Twitter ಜೊತೆ ಸೇರಿ ಆರೋಗ್ಯ ಸಚಿವಾಲಯ ಜಾರಿಗೊಳಿಸಿದೆ ಈ ಸೇವೆ

ಕರೋನಾಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ಟ್ವಿಟರ್ ಖಾತೆ ಪ್ರಾರಂಭವಾಗಿದೆ. ಭಾರತ ಸರ್ಕಾರ  ಟ್ವಿಟರ್‌ನೊಂದಿಗೆ ಸೇರಿ ಈ ಖಾತೆ  ಪ್ರಾರಂಭಿಸಿದೆ. ಇಲ್ಲಿ ನೀವು ಕರೋನಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದಾಗಿದೆ.

Last Updated : Apr 21, 2020, 08:50 PM IST
Twitter ಜೊತೆ ಸೇರಿ ಆರೋಗ್ಯ ಸಚಿವಾಲಯ ಜಾರಿಗೊಳಿಸಿದೆ ಈ ಸೇವೆ title=

ನವದೆಹಲಿ:  ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್ ಸಹಭಾಗಿತ್ವದಲ್ಲಿ ಭಾರತ ಸರ್ಕಾರ ಟ್ವಿಟರ್ ಹ್ಯಾಂಡಲ್ ಅನ್ನು ಪ್ರಾರಂಭಿಸಿದೆ. ಕರೋನಾ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಈ ಟ್ವಿಟ್ಟರ್ ಹ್ಯಾಂಡಲ್ ಅನ್ನು ಆರಂಭಿಸಿದೆ.

ಈ ಟ್ವಿಟರ್ ಹ್ಯಾಂಡಲ್‌ನ ಹೆಸರು COVID India Seva ಮತ್ತು ಇದನ್ನು ಟ್ವಿಟರ್‌ನ ಸೇವಾ ವೇದಿಕೆಯಡಿಯಲ್ಲಿ ರಚಿಸಲಾಗಿದೆ. 2016 ರಲ್ಲಿ ಭಾರತ ಟ್ವಿಟ್ಟರ್ ಜೊತೆ ಸೇರಿ ಟ್ವಿಟ್ಟರ್ ಸೇವಾ ವೇದಿಕೆಯನ್ನು ಪ್ರಾರಂಭಿಸಿತ್ತು. ಇದೀಗ ಇದೆ ವೇದಿಕೆಯ ಅಡಿ ಕೊರೊನಾ ವೈರಸ್ ಅಪ್ಡೇಟ್ ಗಾಗಿ ಆರೋಗ್ಯ ಇಲಾಖೆ ತನ್ನ ಟ್ವಿಟ್ಟರ್ ವಿಶೇಷ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಿದೆ.

ಒಂದು ವೇಳೆ ನಿಮ್ಮ ಬಳಿ ಕೊರೊನಾಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಇದ್ದಾರೆ ನೀವು ಟ್ವಿಟ್ಟರ್ ನಲ್ಲಿ @CovidIndiaSeva ಬರೆಯುವ ಮೂಲಕ ಅದರ ಉತ್ತರಕ್ಕಾಗಿ ಹುಡುಕಾಟ ನಡೆಸಬಹುದು. ಈ ಅಕೌಂಟ್ ಅನ್ನು ಟ್ಯಾಗ್ ಮಾಡಿ ನೀವು COVID-19 ಗೆ ಸಂಬಂಧಿಸಿದ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಬಹುದು.

ಒಂದುವೇಳೆ ಕೊರೊನಾ ಲಕ್ಷಣಗಳು ಕಂಡುಬಂದರೆ ಅಥವಾ ಕೊರೊನಾ ಲಕ್ಷಣಗಳ ಕುರಿತು ಮಾಹಿತಿ ಪಡೆಯಲು CovidIndiaSeva  ಟ್ವಿಟ್ಟರ್ ಹ್ಯಾಂಡಲ್ ನಿಮಗೆ ಸಹಕರಿಸಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಯಾವ ಯಾವ ಕೆಲಸಗಳನ್ನು ಮಾಡುತ್ತಿದೆ, ಎಷ್ಟು ಪ್ರಕರಣಗಳಿವೆ, ಎಲ್ಲೆಲ್ಲಿ ಟೆಸ್ಟಿಂಗ್ ಸೆಂಟರ್ ಗಲಿವೆ ಅಥವಾ ಮತ್ತೊಮ್ಮೆ ಟೆಸ್ಟ್ ಹೇಗೆ ಮಾಡಿಸಬೇಕು ಈ ರೀತಿಯ ಎಲ್ಲ ಮಾಹಿತಿಗಳು ನಿಮಗೆ ಇಲ್ಲಿ ಸಿಗಲಿವೆ

ಟ್ವಿಟರ್ ಪ್ರಕಾರ, ಕೇವಲ ವಿಶಾಲವಾದ ಪ್ರಷ್ಟ್ನೆಗಳಿಗೆ ಮಾತ್ರ ಇದರಲ್ಲಿ ನಿಮಗೆ ಉತ್ತರ ಸಿಗಲಿವೆ ಎಂದಿದೆ. ಅಂದರೆ ಕರೋನಾಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು. ಈ ಸೇವೆಯಡಿಯಲ್ಲಿ ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲ.

ವಿಶೇಷವೆಂದರೆ, ಫೇಸ್‌ಬುಕ್ ಮೆಸೆಂಜರ್ ಮೂಲಕವೂ ಇದೇ ರೀತಿಯ ಸೇವೆಯನ್ನು ಪ್ರಾರಂಭಿಸಲಾಗಿದೆ. ಮೆಸೆಂಜರ್ನಲ್ಲಿ, ಕರೋನಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು. ಜನರ ಪ್ರಶ್ನೆಗಳಿಗೆ ಇಲ್ಲಿ ಚಾಟ್‌ಬಾಟ್‌ಗಳ ಮೂಲಕ ಉತ್ತರಿಸಲಾಗುತ್ತದೆ.

ಈ ಟ್ವಿಟ್ಟರ್ ಹ್ಯಾಂಡಲ್ ಲಾಂಚ್ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, " ಈ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ತಜ್ಞರು COVID-19 ಗೆ ಸಂಬಂಧಿಸಿದಂತೆ ಅಧಿಕೃತ ಸಾರ್ವಜನಿಕ ಆರೋಗ್ಯ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಇದರಲ್ಲಿ ನೀವೂ ಕೂಡ ನಿಮ್ಮ ಪ್ರಶ್ನೆಗಳನ್ನು ಕೇಳಬಹುದಾಗಿದೆ" ಎಂದು ಬರೆದುಕೊಂಡಿದ್ದಾರೆ. 

Trending News