ಬಾಕ್ಸ್‌ ಆಫೀಸ್‌ನಲ್ಲಿ ʼಮಾರ್ಟಿನ್‌ʼ ಅಬ್ಬರ! 10 ದಿನಗಳಲ್ಲಿ ಧ್ರುವ ಸರ್ಜಾ ಚಿತ್ರ ಗಳಿಸಿದ್ದೆಷ್ಟು..?

Martin Box Office Collection: ಎ.ಪಿ.ಅರ್ಜುನ್‌ ನಿರ್ದೇಶನದ ʼಅದ್ಧೂರಿʼಯಲ್ಲಿ ನಟಿಸಿದ್ದ ಧ್ರುವ ಸರ್ಜಾ ಮತ್ತೊಮ್ಮೆ ಅವರೊಂದಿಗೆ ಕೈಜೋಡಿಸಿದ್ದರು. ಇದೇ ಕಾರಣಕ್ಕೆ ʼಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇದೀಗ ʼಮಾರ್ಟಿನ್‌ʼ ರಿಲೀಸ್‌ ಆಗಿ 10 ದಿನ ಪೂರ್ತಿಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು ಎನ್ನುವ ವಿವರ ಸಿಕ್ಕಿದೆ.

Martin Box Office Collection: ಸ್ಯಾಂಡಲ್‌ವುಡ್‌ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್‌ʼ ಚಿತ್ರ ಅಕ್ಟೋಬರ್‌ 11ರಂದು ತೆರೆಕಂಡಿತ್ತು. ವಿವಿಧ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಭರಪೂರ ಆ್ಯಕ್ಷನ್ ದೃಶ್ಯಗಳು, ಧ್ರುವ ಸರ್ಜಾರ ಡೆಡಿಕೇಷನ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಆದರೆ ನೀರಸ ಚಿತ್ರಕಥೆ ಅನೇಕರಿಗೆ ಬೇಸರ ತರಿಸಿದೆ. ಪಾಸಿಟಿವ್‌ ಮತ್ತು ನೆಗಟಿವ್‌ ವಿಮರ್ಶೆಯಿಂದ ಮಾರ್ಟಿನ್‌ ಚಿತ್ರದ ಬಾಕ್ಸ್‌ ಆಫೀಸ್‌ಗೆ ಹೊಡೆತ ಬಿದ್ದಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಎ.ಪಿ.ಅರ್ಜುನ್‌ ನಿರ್ದೇಶನದ ʼಅದ್ಧೂರಿʼಯಲ್ಲಿ ನಟಿಸಿದ್ದ ಧ್ರುವ ಸರ್ಜಾ ಮತ್ತೊಮ್ಮೆ ಅವರೊಂದಿಗೆ ಕೈಜೋಡಿಸಿದ್ದರು. ಇದೇ ಕಾರಣಕ್ಕೆ ʼಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇದೀಗ ʼಮಾರ್ಟಿನ್‌ʼ ರಿಲೀಸ್‌ ಆಗಿ 10 ದಿನ ಪೂರ್ತಿಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು ಎನ್ನುವ ವಿವರ ಸಿಕ್ಕಿದೆ.

2 /5

ಮೂಲಗಳ ಪ್ರಕಾರ ʼಮಾರ್ಟಿನ್‌ʼ ಸಿನಿಮಾ 10 ದಿನಗಳಲ್ಲಿ 20 ಕೋಟಿ ರೂ. ಕ್ಲಬ್‌ ಸೇರಿದೆ. ಇದುವರೆಗಿನ ಕಲೆಕ್ಷನ್‌ ಸುಮಾರು 21 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 

3 /5

ಮೊದಲ ದಿನ ವಿವಿ‍ಧ ಭಾಷೆಗಳಲ್ಲಿ ʼಮಾರ್ಟಿನ್‌ʼ 6.7 ಕೋಟಿ ರೂ. ಗಳಿಸಿತ್ತು. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆ ಮುಂದಿನ ದಿನಗಳಲ್ಲಿ ಗಳಿಕೆ ಕುಂಟುತ್ತಾ ಸಾಗಿತು. 

4 /5

ಮೊದಲ ವಾರ 19.4 ಕೋಟಿ ರೂ. ಗಳಿಸುವಲ್ಲಿ ಶಕ್ತವಾದ ಚಿತ್ರ 2ನೇ ವಾರವಾದ ಭಾನುವಾರ ಗಳಿಸಿದ್ದು ಕೇವಲ 45 ಲಕ್ಷ ರೂ. ಎಂದು ವರದಿಯಾಗಿದೆ.

5 /5

ಸದ್ಯ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯೂ ಸಹ ʼಮಾರ್ಟಿನ್‌ʼ ಸಿನಿಮಾದ ಗಳಿಕೆಯ ಮೇಲೆ ಸ್ವಲ್ಪ ಮಟ್ಟಿನ ಪ್ರಭಾವ ಬೀರಿದೆ ಎಂದು ಸಿನಿಮಾ ತಜ್ಞರು ಊಹಿಸಿದ್ದಾರೆ.