ಈ ಹಣ್ಣಿನ ಜೊತೆಗೆ ಒಂದು ಎಸಳು ಬೆಳ್ಳುಳ್ಳಿ ಸೇವಿಸಿದರೆ ಹೈ ಬಿಪಿ, ಕೊಲೆಸ್ಟ್ರಾಲ್ ಎರಡೂ ನಾರ್ಮಲ್ ಆಗುವುದು !ದಿನಕ್ಕೆ ಒಮ್ಮೆ ಸೇವಿಸಿದರೆ ಸಾಕು

ಹೈ ಬಿಪಿ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಡಬೇಕಾದರೆ ಈ ಹಣ್ಣಿನ ಒಳಗೆ ಒಂದು ಎಸಳು ಬೆಳ್ಳುಳ್ಳಿ ಸೇರಿಸಿ ಸೇವಿಸಬೇಕು.   

Written by - Ranjitha R K | Last Updated : Oct 15, 2024, 10:45 AM IST
  • ಹೃದ್ರೋಗಿಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ.
  • ರಕ್ತದೊತ್ತಡದಲ್ಲಿನ ಏರುಪೇರು ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದಿಂದ ಪ್ರಾರಂಭವಾಗುತ್ತದೆ.
  • ಬಿಪಿ-ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಏನು ಮಾಡಬೇಕು
ಈ ಹಣ್ಣಿನ  ಜೊತೆಗೆ ಒಂದು ಎಸಳು ಬೆಳ್ಳುಳ್ಳಿ ಸೇವಿಸಿದರೆ ಹೈ ಬಿಪಿ, ಕೊಲೆಸ್ಟ್ರಾಲ್ ಎರಡೂ ನಾರ್ಮಲ್ ಆಗುವುದು !ದಿನಕ್ಕೆ ಒಮ್ಮೆ ಸೇವಿಸಿದರೆ ಸಾಕು  title=

ಬೆಂಗಳೂರು : ಹೃದ್ರೋಗಿಗಳ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಇದು ಸಾಮಾನ್ಯವಾಗಿ ರಕ್ತದೊತ್ತಡದಲ್ಲಿನ ಏರುಪೇರು ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದಿಂದ ಪ್ರಾರಂಭವಾಗುತ್ತದೆ.ಒಂದು ಕಾಲದಲ್ಲಿ ಈ ಎಲ್ಲಾ ಆರೋಗ್ಯ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುತ್ತಿತ್ತು.ಆದರೆ, ಈಗ ಎಲ್ಲಾ ವಯಸ್ಸಿನ ಜನರನ್ನು ಈ ಕಾಯಿಲೆಗಳು ಬಾಧಿಸುತ್ತದೆ.ಅಧ್ಯಯನದ ಪ್ರಕಾರ, ಭಾರತದಲ್ಲಿ 29% ವಯಸ್ಕರು ಅಧಿಕ BP ಯಿಂದ ಬಳಲುತ್ತಿದ್ದಾರೆ ಮತ್ತು ಪ್ರತಿ 6 ಜನರಲ್ಲಿ ಒಬ್ಬರು  ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ.

ಈ ರೋಗಗಳ ಅಪಾಯವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಖರ್ಜೂರ ಮತ್ತು ಬೆಳ್ಳುಳ್ಳಿ ಸೇವಿಸಲು ಸಲಹೆ ನೀಡುತ್ತಾರೆ ಆಯುರ್ವೇದ ತಜ್ಞರು. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ತೂಕ ಇಳಿಸಿಕೊಳ್ಳಲು ಬೆಸ್ಟ್ ಬ್ರೇಕ್‌ಫಾಸ್ಟ್‌ಗಳಿವು, ನಿತ್ಯ ಇವುಗಳನ್ನು ತಿಂದ್ರೆ ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್
 
ಬಿಪಿ-ಕೊಲೆಸ್ಟ್ರಾಲ್‌ನಲ್ಲಿ ಖರ್ಜೂರವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು :
ಅಧಿಕ ಬಿಪಿ ಇರುವವರಿಗೆ ಖರ್ಜೂರ ಬಹಳ ಪರಿಣಾಮಕಾರಿ ಮನೆ ಮದ್ದು.  ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ಇರುತ್ತದೆ.ಖರ್ಜೂರದಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ರಕ್ತದಲ್ಲಿ ಕರಗುವುದನ್ನು ತಡೆಯುತ್ತದೆ.ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.ಇದಲ್ಲದೆ, ಖರ್ಜೂರದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಹಸಿ ಬೆಳ್ಳುಳ್ಳಿ ಪ್ರಯೋಜನ : 
ಬೆಳ್ಳುಳ್ಳಿ ತನ್ನ ವಾತ-ಕಫವನ್ನು ಕಡಿಮೆ ಮಾಡುವ ಗುಣಗಳಿಂದಾಗಿ ಬಿಪಿಯನ್ನು ನಿಯಂತ್ರಿಸುತ್ತದೆ.ಇದು ದೇಹದ ಚಾನಲ್‌ಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲ,ಇದರ ಸೇವನೆಯು ಕೀಲು ನೋವು,ಹೊಟ್ಟೆ ಹುಳುಗಳು, ಕೊಲೆಸ್ಟ್ರಾಲ್,ಕೆಮ್ಮು ಮತ್ತು ಶೀತ, ಕಳಪೆ ಜೀರ್ಣಕ್ರಿಯೆ, ದುರ್ಬಲ ರೋಗನಿರೋಧಕ ಶಕ್ತಿ, ಅಧಿಕ ರಕ್ತದ ಸಕ್ಕರೆಯಲ್ಲೂ ಸಹ ಸಹಾಯ ಮಾಡುತ್ತದೆ .

ಇದನ್ನೂ ಓದಿ : ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?

ಖರ್ಜೂರ+ಬೆಳ್ಳುಳ್ಳಿಯನ್ನು ಹೇಗೆ ತಿನ್ನಬೇಕು :
ನೀವು ಬಿಪಿ ಮತ್ತು ಕೊಲೆಸ್ಟ್ರಾಲ್ ರೋಗಿಗಳಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ತಿನ್ನುವ 30-45 ನಿಮಿಷಗಳ ಮೊದಲು 21 ದಿನಗಳ ಕಾಲ ಒಂದು ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ಸುಲಿದ ಖರ್ಜೂರದ ಒಳಗೆ ಇತ್ತು ಸೇವಿಸಬೇಕು.   

ಸೂಚನೆ:  ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News