ಒಂದೇ ಬಾರಿಗೆ 7 ವಿಕೆಟ್‌ ಉಡೀಸ್...‌ ವಾಷಿಂಗ್ಟನ್ ಸುಂದರ್‌‌ ಮೋಡಿಗೆ ಕೀವಿಸ್‌ ತತ್ತರ! ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಸಾಧನೆಗೈದ ಟೀಂ ಇಂಡಿಯಾದ ಸ್ಟಾರ್‌ ಆಲ್ರೌಂಡರ್‌

Washington Sundar: ವಾಷಿಂಗ್ಟನ್‌ ಸುಂದರ್‌ ಅಬ್ಬರದಿಂದಾಗಿ ಬೃಹತ್ ಸ್ಕೋರ್ ಮಾಡಬೇಕೆನ್ನುವ ಕಿವೀಸ್ ಕನಸು ಕೇವಲ 259 ರನ್‌ಗಳಿಗೆ ಸೀಮಿತಗೊಂಡಿತ್ತು. ಮತ್ತೊಂದೆಡೆ, ಸುಂದರ್‌ಗೆ ಆರ್ ಅಶ್ವಿನ್ ಅತ್ಯುತ್ತಮ ಬೆಂಬಲ ನೀಡಿದ್ದಾರೆ.  

Written by - Bhavishya Shetty | Last Updated : Oct 24, 2024, 05:53 PM IST
    • ಸುಮಾರು 1,330 ದಿನಗಳ ನಂತರ ಟೆಸ್ಟ್ ತಂಡಕ್ಕೆ ವಾಪಸಾದ ವಾಷಿಂಗ್ಟನ್ ಸುಂದರ್
    • ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ
    • ಏಕಕಾಲದಲ್ಲಿ 7 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ
ಒಂದೇ ಬಾರಿಗೆ 7 ವಿಕೆಟ್‌ ಉಡೀಸ್...‌ ವಾಷಿಂಗ್ಟನ್ ಸುಂದರ್‌‌ ಮೋಡಿಗೆ ಕೀವಿಸ್‌ ತತ್ತರ! ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ಸಾಧನೆಗೈದ ಟೀಂ ಇಂಡಿಯಾದ ಸ್ಟಾರ್‌ ಆಲ್ರೌಂಡರ್‌  title=
File Photo

Washington Sundar: ಸುಮಾರು 1,330 ದಿನಗಳ ನಂತರ ಟೆಸ್ಟ್ ತಂಡಕ್ಕೆ ವಾಪಸಾದ ವಾಷಿಂಗ್ಟನ್ ಸುಂದರ್, ಟೀಮ್ ಮ್ಯಾನೇಜ್ ಮೆಂಟ್ ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ವಾಷಿಂಗ್ಟನ್ ಸುಂದರ್ ಅಬ್ಬರಿಸಿದ್ದು, ಏಕಕಾಲದಲ್ಲಿ 7 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ.

ಇದನ್ನೂ ಓದಿ:  104 ಪಂದ್ಯಕ್ಕೆ 530 ವಿಕೆಟ್‌... ಟೆಸ್ಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಆರ್‌ ಅಶ್ವಿನ್‌!

ವಾಷಿಂಗ್ಟನ್‌ ಸುಂದರ್‌ ಅಬ್ಬರದಿಂದಾಗಿ ಬೃಹತ್ ಸ್ಕೋರ್ ಮಾಡಬೇಕೆನ್ನುವ ಕಿವೀಸ್ ಕನಸು ಕೇವಲ 259 ರನ್‌ಗಳಿಗೆ ಸೀಮಿತಗೊಂಡಿತ್ತು. ಮತ್ತೊಂದೆಡೆ, ಸುಂದರ್‌ಗೆ ಆರ್ ಅಶ್ವಿನ್ ಅತ್ಯುತ್ತಮ ಬೆಂಬಲ ನೀಡಿದ್ದಾರೆ.

ಪುಣೆಯಲ್ಲಿ ನಡೆಯುತ್ತಿರುವ ಈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಟೆಸ್ಟ್ ನಂತೆಯೇ ಎರಡನೇ ಟೆಸ್ಟ್ ನಲ್ಲೂ ಕಿವೀಸ್ ಉತ್ತಮ ಆರಂಭ ಪಡೆದಿದೆ. ಆದರೆ ನಾಯಕ ಟಾಮ್ ಲ್ಯಾಥಮ್ ಮತ್ತೊಮ್ಮೆ ಬೃಹತ್ ಇನ್ನಿಂಗ್ಸ್ ಆಡಲು ವಿಫಲರಾಗಿ ಕೇವಲ 15 ರನ್ ಗಳಿಗೆ ಪೆವಿಲಿಯನ್ ತಲುಪಿದರು. ಮೂರನೇ ಸ್ಥಾನದಲ್ಲಿದ್ದ ವಿಲ್ ಯುಂಗ್ ಕೂಡ 18 ರನ್ ಗಳಿಸಿ ಔಟಾದರು. ಆ ಬಳಿಕ ಜತೆಯಾದ ಕಾನ್ವೇ ಮತ್ತು ರಚಿನ್ ರವೀಂದ್ರ ಜೋಡಿ ಭಾರತದ ಬೌಲರ್ ಗಳನ್ನು ಕಾಡಿದ್ದರು. ಆದರೆ ಅಶ್ವಿನ್ ಅವರ ಸ್ಪಿನ್‌ಗೆ ಸಿಕ್ಕಿಬಿದ್ದ ಕಾನ್ವೆ 76 ರನ್‌ಗಳಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.

ಇದನ್ನೂ ಓದಿ: ಕಲಿಯುಗದ ಬಗ್ಗೆ ವಿಷ್ಣು ಪುರಾಣದಲ್ಲಿ ಉಲ್ಲೇಖಿಸಿದ್ದ ಈ 4 ಮಾತುಗಳು ಇಂದು ನಿಜವಾಗುತ್ತಿವೆ..!

ಆ ಬಳಿಕ ಡ್ಯಾರೆಲ್ ಮಿಚೆಲ್ ಹೆಚ್ಚಿನ ಇನ್ನಿಂಗ್ಸ್ ಆಡದಿದ್ದರೂ ಕ್ರೀಸ್ ನಲ್ಲಿದ್ದ ರವೀಂದ್ರ ಅವರಿಗೆ ಉತ್ತಮ ಬೆಂಬಲ ನೀಡಿದರು. ಈ ಟೆಸ್ಟ್ ನಲ್ಲೂ ಶತಕದತ್ತ ದಾಪುಗಾಲು ಹಾಕುತ್ತಿದ್ದ ರವೀಂದ್ರ, ಸುಂದರ್ ಅವರ ಅದ್ಭುತ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ರವೀಂದ್ರ ಔಟಾದ ಬಳಿಕ ಕಿವೀಸ್ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಬಂತು. ಕಿವೀಸ್ ಒಂದು ಹಂತದಲ್ಲಿ 197 ರನ್ ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ನಂತರ 62 ರನ್ ಗಳ ಅಂತರದಲ್ಲಿ ಉಳಿದ 6 ವಿಕೆಟ್ ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಮಿಚೆಲ್ ಸ್ಯಾಂಟ್ನರ್ ತಂಡಕ್ಕೆ 33 ರನ್ ಗಳ ಮಹತ್ವದ ಕೊಡುಗೆ ನೀಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News