ಲಾರಿಗಳ ಹಿಂಭಾಗದಲ್ಲಿ ‘Horn OK Please’ ಎಂದು ಬರೆದಿರೋದ್ಯಾಕೆ? ಇದರ ನಿಜವಾದ ಅರ್ಥ ಏನೆಂದು ನಿಮಗೆ ತಿಳಿದಿದೆಯೇ?

Horn Ok Please meaning: ಹಾಗೆ ಬರೆಯಲು ಕಾರಣ ಏನೆಂಬುದನ್ನು ಎಂದಾದರೂ ಆಲೋಚಿಸಿದ್ದೀರಾ? ಅಷ್ಟಕ್ಕೂ ಹೀಗೆ ಬರೆಯಲೇಬೇಕೆಂಬ ಯಾವುದೇ ನಿಬಂಧನೆ ಇಲ್ಲ... ಸರ್ಕಾರದ ನಿಯಮವೂ ಇಲ್ಲ... ಅಷ್ಟಿದ್ದರೂ ಸಹ ಏಕೆ ಹೀಗೆ ಬರೆಯಲಾಗುತ್ತದೆ. ಈ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ.

Written by - Bhavishya Shetty | Last Updated : Oct 11, 2024, 09:05 PM IST
    • ಟ್ರಕ್‌ಗಳ ಹಿಂಭಾಗದಲ್ಲಿ 'ಹಾರ್ನ್ ಓಕೆ ಪ್ಲೀಸ್' ಬರೆದಿರುವುದನ್ನು ಕಂಡಿರುತ್ತೇವೆ
    • ಹಾಗೆ ಬರೆಯಲು ಕಾರಣ ಏನೆಂಬುದನ್ನು ಎಂದಾದರೂ ಆಲೋಚಿಸಿದ್ದೀರಾ?
    • ಈ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ.
ಲಾರಿಗಳ ಹಿಂಭಾಗದಲ್ಲಿ ‘Horn OK Please’ ಎಂದು ಬರೆದಿರೋದ್ಯಾಕೆ? ಇದರ ನಿಜವಾದ ಅರ್ಥ ಏನೆಂದು ನಿಮಗೆ ತಿಳಿದಿದೆಯೇ? title=
File Photo

What is the meaning of Horn OK Please: ಸಾಮಾನ್ಯವಾಗಿ ಲಾರಿ ಅಥವಾ ಟ್ರಕ್‌ಗಳ  ಹಿಂಭಾಗದಲ್ಲಿ 'ಹಾರ್ನ್ ಓಕೆ ಪ್ಲೀಸ್' ಬರೆದಿರುವುದನ್ನು ಎಲ್ಲರೂ ಕಂಡಿರುತ್ತೇವೆ. ಆದರೆ ಹಾಗೆ ಬರೆಯಲು ಕಾರಣ ಏನೆಂಬುದನ್ನು ಎಂದಾದರೂ ಆಲೋಚಿಸಿದ್ದೀರಾ? ಅಷ್ಟಕ್ಕೂ ಹೀಗೆ ಬರೆಯಲೇಬೇಕೆಂಬ ಯಾವುದೇ ನಿಬಂಧನೆ ಇಲ್ಲ... ಸರ್ಕಾರದ ನಿಯಮವೂ ಇಲ್ಲ... ಅಷ್ಟಿದ್ದರೂ ಸಹ ಏಕೆ ಹೀಗೆ ಬರೆಯಲಾಗುತ್ತದೆ. ಈ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ.

ಇದನ್ನೂ ಓದಿ: ವಿಮಾನದಲ್ಲಿ ತಾಂತ್ರಿಕ ದೋಷ.. 1 ಗಂಟೆಗೂ ಹೆಚ್ಚು ಕಾಲ ಗಾಳಿಯಲ್ಲಿಯೇ ಸುತ್ತಾಟ.. ಕೊನೆಗೆ ಏನಾಯ್ತು.?

Ok ಪದದ ಅರ್ಥ:
ಅದು ಎರಡನೇ ಮಹಾಯುದ್ಧ 1939 ರಿಂದ 45ರ ಸಮಯ. ಆ ಸಂದರ್ಭದಲ್ಲಿ ಡೀಸೆಲ್‌ ಕೊರತೆ ಕಾಣಲಾರಂಭಿಸಿತು. ಹೀಗಾಗಿ ಜನರು ಸೀಮೆಎಣ್ಣೆ ಬಳಕೆ ಮೇಲೆ ಅವಲಂಬಿತರಾದರು. ಅಷ್ಟೇ ಅಲ್ಲದೆ, ಡೀಸೆಲ್‌ ಬದಲಿಗೆ ವಾಹನಗಳಿಗೆ ಕೂಡ ಸೀಮೆಎಣ್ಣೆಯನ್ನು ಬಳಕೆ ಮಾಡಲಾಯಿತು. ಎಲ್ಲರಿಗೂ ತಿಳಿದಂತೆ ಸೀಮೆಎಣ್ಣೆ ಹೆಚ್ಚು ಸುಡುವ ಗುಣವನ್ನು ಹೊಂದಿದೆ. ಜೊತೆಗೆ ಹೊಗೆಯೂ ಮಿತಿಮೀರಿ ಬರುತ್ತದೆ. ಆದ್ದರಿಂದ ಸೀಮೆಎಣ್ಣೆ ಬಳಕೆ ಮಾಡಿ ಚಲಾವಣೆ ಮಾಡಲಾಗುತ್ತಿದ್ದ ವಾಹನಗಳ ಹಿಂದೆ ʼOKʼ ಎಂದು ಬರೆಯಲಾಗುತ್ತಿತ್ತು. OK ಎಂದರೆ "On Kerosene".

"ಇದು ಸೀಮೆ ಎಣ್ಣೆ ಬಳಕೆ ಮಾಡಿ ಚಲಾಯಿಸುತ್ತಿರುವ ವಾಹನ. ಎಚ್ಚರದಿಂದ ವಾಹನ ಚಲಾಯಿಸಿ" ಎಂಬ ಸಂದೇಶವನ್ನು ನೀಡಲು ಹಾಗೆ ಬರೆಯಲಾಗುತ್ತಿತ್ತು. ಈ ಬರಹವನ್ನು ಕಂಡಾಗ ಇತರ ವಾಹನ ಚಾಲಕರು ಎಚ್ಚರಿಕೆಯಿಂದ ಇರುತ್ತಾರೆ. ಅಷ್ಟೇ ಅಲ್ಲದೆ, ಸೀಮೆಎಣ್ಣೆ ವಾಹನವೇನೋ ಎಂದು ಹತ್ತಿರ ಬಾರದೆ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಾರೆ. ಇದರಿಂದಾಗಿ ಸೀಮೆಎಣ್ಣೆಯಿಂದ ಬೆಂಕಿ ಅವಘಡ ಸಂಭವಿಸಿದರೆ ಹಿಂದೆ ಬರುವ ವಾಹನಕ್ಕೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು..

ಆದರೆ ಏಪ್ರಿಲ್ 30, 2015 ರಂದು, ಮಹಾರಾಷ್ಟ್ರ ಸರ್ಕಾರವು ವಾಹನ ಕಾಯ್ದೆ ಸೆಕ್ಷನ್ 134 (1) ರ ಅಡಿಯಲ್ಲಿ ವಾಹನಗಳ ಮೇಲೆ ʼಹಾರ್ನ್ ಓಕೆ ಪ್ಲೀಸ್ʼ ಪದಗಳನ್ನು ನಿಷೇಧಿಸಿತ್ತು. ಏಕೆಂದರೆ ಹಾರ್ನ್ ಓಕೆ ಪ್ಲೀಸ್ ಪದಗಳನ್ನು ನೋಡಿದ ವಾಹನ ಚಾಲಕರು ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತಿದ್ದರು ಎನ್ನಲಾಗಿದೆ.

ಇನ್ನು ಇದಷ್ಟೇ ಅಲ್ಲದೆ, ಮತ್ತೊಂದು ಅರ್ಥವೂ ಇದೆ. ಯಾರಾದರೂ ರಸ್ತೆಯಲ್ಲಿ ಟ್ರಕ್‌ನ್ನು ಓವರ್‌ ಟೇಕ್‌ ಮಾಡಲು ಬಯಸಿದರೆ, ಅವರು ಮೊದಲು ಹಾರ್ನ್ ಮಾಡುತ್ತಾರೆ. ಇದರಿಂದ ಎದುರಿನಿಂದ ವಾಹನ ಚಲಾಯಿಸುತ್ತಿದ್ದ ಟ್ರಕ್ ಚಾಲಕ ತನ್ನ ಹಿಂದೆಯೇ ಮತ್ತೊಂದು ಭಾರಿ ವಾಹನ ಬರುತ್ತಿರುವುದನ್ನು ಗಮನಿಸಿ ದಾರಿ ಮಾಡಿಕೊಡುತ್ತಾನೆ.

ಇದನ್ನೂ ಓದಿ: Viral Video: ಶಬ್ಬಾಷ್..‌ ಧೈರ್ಯ ಅಂದ್ರೆ ಇದು.. ಅಸಭ್ಯವಾಗಿ ವರ್ತಿಸಿದ ಬಸ್‌ ಕಂಡಕ್ಟರ್‌ಗೆ ಬರೋಬ್ಬರಿ ಚಳಿ ಬಿಡಿಸಿದ ಯುವತಿ! ವಿಡಿಯೋ ವೈರಲ್

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಜೀ ಕನ್ನಡ ನ್ಯೂಸ್ ಪರಿಶೀಲಿಸಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News