ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಹಲಿ ಎನ್ಸಿಆರ್ (NCR)ನಲ್ಲಿ ಇಂದೂ ಸಹ ಲಘು ಭೂಕಂಪದ ಅನುಭವವಾಗಿದ್ದು 2.7 ತೀವ್ರತೆ ದಾಖಲಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ ಈಶಾನ್ಯ ದೆಹಲಿಯ ವಾಜೀರಾಬಾದ್ನಲ್ಲಿ ಭಾನುವಾರ ಸಂಭವಿಸಿದ ಭೂಕಂಪದ ಕೇಂದ್ರ ಕಂಡು ಬಂದಿದೆ. ಇಂದೂ ಸಹ ಅದೇ ಕೇಂದ್ರ ಬಿಂದುವಿನಿಂದ ನಡುಕ ಉಂಟಾಗಿದೆ ಎಂದು ತಿಳಿದು ಬಂದಿದೆ.
ವಿಶೇಷವೆಂದರೆ ಭಾನುವಾರ ಸಹ ಅದೇ ಕೇಂದ್ರದಲ್ಲಿ 3.5 ತೀವ್ರತೆಯ ಭೂಕಂಪ ಉಂಟಾಗಿತ್ತು. ಭಯಭೀತರಾದ ಜನ ತಮ್ಮ ಮನೆಗಳಿಂದ ಹೊರಗೆ ಬಂದಿದ್ದರು.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ ಭಾನುವಾರ ಸಂಭವಿಸಿದ ಭೂಕಂಪ (Earthquake)ನವು ಸಂಜೆ 5.45 ಕ್ಕೆ ಈಶಾನ್ಯ ದೆಹಲಿಯ ವಾಜೀರಾಬಾದ್ನಲ್ಲಿ ಕಂಡು ಬಂದಿದೆ. ಜೊತೆಗೆ ದೆಹಲಿಯ ನೆರೆಯ ಪ್ರದೇಶಗಳಾದ ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್ನಲ್ಲೂ ನಡುಕ ಉಂಟಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿ (Delhi)ಯಲ್ಲಿ 2001ರಲ್ಲಿ 3.4 ತೀವ್ರತೆಯ ಭೂಕಂಪ ದಾಖಲಾಗಿದೆ. ಇದಲ್ಲದೆ 2004ರಲ್ಲಿ 2.8 ತೀವ್ರತೆಯ ಭೂಕಂಪ ದಾಖಲಾಗಿದೆ.
ಭೂಕಂಪದ ಸಂದರ್ಭದಲ್ಲಿ ಏನು ಮಾಡಬೇಕು?
ಭೂಕಂಪದಂತಹ ನೈಸರ್ಗಿಕ ವಿಪತ್ತಿನಿಂದ ತಪ್ಪಿಸಿಕೊಳ್ಳುವುದು ಕಷ್ಟ ಮತ್ತು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವು ತಾರ್ಕಿಕ ಕ್ರಿಯೆಗಳನ್ನು ಬಳಸಿಕೊಂಡು ಈ ಸ್ವಾಭಾವಿಕ ಹಾನಿಗಳ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
- ಭೂಕಂಪದ ಸಮಯದಲ್ಲಿ ಎಲಿವೇಟರ್ ಅನ್ನು ಬಳಸಬಾರದು.
- ಹೊರಗೆ ಹೋಗಲು ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ.
- ನೀವು ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ ಓಡುವುದು ಸೂಕ್ತವಲ್ಲ. ಭೂಕಂಪದಿಂದಾಗಿ ಇದು ಬಹಳಷ್ಟು ಪ್ರಭಾವ ಬೀರುತ್ತದೆ.
- ನೀವು ಕಾರು ಅಥವಾ ಯಾವುದೇ ವಾಹನವನ್ನು ಚಾಲನೆ ಮಾಡುತ್ತಿದ್ದರೆ, ಅದನ್ನು ತಕ್ಷಣ ನಿಲ್ಲಿಸಿ.
- ನೀವು ಚಾಲನೆ ಮಾಡುತ್ತಿದ್ದರೆ, ಕಟ್ಟಡ, ಸ್ತಂಭಗಳು, ಫ್ಲೈಓವರ್, ರಸ್ತೆ ಸೇತುವೆಯಿಂದ ದೂರ ಸಾಗಿ ಬಳಿಕ ವಾಹನವನ್ನು ನಿಲ್ಲಿಸಿ.
- ಭೂಕಂಪದ ಅನುಭವವಾದ ತಕ್ಷಣವೇ ಸುರಕ್ಷಿತ ಮತ್ತು ತೆರೆದ ಮೈದಾನದ ಬಳಿ ಸೇರಲು ಪ್ರಯತ್ನಿಸಿ.
- ದೊಡ್ಡ ಕಟ್ಟಡಗಳು, ಮರಗಳು, ವಿದ್ಯುತ್ ಸ್ತಂಭಗಳಿಂದ ದೂರವಿರಿ.