IND vs NZ, 1st Test: ರಿಷಭ್ ಪಂತ್‌ ಹೆಗಲೆರಿದ ಸಚಿನ್‌ ತೆಂಡೂಲ್ಕರ್‌ಗೆ ಕಾಡಿದ್ದ ʼನರ್ವಸ್‌ 90ʼ ಭೂತ..!

IND vs NZ, 1st Test: ಅದ್ಭುತವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಪಂತ್‌ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಯಶಸ್ಸಿಯಾಗಿದ್ದರು. ಕ್ರೀಸ್‌ನಲ್ಲಿದ್ದ ಕಾಲ ಸ್ಫೋಟಕ ಆಟವಾಡಿದ ಅವರು 105 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ ಇದ್ದ 99 ರನ್‌ ಗಳಿಸಿದರು.

Written by - Puttaraj K Alur | Last Updated : Oct 19, 2024, 04:15 PM IST
  • 99 ರನ್‌ಗೆ ಔಟಾಗಿ ಕೇವಲ 1 ರನ್‌ನಿಂದ ಶತಕ ವಂಚಿತನಾದ ರಿಷಭ್‌ ಪಂತ್‌
  • ಪಂತ್‌ ಹೆಗಲೆರಿದ ಸಚಿನ್‌ ತೆಂಡೂಲ್ಕರ್‌ಗೆ ಕಾಡಿದ್ದ ʼನರ್ವಸ್‌ 90ʼ ಭೂತ!
  • ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 107 ಮೀಟರ್‌ SIX ಹೊಡೆದ ಪಂತ್!
IND vs NZ, 1st Test: ರಿಷಭ್ ಪಂತ್‌ ಹೆಗಲೆರಿದ ಸಚಿನ್‌ ತೆಂಡೂಲ್ಕರ್‌ಗೆ ಕಾಡಿದ್ದ ʼನರ್ವಸ್‌ 90ʼ ಭೂತ..! title=
ಪಂತ್‌ಗೆ ʼನರ್ವಸ್‌ 90ʼ ಭೂತ!

IND vs NZ, 1st Test: ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಂದು ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ 1 ರನ್​ನಿಂದ ಶತಕ ವಂಚಿತರಾಗಿದ್ದಾರೆ. ಟಿಮ್ ಸೌಥಿಯ 87ನೇ ಓವರ್‌ನ 3ನೇ ಎಸೆತದಲ್ಲಿ 107 ಮೀಟರ್‌ ಸಿಕ್ಸ್‌ ಭಾರಿಸಿದ ಪಂತ್‌, ಲಿಯಂ ಓ'ರೂರ್ಕ್ ಎಸೆದ 89ನೇ ಓವರ್‌ನ ಮೊದಲ ಎಸೆತವನ್ನು ಡಿಫೆಂಡ್‌ ಮಾಡುವ ಯತ್ನದಲ್ಲಿ ಬೌಲ್ಡ್‌ ಆದರು. 

ಕೇವಲ 1 ರನ್‌ಗಳಿಂದ ಶತಕ ವಂಚಿತನಾದ ಪಂತ್‌ 99 ರನ್‌ ಗಳಿಸಿ ಭಾರದ ನೋವಿನಿಂದಲೇ ಪೆವಿಲಿಯನ್‌ ಸೇರಿದರು. ಈ ವೇಳೆ ಡ್ರೆಸ್ಸಿಂಗ್‌ ರೂಂನಲ್ಲಿದ್ದ ಎಲ್ಲಾ ಆಟಗಾರರ ಮೊಗದಲ್ಲಿ ನಿರಾಸೆ ಕಂಡುಬಂತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಸಹ ನಿರಾಸೆ ಅನುಭವಿಸಿದರು. ಕ್ರೀಸ್‌ನಲ್ಲಿದ್ದ ಕೆ.ಎಲ್.ರಾಹುಲ್‌ ಸಹ ಬೇಸರ ವ್ಯಕ್ತಪಡಿಸಿದರು. 

ಇದನ್ನೂ ಓದಿ: IND vs NZ: ಡಕೌಟ್‌ ಆದ ನಂತರವೂ ಶತಕ ಭಾರಿಸಿ ದಾಖಲೆ ಸೃಷ್ಟಿಸಿದ ಭಾರತ ತಂಡದ ಆಟಗಾರ..ಅಪರೂಪದ ಸಾಧನೆ ಮಾಡಿದ ಸರ್ಫರಾಜ್ ಖಾನ್!

ಮಾಸ್ಟರ್‌ ಬ್ಲ್ಯಾಸ್ಟರ್‌ ಸಚಿನ್ ತೆಂಡೂಲ್ಕರ್‌ಗೆ ವೃತ್ತಿ ಜೀವನದುದ್ದಕ್ಕೂ ಕಾಡಿದ್ದ ʼನರ್ವಸ್ 90ʼ ಭೂತ ಇದೀಗ ಪಂತ್ ಹೆಗಲೆರಿದೆ. ಸಚಿನ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀನವದಲ್ಲಿ ಒಟ್ಟು 10 ಬಾರಿ ನರ್ವಸ್ 90ಗೆ ಬಲಿಯಾಗಿದ್ದರೆ, ಪಂತ್ 7 ಬಾರಿ ಶತಕದಂಚಿನಲ್ಲಿ ಎಡವಿದ್ದಾರೆ. 

ಅದ್ಭುತವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಪಂತ್‌ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಯಶಸ್ಸಿಯಾಗಿದ್ದರು. ಕ್ರೀಸ್‌ನಲ್ಲಿದ್ದ ಕಾಲ ಸ್ಫೋಟಕ ಆಟವಾಡಿದ ಅವರು 105 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ ಇದ್ದ 99 ರನ್‌ ಗಳಿಸಿದರು. ಅವರು 94.29 ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿ ತಂಡಕ್ಕೆ ನೆರವಾದರು. ಸದ್ಯದ ಮಾಹಿತಿ ಪ್ರಕಾರ ಭಾರತ 93 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡಿದ್ದು, 441 ರನ್‌ ಗಳಿಸಿದೆ. ಈ ಮೂಲಕ 85 ರನ್‌ಗಳ ಮುನ್ನಡೆ ಸಾಧಿಸಿದೆ.  

ಇದನ್ನೂ ಓದಿ: IPL 2025: RCB ತಂಡ ಸೇರಲು ಕೇಳಿದ ಅಭಿಮಾನಿಗೆ ರೋಹಿತ್‌ ಶರ್ಮಾ ನೀಡಿದ ಉತ್ತರ ಇದು! ಬೆಂಗಳೂರು ಬಾಯ್ಸ್‌ಗೆ ಬಂದಂಗಾಯ್ತು ಆನೆಬಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News