ಬೆಚ್ಚಿಬಿದ್ದ ಬಿಗ್‌ಬಾಸ್‌.. ಮಧ್ಯರಾತ್ರಿ ಮನೆಮಂದಿಗೆಲ್ಲ ನಡುಕ ಹುಟ್ಟಿಸಿದ ಖ್ಯಾತ ಸ್ಪರ್ಧಿಯ ನಡೆ! ಓಪನ್‌ ಆಯ್ತು ದೊಡ್ಮನೆ ಮೇನ್‌ ಡೋರ್!!‌

Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಿದೆ.. ಮೊದಲೇ ಹೇಳಿದಂತೆ ಪ್ರತಿದಿನ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಕೆಲವು ತಮಾಷೆಯ ಘಟನೆಗಳನ್ನೂ ಮಾಡಲಾಗುತ್ತಿದೆ. 

Written by - Savita M B | Last Updated : Oct 24, 2024, 08:29 AM IST
  • ವೈಲ್ಡ್ ಕಾರ್ಡ್ ಪ್ರವೇಶದ ನಂತರ, ಮನೆಯಲ್ಲಿ ಪೂರ್ಣ ಮನರಂಜನೆ ನಡೆಯುತ್ತದೆ.
  • ಈ ಚೇಷ್ಟೆ ಅವಿನಾಶ್ ಮತ್ತು ಟೇಸ್ಟಿ ತೇಜಾಗೆ ನಾಮಿನೇಷನ್ ಭಯ ಹುಟ್ಟಿಸಿದೆ.
 ಬೆಚ್ಚಿಬಿದ್ದ ಬಿಗ್‌ಬಾಸ್‌.. ಮಧ್ಯರಾತ್ರಿ ಮನೆಮಂದಿಗೆಲ್ಲ ನಡುಕ ಹುಟ್ಟಿಸಿದ ಖ್ಯಾತ ಸ್ಪರ್ಧಿಯ ನಡೆ! ಓಪನ್‌ ಆಯ್ತು ದೊಡ್ಮನೆ ಮೇನ್‌ ಡೋರ್!!‌  title=

Bigg Boss Famous Contestant: ವೈಲ್ಡ್ ಕಾರ್ಡ್ ಪ್ರವೇಶದ ನಂತರ, ಮನೆಯಲ್ಲಿ ಪೂರ್ಣ ಮನರಂಜನೆ ನಡೆಯುತ್ತದೆ. ರೋಹಿಣಿ, ಟೇಸ್ಟಿ ತೇಜ, ಅವಿನಾಶ್ ಮತ್ತು ಗಂಗವ್ವ ತಮ್ಮ ಹಾಸ್ಯ ಚಟಾಕಿಗಳಿಂದ ಜನರನ್ನು ನಗಿಸುತ್ತಿದ್ದಾರೆ. ನಿನ್ನೆ ಅವಿನಾಶ್‌ನನ್ನು ಹಿಡಿದು ಹೊರಗೆ ತಳ್ಳಲು ಯತ್ನಿಸಿದರು.. ಈ ಮಜವನ್ನು ಹೀಗೆ ಮುಂದುವರೆಸಲು ಬಿಗ್ ಬಾಸ್ ಅವಿನಾಶ್ ಅವರನ್ನು ಜಿಮ್ ಟ್ರೈನರ್ ಆಗಿ ಪರಿವರ್ತಿಸಿದರು. ಈ ಟಾಸ್ಕ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. 

ಇದೇ ವೇಳೆ ಗಂಗವ್ವ ಮನೆಯವರನ್ನು ಭಯದಿಂದ ನಡುಗಿಸಿದಳು. ಮಧ್ಯರಾತ್ರಿಯಲ್ಲಿ ಕೂದಲು ಬಿಟ್ಟುಕೊಂಡು ಜೋರಾಗಿ ಕಿರುಚಿ... ಆದರೆ ಇದೆಲ್ಲಾ ತೇಜ, ಅವಿನಾಶ್ ಮತ್ತು ಗಂಗವ್ವ ಸೇರಿ ಮನೆಯವರ ಮೇಲೆ ಪ್ಲಾನ್ ಮಾಡಿದ ಚೇಷ್ಟೆ. ಮಧ್ಯರಾತ್ರಿಯಲ್ಲಿ ಗಂಗವ್ವ ಎಲ್ಲರನ್ನು ದೆವ್ವದಂತೆ ಹೆದರಿಸಿದಳು. ಆದರೆ ಅವರಲ್ಲಿ ಕೆಲವರು ಇದು ಫ್ರಾಂಕ್ ಎಂದು ಅನುಮಾನಿಸಿದರು. ತಮಾಷೆಗಾಗಿ ಮಾಡಿದ ಈ ಚೇಷ್ಟೆ ಅವಿನಾಶ್ ಮತ್ತು ಟೇಸ್ಟಿ ತೇಜಾಗೆ ನಾಮಿನೇಷನ್ ಭಯ ಹುಟ್ಟಿಸಿದೆ. 

ಇದನ್ನೂ ಓದಿ-ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು..! ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಸೇರಿದ್ದ ಸ್ಪರ್ಧಿ ಜೈಲಿಗೆ..?

ನಾಮಿನೇಷನ್ ಸಮಯದಲ್ಲಿ ಕಡುವೈರಿಗಳಂತಿರುವವರು.. ಆ ನಂತರ ಎಲ್ಲವನ್ನೂ ಮರೆತುಬಿಡುತ್ತಾರೆ.. ತುಂಬಾ ಕೂಲ್ ಆ್ಯಂಡ್ ಕ್ಲೋಸ್ ಆಗಿರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಖಿಲ್ ಬಳಿ ಗೌತಮ್ ಬಗ್ಗೆಯೂ ಯಶ್ಮಿ ಹೇಳಿದ್ದು, ಕಳೆದ ವಾರ ಆಹಾರ ವ್ಯರ್ಥವಾದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಈ ಬಾರಿ ರೇಷನ್ ಸಮಯವನ್ನು ಬಹಳ ಕಡಿಮೆ ಮಾಡಿದ್ದಾರೆ. ನಿಖಿಲ್ ಎಷ್ಟೇ ವೇಗವಾಗಿ ಹೋಗಿ ರೇಷನ್ ತೆಗೆದುಕೊಂಡು ಹೋದರೂ ತರಕಾರಿ ಕಾಣೆಯಾಗಿತ್ತು.

ಆ ಬಳಿಕ ನಡೆ ಮಾತುಕಥೆಯಲ್ಲಿ ಅವಿನಾಶ್‌ ಬಾಯಿತಪ್ಪಿ ಇದನ್ನೆಲ್ಲಾ ನೋಡಲು ನನ್ನಿಂದಾಗದು.. ಹೋಗುತ್ತೇನೆ ಎಂದು ಕಾಮಿಡಿ ಮಾಡುತ್ತಿದ್ದಾಗ ಬಿಗ್ ಬಾಸ್ ನಿಜಕ್ಕೂ ಹೋಗಿ ಎಂದು ಗೇಟ್‌ ಓಪನ್‌ ಮಾಡಿದ್ದಾರೆ.. ಮನೆಯವರಲ್ಲಿ ಹಲವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಡುಗಿದ್ದರು.  

 ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೆಗಾ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಯ ಸಮೀಪಿಸುತ್ತಿದೆ. ಇದರ ಭಾಗವಾಗಿ ಬಿಗ್ ಬಾಸ್ ಮೊದಲು ಸಾಮ್ರಾಜ್ಯದ ನಕ್ಷೆಯನ್ನು ಹಾಕುವ ಮೂಲಕ ಟಾಸ್ಕ್ಗಳನ್ನು ಪ್ರಾರಂಭಿಸಿದ್ದಾರೆ. 

ಇದನ್ನೂ ಓದಿ-ನಟಿ ಖುಷ್ಬೂ ಸುಂದರ್‌ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News