ಪಿತೃ ದೋಷವಿದ್ದರೆ ನಿಮ್ಮ ಜೀವನದಲ್ಲಿ ಈ ರೀತಿ ಆಗುತ್ತಿರುತ್ತದೆ; ಇವೇ ನೋಡಿ ಪಿತೃ ದೋಷದ ಲಕ್ಷಣಗಳು!

Pitru Paksha 2024: ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಹೊರತಾಗಿಯೂ ಕೆಲಸದಲ್ಲಿ ಪದೇ ಪದೇ ಅಡೆತಡೆ ಮತ್ತು ವೈಫಲ್ಯಗಳು ಕಂಡುಬಂದರೆ, ಅವು ಪಿತೃ ದೋಷದ ಲಕ್ಷಣಗಳಾಗಿರುತ್ತವೆ. ​

Pitru Paksha 2024: ಪಿತೃ ದೋಷವನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರ ದುಷ್ಪರಿಣಾಮಗಳು ಕುಟುಂಬದ ಹಲವು ತಲೆಮಾರುಗಳಿಗೆ ಹಾನಿಯನ್ನುಂಟುಮಾಡುತ್ತವೆ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಹೊರತಾಗಿಯೂ ಕೆಲಸದಲ್ಲಿ ಪದೇ ಪದೇ ಅಡೆತಡೆ ಮತ್ತು ವೈಫಲ್ಯಗಳು ಕಂಡುಬಂದರೆ, ಅವು ಪಿತೃ ದೋಷದ ಲಕ್ಷಣಗಳಾಗಿರುತ್ತವೆ. ಇತ್ತೀಚೆಗಷ್ಟೇ ಪಿತೃ ಪಕ್ಷವು ಮುಕ್ತಾಯವಾಗಿದೆ. ಅಂದರೆ ಪಿತೃ ಪಕ್ಷವು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಇತ್ತು. ಈ ವೇಳೆ ನೀವು ಪಿತೃ ದೋಷದಿಂದ ಮುಕ್ತಿ ಪಡೆಯಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆ ಸಮಯದಲ್ಲಿ ನೀವು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತಿರುತ್ತವೆ. ಪಿತೃಗಳು ನಿಮ್ಮ ಮೇಲೆ ಅಸಮಾಧಾನಗೊಂಡಿದ್ದರೆ ಅಥವಾ ಕೋಪಿಸಿಕೊಂಡಿದ್ದರೆ ಅಥವಾ ಪಿತೃ ದೋಷವಿದ್ದರೆ ಕೆಲವು ಘಟನೆಗಳು ನಿಮ್ಮ ಜೀವನದಲ್ಲಿ ಸಂಭವಿಸುತ್ತದೆ. ಅವುಗಳ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಆಕಸ್ಮಿಕವಾಗಿ ಯಾವುದೋ ಒಂದು ಅಪಘಾತಕ್ಕೆ ಬಲಿಯಾಗುವುದು ಅಥವಾ ಹಠಾತ್ ಅನಾರೋಗ್ಯದಿಂದ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆದುಕೊಳ್ಳುವುದು ಪಿತೃ ದೋಷಕ್ಕೆ ಕಾರಣವೆಂದು ಹೇಳಲಾಗುತ್ತದೆ. ನಿಮಗೂ ಸಹ ಈ ರೀತಿ ಆಗುತ್ತಿದ್ದರೆ ನಿಮ್ಮ ಪೂರ್ವಜರ ಶಾಂತಿಗಾಗಿ ದಾನ ಮಾಡಬೇಕು ಮತ್ತು ಪಿತೃಗಳನ್ನು ಸ್ಮರಿಸಬೇಕು.

2 /5

ಮನೆಯಲ್ಲಿ ಕಲಹದಂತಹ ಘಟನೆಗಳು ಸಾಮಾನ್ಯ, ಆದರೆ ಪಿತೃ ಪಕ್ಷಕ್ಕಿಂತ ಮೊದಲು ಪತಿ-ಪತ್ನಿ ಅಥವಾ ಕುಟುಂಬದ ಸದಸ್ಯರ ನಡುವೆ ವಿವಾದ ಹೆಚ್ಚಾದರೆ ಒಳ್ಳೆಯದಲ್ಲ. ಮನೆಯಲ್ಲಿನ ಕಲಹಗಳು, ವಿವಾದಗಳು ಪಿತೃ ದೋಷಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಪಿತೃ ಪಕ್ಷದ ಸಮಯದಲ್ಲಿ ಪತಿ-ಪತ್ನಿಯ ನಡುವೆ ಮನಸ್ಥಾಪಗಳು ಉಂಟಾಗುವುದು, ಕಲಹಗಳು ಹೆಚ್ಚಾಗುವುದು ಪಿತೃ ದೋಷದ ಸಂಕೇತವಾಗಿರುತ್ತದೆ.

3 /5

ಪಿತೃಪಕ್ಷದ ಮೊದಲು ಮನೆಯಲ್ಲಿ ಹಠಾತ್‌ ಅರಳಿ ಮರವು ಬೆಳೆದುಕೊಳ್ಳುವುದು ಮತ್ತು ತುಳಸಿ ಗಿಡ ಒಣಗಿ ಹೋಗುವುದು ಅಶುಭ ಸಂಕೇತ. ಈ ಘಟನೆಗಳು ಪೂರ್ವಜರ ಅಸಮಾಧಾನವನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ಇದು ಸಂಪತ್ತು, ಸಂತೋಷ, ಸಮೃದ್ಧಿ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡ ಒಣಗದಂತೆ ಕಾಳಜಿ ವಹಿಸಬೇಕು.  

4 /5

ಪಿತೃ ದೋಷವು ಸಂಪತ್ತಿನ ನಷ್ಟ ಮತ್ತು ಪ್ರಗತಿಯಲ್ಲಿ ಅಡಚಣೆ ಉಂಟುಮಾಡುತ್ತದೆ. ಎಲ್ಲಾ ಪ್ರಯತ್ನಗಳ ನಂತರವೂ ವ್ಯಕ್ತಿಯು ಬಯಸಿದ ಯಶಸ್ಸನ್ನು ಪಡೆಯುವುದಿಲ್ಲ. ಪಿತೃಗಳ ಅಸಮಾಧಾನವು ಅವನನ್ನು ಬಡತನಕ್ಕೆ ತಳ್ಳುತ್ತದೆ. ಇಡೀ ಕುಟುಂಬವೇ ಆರ್ಥಿಕ ಸಂಕಷ್ಟ ಮತ್ತು ಅಭಾವದಲ್ಲಿ ಬದುಕುತ್ತಿರುತ್ತದೆ.

5 /5

ನೀವು ಪೂರ್ವಜರ ಶಾಂತಿ ಮತ್ತು ಪಿತೃ ದೋಷದಿಂದ ಮುಕ್ತಿ ಪಡೆಯಲು ಬಯಸಿದರೆ, ಪಿತೃ ಪಕ್ಷದಲ್ಲಿ ಬ್ರಾಹ್ಮಣರಿಗೆ ಆಹಾರ ನೀಡಬೇಕು. ಪಂಚಬಲಿ ಭೋಗವನ್ನು ಅರ್ಪಿಸಿ, ಅಗತ್ಯವಿರುವವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನೀವು ಪಿತೃ ದೋಷದಿಂದ ಮುಕ್ತಿ ಪಡೆಯುತ್ತೀರಿ.