ಕ್ರಿಕೆಟ್‌ ಚರಿತ್ರೆ ಪುಟದಲ್ಲಿ 1938ರಿಂದ ಇದೊಂದು ದಾಖಲೆ ಹಾಗೇ ಇದೆ...! ಸಚಿನ್‌ ಆಗಲಿ, ವಿರಾಟ್‌ ಆಗಲಿ... ಎಂತೆಂಥ ದಿಗ್ಗಜರೇ ಬಂದ್ರೂ ಟಚ್‌ ಮಾಡೋಕು ಆಗಿಲ್ಲ

don bradman record: ಬ್ರಾಡ್ಮನ್ ಕೇವಲ ಬ್ಯಾಟ್ಸ್ಮನ್ ಆಗಿರಲಿಲ್ಲ, ಬದಲಾಗಿ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಯಾಗಿದ್ದರು. ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವರು ತಮ್ಮ ಬ್ಯಾಟಿಂಗ್‌ನಿಂದ ಲಕ್ಷಾಂತರ ಜನರನ್ನು ಮಂತ್ರಮುಗ್ಧಗೊಳಿಸಿದ್ದರು. ಅವರ ಸರಾಸರಿ 99.94... ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಸರಾಸರಿಯಾಗಿದೆ.  

Written by - Bhavishya Shetty | Last Updated : Oct 16, 2024, 09:40 PM IST
    • ಕ್ರಿಕೆಟ್ ಲೋಕದಲ್ಲಿ ತನ್ನ ಅಚ್ಚಳಿಯದ ಛಾಪು ಮೂಡಿಸಿದ ಆಟಗಾರನೊಬ್ಬನಿದ್ದ
    • ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ.
    • ಬ್ರಾಡ್ಮನ್ ಕೇವಲ ಬ್ಯಾಟ್ಸ್ಮನ್ ಆಗಿರಲಿಲ್ಲ, ಬದಲಾಗಿ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಯಾಗಿದ್ದರು
ಕ್ರಿಕೆಟ್‌ ಚರಿತ್ರೆ ಪುಟದಲ್ಲಿ 1938ರಿಂದ ಇದೊಂದು ದಾಖಲೆ ಹಾಗೇ ಇದೆ...! ಸಚಿನ್‌ ಆಗಲಿ, ವಿರಾಟ್‌ ಆಗಲಿ... ಎಂತೆಂಥ ದಿಗ್ಗಜರೇ ಬಂದ್ರೂ ಟಚ್‌ ಮಾಡೋಕು ಆಗಿಲ್ಲ title=
File Photo

Unbreakable Cricket Record: ಅದೊಂದು ಕಾಲಘಟ್ಟದಲ್ಲಿ ಕ್ರಿಕೆಟ್ ಲೋಕದಲ್ಲಿ ತನ್ನ ಅಚ್ಚಳಿಯದ ಛಾಪು ಮೂಡಿಸಿದ ಆಟಗಾರನೊಬ್ಬನಿದ್ದ. ಆ ಆಟಗಾರನನ್ನು 'ದಿ ಮ್ಯಾಜಿಶಿಯನ್ ಆಫ್ ದಿ ಬ್ಯಾಟ್', 'ದಿ ಬಾಸ್ ಆಫ್ ಕ್ರಿಕೆಟ್' ಮತ್ತು 'ದಿ ಡಾನ್' ಎಂದೂ ಸಹ ಕರೆಯುತ್ತಾರೆ. ಆ ಆಟಗಾರ 27 ಆಗಸ್ಟ್ 1908 ರಂದು ಜನಿಸಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಅದು ಇಂದಿಗೂ ಹಾಗೇ ಇದೆ. ಅಷ್ಟಕ್ಕೂ ಆ ಶ್ರೇಷ್ಠ ಬೇರಾರು ಅಲ್ಲ, ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್ಮನ್.

ಇದನ್ನೂ ಓದಿ: ಹದ್ದಿನಂತ ಕಣ್ಣು ನಿಮ್ಮದಾಗಿದ್ರೆ... ಈ 6 ರ ಮಧ್ಯೆ ಅಡಗಿರುವ 9 ಎಲ್ಲಿದೆ ಪತ್ತೆಹಚ್ಚಿ!

ಬ್ರಾಡ್ಮನ್ ಕೇವಲ ಬ್ಯಾಟ್ಸ್ಮನ್ ಆಗಿರಲಿಲ್ಲ, ಬದಲಾಗಿ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆಯಾಗಿದ್ದರು. ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವರು ತಮ್ಮ ಬ್ಯಾಟಿಂಗ್‌ನಿಂದ ಲಕ್ಷಾಂತರ ಜನರನ್ನು ಮಂತ್ರಮುಗ್ಧಗೊಳಿಸಿದ್ದರು. ಅವರ ಸರಾಸರಿ 99.94... ಇದು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಸರಾಸರಿಯಾಗಿದೆ.

ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ. 1937-38ರಲ್ಲಿ ಸತತ 6 ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ್ದರು. ಈ ದಾಖಲೆ ಇನ್ನೂ ಹಾಗೇ ಇದ್ದು, ಕೇವಲ ಮೂವರು ಆಟಗಾರರು ಮಾತ್ರ ಈ ಮಟ್ಟದ ಸಮೀಪ ತಲುಪಲು ಸಾಧ್ಯವಾಗಿದೆ. ಅಚ್ಚರಿ ಎಂದರೆ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಹೆಸರು ಇದರಲ್ಲಿ ಇಲ್ಲ. ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ (5 ಶತಕ), ಪಾಕಿಸ್ತಾನದ ಮೊಹಮ್ಮದ್ ಯೂಸುಫ್ (5 ಶತಕ) ಮತ್ತು ಭಾರತದ ಗೌತಮ್ ಗಂಭೀರ್ (5 ಶತಕ) ಇದರ ಸಮೀಪ ಬಂದ ಆಟಗಾರರು.

ಬ್ರಾಡ್ಮನ್ 1928 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಈ ಅವಧಿಯಲ್ಲಿ, 80 ಇನ್ನಿಂಗ್ಸ್‌ಗಳಲ್ಲಿ 99.94 ಸರಾಸರಿಯಲ್ಲಿ 6996 ರನ್ ಗಳಿಸಲಾಗಿದೆ. ಇದರಲ್ಲಿ 29 ಶತಕ ಮತ್ತು 13 ಅರ್ಧ ಶತಕ ಗಳಿಸಿದ್ದಾರೆ.

ಇದನ್ನೂ ಓದಿ: ಗಂಡು ಹಾವನ್ನು ಕೊಂದಿದ್ದಕ್ಕೆ ಹೆಣ್ಣು ಹಾವಿನ ಸೇಡು! 24 ಗಂಟೆಗಳಲ್ಲಿಯೇ ನಡೆಯಿತು ಯಾರೂ ಊಹಿಸದ ಘಟನೆ

ಇನ್ನು ಬ್ರಾಡ್‌ಮನ್ ತನ್ನ ಚೊಚ್ಚಲ ಪ್ರವೇಶದ ಎರಡು ವರ್ಷಗಳ ನಂತರ ಅಂದರೆ 1930 ರಲ್ಲಿ ಒಂದು ದೊಡ್ಡ ದಾಖಲೆಯನ್ನು ನಿರ್ಮಾಣ ಮಾಡಿದರು, ಅದು ಇಲ್ಲಿಯವರೆಗೆ ಮುರಿಯಲಾಗಿಲ್ಲ. ಟೆಸ್ಟ್ ಇತಿಹಾಸದಲ್ಲಿ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಅವರ ಈ ದಾಖಲೆಯ ಸಮೀಪಕ್ಕೆ ಬರಲು ಯಾರಿಗೂ ಸಾಧ್ಯವಾಗಿಲ್ಲ. ಅವರು 5 ಟೆಸ್ಟ್‌ಗಳ 9 ಇನ್ನಿಂಗ್ಸ್‌ಗಳಲ್ಲಿ 974 ರನ್ ಗಳಿಸಿದ್ದರು. ಈ ದಾಖಲೆ ಇನ್ನೂ ಹಾಗೇ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News