Coronavirus: ನಿಜಕ್ಕೂ ಕೆಲಸ ಮಾಡುತ್ತಿದೆ ಲಾಕ್ ಡೌನ್, ರೋಗಿಗಳ ವೃದ್ಧಿ ಪ್ರಮಾಣದಲ್ಲಿ ಭಾರಿ ಇಳಿಕೆ

ಮನೆಯಲ್ಲಿಯೇ ಇರಲು ಸಲಹೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವೈದ್ಯರು ಒಂದು ವೇಳೆ ದೇಶದ ನಾಗರಿಕರು ಇದೇ ರೀತಿ ತಮ್ಮ ಮನೆಯಲ್ಲಿಯೇ ಉಳಿದರೆ ಕೊರೊನಾ ವಿರುದ್ಧದ ಈ ಹೋರಾಟವನ್ನು ನಾವು ನಿಶ್ಚಿತವಾಗಿ ಗೆಲ್ಲಲಿದ್ದೇವೆ ಎಂದು ಹೇಳಿದ್ದಾರೆ.

Last Updated : Mar 29, 2020, 03:02 PM IST
Coronavirus: ನಿಜಕ್ಕೂ ಕೆಲಸ ಮಾಡುತ್ತಿದೆ ಲಾಕ್ ಡೌನ್, ರೋಗಿಗಳ ವೃದ್ಧಿ ಪ್ರಮಾಣದಲ್ಲಿ ಭಾರಿ ಇಳಿಕೆ title=

ನವದೆಹಲಿ: ಕೊರೊನಾ ವೈರಸ್ ನ ಪ್ರಕೊಪದಿಂದ ಪಾರಾಗಲು ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಲಾಕ್ ಡೌನ್ ಇದೀಗ ತನ್ನ ಪ್ರಭಾವ ತೋರಿಸಲು ಆರಂಭಿಸಿದೆ.  ಸರ್ಕಾರ ಘೋಷಿಸಿರುವ ಲಾಕ್ ಡೌನ್ ನಿಂದ ಹೊಸ ರೋಗಿಗಳ ಏರಿಕೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ ಎನ್ನಲಾಗಿದೆ.ಕೊರೊನಾ ವೈರನ್ ನ ಅಪ್ಡೇಟ್ ಗಾಗಿ ರಚಿಸಲಾಗಿರುವ covid19india.org ವೆಬ್ಸೈಟ್ ಮೇಲೆ ಪ್ರಕಟಗೊಂಡ ಮಾಹಿತಿ ಪ್ರಕಾರ ಹೊಸರೋಗಿಗಳ ಏರಿಕೆಯ ಟ್ರೆಂಡ್ ನಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ., ಈ ವೆಬ್ ಸೈಟ್ ಪ್ರಕಾರ ಮಾರ್ಚ್ 21ಕ್ಕೆ  ದೇಶಾದ್ಯಂತ ಒಟ್ಟು 283 ಪ್ರಕರಣಗಳು ದಾಖಲಾಗಿದ್ದವು, ಮಾರನೆಯ ದಿನ ಈ ಸಂಖ್ಯೆ 396ಕ್ಕೆ ಏರಿಕೆಯಾಗಿದೆ. ಅಂದರೆ, ಒಂದೇ ದಿನದಲ್ಲಿ ಹೊಸದಾಗಿ ದಾಖಲಾದ ಕೊರೊನಾ ವೈರಸ್ ಪ್ರಕರಣಗಳಲ್ಲಿ ಶೇ.39.92 ವೇಗ ಕಂಡು ಬಂದಿದೆ. ಆದರೆ, ಮಾರ್ಚ್ 27 ಹಾಗೂ ಮಾರ್ಚ್ 28ರವೇಳೆಗೆ ಕೊರೊನಾ ವೈರಸ್ ನ ಹೊಸಪ್ರಕರಣಗಳು ಹೆಚ್ಚಾಗುವ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಈ ದರ ಶೇ.5.31ರಷ್ಟು ಮಾತ್ರ ದಾಖಲಿಸಲಾಗಿದೆ.

ಪೋರ್ಟಲ್ ನಲ್ಲಿ ನೀಡಲಾಗಿರುವ ಮಾಹಿತ ಪ್ರಕಾರ ಮಾರ್ಚ್ 22 ರಂದು ದೇಶಾದ್ಯಂತ ಇರುವ ಒಟ್ಟು ಕೊರೊನಾವೈರಸ್ ಪೀಡಿತರ ಸಂಖ್ಯೆ 396 ರಷ್ಟಿತ್ತು. ಬಳಿಕ ಮಾರ್ಚ್ 23ರಂದು ಈ ಸಂಖ್ಯೆ 468 ಕ್ಕೆ ತಲುಪಿದೆ. ಮಾರ್ಚ್ 24 ರಂದು ಈ ಸಂಖ್ಯೆ ಹೆಚ್ಚಾಗಿ 566 ಕ್ಕೆ ತಲುಪಿದೆ.  ಇದನ್ನು ಮಾರ್ಚ್ 23ಕ್ಕೆ ಹೋಲಿಸಿದಾಗ ಹೊಸ ಪ್ರಕರಣಗಳ ಸಂಖ್ಯೆ ಶೇ.23.43 ವೇಗದಲ್ಲಿ ಏರಿಕೆಯಾಗಿವೆ. 

ಇದರ ಮಾರನೆಯ ದಿನವೇ ಅಂದರೆ ಮಾರ್ಚ್ 25ರಂದು ಹೊಸ ರೋಗಿಗಳ ಸಂಖ್ಯೆ ಮಾರ್ಚ್ 23ರ ಹೋಲಿಕೆಯಲ್ಲಿ ಶೇ.13.95ರಷ್ಟು ಇಳಿಕೆಯಾಗಿದೆ. ಈ ದಿನ ದೇಶಾದ್ಯಂತ ಒಟ್ಟು ಕೊರೊನಾ ವೈರಸ್ ರೋಗಿಗಳ ಸಂಖ್ಯೆ ಏರಿಕೆಯಾಗಿ 645 ಕ್ಕೆ ತಲುಪಿದೆ.

ಮಾರ್ಚ್ 26ರ ಕುರಿತು ಹೇಳುವುದಾದರೆ, ಮಾರ್ಚ್ 25 ತುಲನೆಯಲ್ಲಿ ಈ ಪ್ರಮಾಣದಲ್ಲಿ ಇನ್ನಷ್ಟು ಇಳಿಕೆಯನ್ನು ನಮೂದಿಸಲಾಗಿದೆ. ಮಾರ್ಚ್ 26 ರಂದು ಹೊಸ ರೋಗಿಗಳ ನೋಂದಣಿ ದರ ಶೇ.11.62ರಷ್ಟಿದ್ದು, ಮಾರ್ಚ್ 26ಕ್ಕೆ ದೇಶಾದ್ಯಂತ ಕೊರೊನಾ ರೋಗಿಗಳ ಸಂಖ್ಯೆ 72೦ಕ್ಕೆ ಬಂದು ತಲುಪಿದೆ.

ಮಾರ್ಚ್ 27 ರಂದು ಮಾಮೂಲಿ ಏರಿಕೆ ಕಂಡುಬಂದಿದೆ. ಇದನ್ನು ಮಾರ್ಚ್ 26 ಕ್ಕೆ ಹೋಲಿಸಿದಾಗ ಈ ಏರಿಕೆಯ ದರ ಶೇ.12.30ರಷ್ಟಿತ್ತು ಎನ್ನಲಾಗಿದೆ. ಮಾರ್ಚ್ 27 ರಂದು ಕೊರೊನಾ ವೈರಸ್ ರೋಗಿಗಳ ಸಂಖ್ಯೆ 886ಕ್ಕೆ ತಲುಪಿದೆ. ಮಾರ್ಚ್ 27ರ ಹೋಲಿಕೆಯಲ್ಲಿ ಮಾರ್ಚ್ 28ಕ್ಕೆ ದಾಖಲಾದ ಒಟ್ಟು ಹೊಸ ಪ್ರಕರಣಗಳ ಸಂಖ್ಯೆ 933ಕ್ಕೆ ತಲುಪಿದ್ದು , ಬೆಳವಣಿಗೆಯ ದರ ಶೇ.5.31 ಕ್ಕೆ ಕುಂಠಿತಗೊಂಡಿದೆ.

Trending News