನಾನು ಕೈ ಕೊಡಲು ಹೋದೆ. ಐಶ್ವರ್ಯ ರೈ ಮಗಳು ಕಾಲಿಗೆ ನಮಸ್ಕಾರ ಮಾಡಿಕೊಳ್ಳಲು ಮುಂದಾದಳು. ಆ ಮಗು ಬೆಳವಣಿಗೆ ಮತ್ತು ಸಂಸ್ಕೃತಿ ಬಗ್ಗೆ ನನಗೆ ನಿಜಕ್ಕೂ ಅಚ್ಚರಿಯನ್ನು ಉಂಟುಮಾಡಿತು. ಆ ತಾಯಿಗೆ (ಐಶ್ವರ್ಯ ರೈ) ನಮಸ್ಕಾರ ಹೇಳಬೇಕು ಎಂದು ಶಿವಣ್ಣ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ- ಸಿನಿಮಾ ಇಂಡಸ್ಟ್ರಿಗೆ ಬಂದು 10 ವರ್ಷವಾದ್ರೂ ಒಂದೂ ಹಿಟ್ ಕೊಟ್ಟಿಲ್ಲ, ಆಸ್ತಿ ಮಾತ್ರ 53,800 ಕೋಟಿ..!
ಮಗಳ ನಡತೆ ಮತ್ತು ಸಂಸ್ಕೃತಿಯನ್ನು ತಾಯಿ ಐಶ್ವರ್ಯ ರೈ ಕಾಪಿಟ್ಟು ಕಲಿಸಿಕೊಟ್ಟಿರುವ ಕೊಡುಗೆ ಎಂದು ಬಣ್ಣಿಸಿರುವ ಶಿವಣ್ಣ, ‘ಸೌಂದರ್ಯ ಎನ್ನುವುದು ಐಶ್ವರ್ಯ ರೈ ಮುಖದಲ್ಲಿ ಮಾತ್ರವಲ್ಲ ಅವರ ಹೃದಯದಲ್ಲೂ ಇದೆ. ಅವರ ಗುಣದಲ್ಲೂ ಇದೆ ಅಂತಾ ತೋರಿಸುತ್ತದೆ. ಇದು ನಿಜಕ್ಕೂ ಐಶ್ವರ್ಯ ರೈ ನಮ್ಮವರು, ಮಂಗಳೂರಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಐಶ್ವರ್ಯ ರೈ ಭಾರತದ ಮಟ್ಟದಲ್ಲಿ ಜಗತ್ತಿನ ಮಟ್ಟದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅಷ್ಟು ಬೆಳೆದರೂ ನಮ್ಮ ಸಂಸ್ಕೃತಿಯನ್ನು ಮರೆತಿಲ್ಲ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ’ ಎಂದು ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ