Viral News: ʼನೋ ರೋಮ್ಯಾನ್ಸ್‌.. ಇದು ಓಯೋ ಅಲ್ಲ ಕ್ಯಾಬ್..‌ʼ ಬರ್ಗೆಟ್ಟ ಪ್ರೇಮಿಗಳಿಂದ ಡ್ರೈವರ್ಸ್‌ ಪರದಾಟ! ಪೋಸ್ಟ್‌ ನೋಡಿ ಬೆಚ್ಚಿಬಿದ್ದ ನೆಟಿಜನ್ಸ್!!‌

cab Drivers: ಕ್ಯಾಬ್ ಡ್ರೈವರ್ ತನ್ನ ಕ್ಯಾಬ್‌ನಲ್ಲಿ ವಿನಂತಿಯೊಂದಿಗೆ ಪೋಸ್ಟರ್ ಅನ್ನು ಹಾಕಿದ್ದಾನೆ. ಅದರಲ್ಲೂ ಇದು ಯುವ ಪ್ರೇಮ ಜೋಡಿಗಳನ್ನು ಗುರಿಯಾಗಿಸಿಕೊಂಡಂತಿದೆ. ಇದೀಗ ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಾಗಾದರೆ ಅದರಲ್ಲಿ ಏನಿದೆ? ವೈರಲ್ ಆಗಲು ಕ್ಯಾಬ್ ಡ್ರೈವರ್ ಹಾಕಿದ್ದೇನು?   

Written by - Savita M B | Last Updated : Oct 21, 2024, 01:20 PM IST
  • ಸೋಶಿಯಲ್ ಮೀಡಿಯಾದಲ್ಲಿ ದಿನವೂ ಅಚ್ಚರಿಯ ಸುದ್ದಿಗಳನ್ನು ನೋಡುತ್ತಲೇ ಇದ್ದೇವೆ.
  • ಇದೀಗ ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Viral News: ʼನೋ ರೋಮ್ಯಾನ್ಸ್‌.. ಇದು ಓಯೋ ಅಲ್ಲ ಕ್ಯಾಬ್..‌ʼ ಬರ್ಗೆಟ್ಟ ಪ್ರೇಮಿಗಳಿಂದ ಡ್ರೈವರ್ಸ್‌ ಪರದಾಟ! ಪೋಸ್ಟ್‌ ನೋಡಿ ಬೆಚ್ಚಿಬಿದ್ದ ನೆಟಿಜನ್ಸ್!!‌  title=

Viral News: ಸೋಶಿಯಲ್ ಮೀಡಿಯಾದಲ್ಲಿ ದಿನವೂ ಅಚ್ಚರಿಯ ಸುದ್ದಿಗಳನ್ನು ನೋಡುತ್ತಲೇ ಇದ್ದೇವೆ.. ಸೋಶಿಯಲ್ ಮೀಡಿಯಾ ಪುಣ್ಯ ಎಲ್ಲೇ.. ಏನೇ ನಡೆದರೂ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ಅವುಗಳಲ್ಲಿ ಕೆಲವು ವೀಡಿಯೋಗಳು ನಮ್ಮನ್ನು ನಗಿಸಿದರೆ ಇನ್ನು ಕೆಲವು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಇತ್ತೀಚೆಗಷ್ಟೇ ಇಂತಹ ಘಟನೆ ನಡೆದಿದೆ. ಕ್ಯಾಬ್ ಚಾಲಕನೊಬ್ಬ ತನ್ನ ಕ್ಯಾಬ್‌ನಲ್ಲಿ ಪತ್ರವೊಂದನ್ನು ಅಂಟಿಸಿದ್ದಾನೆ. ಇದೀಗ ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ-ಸಲ್ಮಾನ್‌ ಜೀವ ಬೆದರಿಕೆ ಬಳಿಕ.. ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್‌ ಮುಂದಿನ ಟಾರ್ಗೆಟ್‌ ..?

ಹೈದರಾಬಾದ್‌ನಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕಾರಿನಲ್ಲಿ ಪೋಸ್ಟರ್ ಹಾಕಿದ್ದಾನೆ. "ಎಚ್ಚರಿಕೆ.. ನೋ ರೊಮ್ಯಾನ್ಸ್.. ಇದು ಕ್ಯಾಬ್.. ಇದು ಖಾಸಗಿ ಸ್ಥಳ ಅಥವಾ ಓಯೋ ಅಲ್ಲ.. ದಯವಿಟ್ಟು ಅಂತರವನ್ನು ಕಾಯ್ದುಕೊಳ್ಳಿ ಮತ್ತು ಮೌನವಾಗಿ ಕುಳಿತುಕೊಳ್ಳಿ" ಎಂದು ಪೋಸ್ಟರ್ ಬರೆಯಲಾಗಿದೆ. ಹಿಂಬದಿ ಸೀಟಿನಲ್ಲಿ ಕುಳಿತವರಿಗೆ ಸ್ಪಷ್ಟವಾಗಿ ಕಾಣುವಂತೆ ಈ ಪೋಸ್ಟರ್ ಅರೇಂಜ್ ಮಾಡಿದ್ದಾರೆ. 

ಇದನ್ನೂ ಓದಿ-ಸಿಕ್ಕಾಪಟ್ಟೆ TRP ಬಂದಿದ್ರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್! ಇನ್ನೊಂದೆರಡು ವಾರಗಳಲ್ಲಿ ನಿಂತೋಗುತ್ತಾ ಷೋ?

ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಷ್ಟೆಲ್ಲಾ ನೋಡಿದ ಮೇಲೆ... ಸಹಿಸಲಾರದೆ ಈ ಎಚ್ಚರಿಕೆ ನೀಡಿದ್ದಾರೆ ಎಂದು ನೆಟಿಜನ್ ಒಬ್ಬರು ಕಮೆಂಟ್ ಮಾಡಿದ್ದಾರೆ. ಕ್ಯಾಬ್‌ನಲ್ಲಿಯೂ ರೊಮ್ಯಾನ್ಸ್ ಮಾಡುತ್ತಿದ್ದಾರೆಯೇ, ”ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News