W,W,W,W,W,W, W,W... ಕೇವಲ 1 ರನ್‌ಗೆ ಉರುಳಿತು 8 ವಿಕೆಟ್‌! ಸ್ಟಾರ್‌ ಬೌಲರ್‌ ಮಿಂಚಿನ ದಾಳಿಗೆ ಗಡಗಡ ನಡುಗಿದ ಸರ್ವಶೇಷ್ಠ ಎನಿಸಿಕೊಂಡ ಈ ತಂಡ

Western Australia and Tasmania: ಈ ಪಂದ್ಯವು ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ನಡುವೆ ನಡೆಯಿತು. ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಇನಿಂಗ್ಸ್ ಆರಂಭಿಸಿತು. ಆರನ್ ಹಾರ್ಡಿ (7) ಮತ್ತು ಡಾರ್ಸಿ ಶಾಟ್ (22) ಮೊದಲ ವಿಕೆಟ್‌ಗೆ 11 ರನ್‌ಗಳ ಜೊತೆಯಾಟ ನೀಡಿದರು

Written by - Bhavishya Shetty | Last Updated : Oct 25, 2024, 05:45 PM IST
    • ಒಂದು ರನ್‌ ಗಳಿಸುವಷ್ಟರಲ್ಲಿ ಉಳಿದೆಲ್ಲಾ ವಿಕೆಟ್‌ ಉರುಳಿದರೆ ಏನನಿಸುತ್ತದೆ...!!
    • ಈ ಪಂದ್ಯವು ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ನಡುವೆ ನಡೆಯಿತು.
    • ಒಂದರ ಹಿಂದೆ ಒಂದರಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು
W,W,W,W,W,W, W,W... ಕೇವಲ 1 ರನ್‌ಗೆ ಉರುಳಿತು 8 ವಿಕೆಟ್‌! ಸ್ಟಾರ್‌ ಬೌಲರ್‌ ಮಿಂಚಿನ ದಾಳಿಗೆ ಗಡಗಡ ನಡುಗಿದ ಸರ್ವಶೇಷ್ಠ ಎನಿಸಿಕೊಂಡ ಈ ತಂಡ title=
File Photo

ಒಂದು ತಂಡವು 11 ಅಂತರಾಷ್ಟ್ರೀಯ ಆಟಗಾರರನ್ನು ಹೊಂದಿರುತ್ತದೆ. ಇದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಆ ತಂಡದ ಮೂರನೇ ವಿಕೆಟ್ 52 ರನ್‌ಗಳಿಗೆ ಪತನವಾಗಿ, ಆ ನಂತರ ಒಂದು ರನ್‌ ಗಳಿಸುವಷ್ಟರಲ್ಲಿ ಉಳಿದೆಲ್ಲಾ ವಿಕೆಟ್‌ ಉರುಳಿದರೆ ಏನನಿಸುತ್ತದೆ...!! ಅಚ್ಚರಿಯಂತೂ ಖಂಡಿತ. ಇದೀಗ ಇಂತಹ ಘಟನೆ ನಡೆದಿದೆ. ಅದೂ ಕೂಡ ಶ್ರೇಷ್ಠ ತಂಡ ಎನಿಸಿಕೊಂಡ ಆಸ್ಟ್ರೇಲಿಯಾಗೆ.

ಇದನ್ನೂ ಓದಿ: ಈ ಪುಟ್ಟ ಹುಡುಗಿ ಈಗ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ..! ಈಕೆ ಅಂದವನ್ನ ನೋಡೋದೇ ಕಣ್ಣಿಗೆ ಹಬ್ಬ.. ಗೆಸ್‌ ಮಾಡಿ ಯಾರಂತ..?

ಈ ಪಂದ್ಯವು ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ನಡುವೆ ನಡೆಯಿತು. ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಇನಿಂಗ್ಸ್ ಆರಂಭಿಸಿತು. ಆರನ್ ಹಾರ್ಡಿ (7) ಮತ್ತು ಡಾರ್ಸಿ ಶಾಟ್ (22) ಮೊದಲ ವಿಕೆಟ್‌ಗೆ 11 ರನ್‌ಗಳ ಜೊತೆಯಾಟ ನೀಡಿದರು. ಇದಾದ ಬಳಿಕ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮತ್ತು ಶಾರ್ಟ್ ಎರಡನೇ ವಿಕೆಟ್‌ಗೆ 33 ರನ್‌ಗಳ ಜೊತೆಯಾಟವಾಡಿದರು. ಕ್ಯಾಮರೂನ್ 14 ರನ್ ಗಳ ಇನಿಂಗ್ಸ್ ಆಡಿದರು.

ಇನ್ನು 52 ರನ್ ಗಳಿಸುವಷ್ಟರಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ರೂಪದಲ್ಲಿ ತಂಡದ ಮೂರನೇ ವಿಕೆಟ್ ಪತನವಾಯಿತು. ಇದಾದ ನಂತರ ಒಂದರ ಹಿಂದೆ ಒಂದರಂತೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಜೋಶ್ ಇಂಗ್ಲಿಷ್ ಒಂದು ರನ್ ಗಳಿಸಿದ್ದರಷ್ಟೇ... ಇವರಲ್ಲದೆ ನಾಯಕ ಆಷ್ಟನ್ ಟರ್ನರ್, ಕೂಪರ್ ಕೊನೊಲಿ, ಹಿಲ್ಟನ್ ಕಾರ್ಟ್ ರೈಟ್, ಆಶ್ಟನ್ ಅಗರ್, ಜೆ. ರಿಚರ್ಡ್‌ಸನ್, ಜೋಯಲ್ ಪ್ಯಾರಿಸ್ ಮತ್ತು ಲ್ಯಾನ್ಸ್ ಮೋರಿಸ್ (ಔಟಾಗದೆ) ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.

ತಾಸ್ಮೇನಿಯಾ ಪರ ಬ್ಯೂ ವೆಬ್‌ಸ್ಟರ್ 17 ರನ್ ನೀಡಿ 6 ವಿಕೆಟ್ ಪಡೆದರೆ, ಬಿಲ್ಲಿ ಸ್ಟಾನ್‌ಲೇಕ್ 3 ವಿಕೆಟ್ ಪಡೆದರು. ಒಂದು ವಿಕೆಟ್ ಟಾಮ್ ರಾಡ್ಜರ್ಸ್ ಪಾಲಾಯಿತು. ಕುತೂಹಲಕಾರಿಯಾಗಿ, ಒಂದು ರನ್ ಗಳಿಸುವಷ್ಟರಲ್ಲಿ 8 ವಿಕೆಟ್‌ಗಳು ಬಿದ್ದಾಗ, ಯಾವುದೇ ಬೌಲರ್ ಹ್ಯಾಟ್ರಿಕ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:  ಮಲಗುವ ಮುನ್ನ ಇದೊಂದು ಹಣ್ಣು ಸೇವೀದರೆ ಕ್ಷಣ ಮಾತ್ರದಲ್ಲಿ ಆವರಿಸುವುದು ಗಾಢ ನಿದ್ದೆ !ಇದು ನೈಸರ್ಗಿಕ ನಿದ್ದೆ ಮಾತ್ರೆ ಎಂದರೆ ತಪ್ಪಲ್ಲ !

ತಾಸ್ಮೇನಿಯಾ 55 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಈ ತಂಡದ ಪರವಾಗಿ ಮಿಚೆಲ್ ಓವನ್ 29 ರನ್ ಗಳಿಸಿ ಇನ್ನಿಂಗ್ಸ್ ಆಡಿದರೆ, ಮ್ಯಾಥ್ಯೂ ವೇಡ್ ಔಟಾಗದೆ 21 ರನ್ ಗಳಿಸಿದರು. ಟಾಸ್ಮೇನಿಯಾ ಕೂಡ 3 ವಿಕೆಟ್ ಕಳೆದುಕೊಂಡಿತ್ತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News