Actress Nagma: ನಗ್ಮಾ ತೆಲುಗಿನಲ್ಲಿ ಟಾಪ್ ಸ್ಟಾರ್ಗಳ ಜೊತೆ ನಟಿಸಿದ್ದರು. ಚಿರಂಜೀವಿ, ಬಾಲಯ್ಯ, ನಾಗ್ ಮತ್ತು ವೆಂಕಿ ಜೊತೆ ಜೋಡಿಯಾಗಿ ಕಾಣಿಸಿಕೊಂಡರು. ಆ ಸಮಯದಲ್ಲಿ ಅವರು ಗ್ಲಾಮರ್ ಕ್ವೀನ್ ಆಗಿ ಮಿಂಚಿದ್ದರು.. ಅನೇಕ ನಾಯಕರು ನಗ್ಮಾಗಾಗಿ ಕಾಯುತ್ತಿದ್ದರು.
ನಗ್ಮಾ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರಗಳಲ್ಲಿ ನಟಿಸಿ ಮೆಚ್ಚಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ತುಂಬಾ ಬಡ ಹಿನ್ನೆಲೆಯಿಂದ ಬಂದವರು. ಅಪ್ಪನ ಮೋಸದಿಂದ ರಸ್ತೆಗೆ ಬೀಳುವ ಪರಿಸ್ಥಿತಿಯಿಂದ ನಿಧಾನವಾಗಿ ನಟಿಯಾಗಿ ಎದ್ದು ನಿಂತಳು. ಅತೀ ಕಡಿಮೆ ಅವಧಿಯಲ್ಲಿ ಸ್ಟಾರ್ ಆಗಿ... ಬ್ಯುಸಿಸ್ಟ್ ಹೀರೋಯಿನ್ ಎನಿಸಿಕೊಂಡರು.. ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾದರು. ಆದರೆ ಕೆಲವು ಪ್ರೇಮ ಪ್ರಕರಣಗಳು ನಗ್ಮಾ ಅವರ ವೃತ್ತಿಜೀವನಕ್ಕೆ ಧಕ್ಕೆ ತಂದಿವೆ ಎನ್ನಬಹುದು.
ಆರಂಭದಲ್ಲಿ, ನಗ್ಮಾ ಸ್ಟಾರ್ ಕ್ರಿಕೆಟಿಗ.. ಟೀಂ ಇಂಡಿಯಾ ನಾಯಕ ಸೌರಭ್ ಗಂಗೂಲಿಯೊಂದಿಗೆ ಪ್ರಣಯದಲ್ಲಿ ತೊಡಗಿದ್ದರು. ಈ ಇಬ್ಬರು ವರ್ಷಗಳ ಕಾಲ ಒಟ್ಟಿಗೆ ಇದ್ದು, ತಿರುಪತಿಯಲ್ಲಿ ಮದುವೆಯಾಗಲು ಬಯಸಿದ್ದರು ಎನ್ನಲಾಗಿದೆ. ಆದರೆ ಗಂಗೂಲಿ ಕುಟುಂಬಕ್ಕೆ ಈ ವಿಷಯ ತಿಳಿದು ಗಲಾಟೆ ಮಾಡಿದ್ದರಿಂದ ಮದುವೆ ನಿರ್ಧಾರ ಹಿಂಪಡೆದಿದ್ದಾರೆ ಎನ್ನಲಾಗಿದೆ.
ಆ ನಂತರ ನಗ್ಮಾ ಕೆಲವು ವರ್ಷಗಳ ಕಾಲ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಆ ವೇಳೆ ಶರತ್ ಕುಮಾರ್ ಆತ್ಮೀಯರಾದರು. ಹೀಗೆ ಪರಿಚಯದ ಸ್ನೇಹ ಪ್ರೀತಿಗೆ ತಿರುಗಿತ್ತು.. ಆದರೆ ಈ ಮೊದಲೇ ಶರತ್ ಕುಮಾರ್ ಅವರಿಗೆ ಮದುವೆಯಾಗಿತ್ತು.. ನಗ್ಮಾ ಜೊತೆಗಿನ ಪ್ರೇಮದ ವಿಚಾರ ಅವರ ಪತ್ನಿಗೂ ತಿಳಿದು ದೊಡ್ಡ ಸಮಸ್ಯೆಯಾಗಿತ್ತು ಎಂದು ವರದಿಯಾಗಿತ್ತು..
ಹೀಗೆ ನಗ್ಮಾ ಎರಡು ಬಾರಿ ಪ್ರೀತಿಸಿ ಮೋಸ ಹೋಗಿದ್ದರಿಂದ ಆಕೆಗೆ ಸೌತ್ ಸಿನಿಮಾಗಳ ಆಫರ್ಗಳು ಕಡಿಮೆದವು... ಬಳಿಕ ಅವರು ಭೋಜ್ಪುರಿಯಲ್ಲಿ ಸಿನಿಮಾಗಳನ್ನು ಮಾಡಿದರು. ಅಲ್ಲಿ ಸ್ಟಾರ್ ಆಗಿರುವ ರವಿಕಿಶನ್ ಜೊತೆ ನಗ್ಮಾ ಒಳ್ಳೆಯ ಚಿತ್ರಗಳನ್ನು ಮಾಡಿದ್ದಾರೆ. ಇದರೊಂದಿಗೆ ಇಬ್ಬರ ನಡುವೆ ಲವ್ ಟ್ರ್ಯಾಕ್ ಶುರುವಾಗಿ.. ಮದುವೆಗೂ ರೆಡಿಯಾಗಿದ್ದರಂತೆ.. ಆದರೆ ರವಿಕಿಶನ್ ಮನೆಯವರು ಮತ್ತು ಪತ್ನಿ ದೊಡ್ಡ ಗಲಾಟೆ ಮಾಡಿದ್ದರಿಂದ ನಗ್ಮಾ ರವಿ ಅವರಿಂದ ದೂರವಾದರು..
ಆ ಬಳಿಕ ನಗ್ಮಾ ಮತ್ತೊಬ್ಬ ಭೋಜ್ಪುರಿವ ನಟ ಮನೋಜ್ ತಿವಾರ್ಗೆ ಆಪ್ತರಾದರು. ಆದರೆ ಸಿನಿಮಾಗಳಲ್ಲಿ ರವಿಕಿಶನ್ ಮತ್ತು ಮನೋಜ್ ತಿವಾರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದರೊಂದಿಗೆ ರವಿಕಿಶನ್ ಮೇಲಿನ ಕೋಪದಿಂದ ನಗ್ಮಾ ಮನೋಜ್ ಗೆ ಹತ್ತಿರವಾದರು. ಕೆಲವು ವರ್ಷಗಳ ಕಾಲ ಇವರಿಬ್ಬರು ಲವ್ ಟ್ರ್ಯಾಕ್ ಅನ್ನು ಮುನ್ನಡೆಸಿದರು. ಈ ವಿಷಯ ಮನೋಜ್ ಮನೆಯವರಿಗೆ ತಿಳಿದು ನಗ್ಮಾಗೆ ವಾರ್ನಿಂಗ್ ನೀಡಿದ್ದು, ಇದರಿಂದ ಆಕೆ ಆತನಿಂದ ದೂರವಾಗಿದ್ದಳು ಎಂದು ವರದಿಯಾಗಿದೆ.
ಒಟ್ಟಿನಲ್ಲಿ ನಗ್ಮಾ ನಾಲ್ಕು ಬಾರಿ ಪ್ರೀತಿಸಿ ಮೋಸ ಹೋಗಿದ್ದಳು. ಎಲ್ಲಾ ನಾಲ್ಕು ಸ್ಲಾರ್ಗಳು ಆಕೆಗೆ ಮೋಸ ಮಾಡಿದರು. ಇದರಿಂದ ಪ್ರೀತಿ ಮತ್ತು ಮದುವೆಯ ಸಂಬಂಧದಿಂದ ಜುಗುಪ್ಸೆಗೊಂಡಿರುವ ನಟಿ ಇನ್ನು ಮುಂದೆ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿ.. ನಗ್ಮಾ ಇದುವರೆಗೂ ಮದುವೆಯಾಗಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.