ನವದೆಹಲಿ: ಕಾರೋನಾ ವೈರಸ್ ವಿಶ್ವಾದ್ಯಂತ ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತಿದೆ. ಶೀತಕಾಲದಲ್ಲಿ ಈ ವೈರಸ್ ಹುಟ್ಟಿಕೊಂಡಿತ್ತು. ಆದರೆ, ಬೇಸಿಗೆ ಕಾಲದಲ್ಲಿ ಈ ವೈರಸ್ ನ ಪ್ರಭಾವ ಕಡಿಮೆಯಾಗಲಿದೆಯೇ ಎಂಬ ಪ್ರಶ್ನೆ ಹಲವರಿಗೆ ಕಾಡಲಾರಂಭಿಸಿದೆ.
ಈ ವೈರಸ್ ಭೂಮಿಯ ಮೇಲ್ಮೈ ತಾಪಮಾನ ಎದುರಿಸಲು ಶಕ್ತವಾಗಿದೆಯೇ? ಇದಕ್ಕೆ ಉತ್ತರಿಸಿರುವ ಶಾಸ್ತ್ರಜ್ಞರು, ಬಿರುಬಿಸಿಲು ಹಾಗೂ ಉಷ್ಣತೆ ಯಾವುದೇ ವೈರಸ್ ಅನ್ನು ಹರಡುವುದನ್ನು ತಡೆಯುತ್ತವೆ ಆದರೆ, ಇದರಿಂದ ವೈರಸ್ ಸಂಪೂರ್ಣ ನಷ್ಟವಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜರ್ಮನಿಯ ಸೆಂಟರ್ ಫಾರ್ ಎಕ್ಷ್ಪೆರಿಮೆಂಟಲ್ ಅಂಡ್ ಕ್ಲಿನಿಕಲ್ ಇನ್ಫೆಕ್ಷನ್ ರಿಸರ್ಚ್ ಥಾಮಸ್ Pietschmann ಹೇಳುವ ಪ್ರಕಾರ, ಕೊರೊನಾ ವೈರಸ್, ಉಷ್ಣತೆಯನ್ನು ಸಹಿಸುವ ವೈರಲ್ ಅಲ್ಲ ಎಂದಿದ್ದಾರೆ. ಇದರರ್ಥ ತಾಪಮಾನ ಹೆಚ್ಚಾಗುತ್ತಲೇ ಇದರ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ.
ಈ ಕುರಿತು ಹೇಳಿಕೆ ನೀಡಿರುವ ಅಮೆರಿಕಾದ ಹಾಪ್ಕಿನ್ಸ್ ಯೂನಿವರ್ಸಿಟಿಯ ಮಹಾಮಾರಿ ವಿಜ್ಞಾನ ಶಾಖೆಯ ತಜ್ಞ ಡಾ.ಸ್ಟೀಫನ್ ಬರಾಲ್, ಬೇಸಿಗೆ ಕಾಲದಲ್ಲಿ ಅಮೇರಿಕಾದಲ್ಲಿ ಯಾವುದೇ ರೋಗ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ ಎಂದಿದ್ದಾರೆ.
ಹಾಂಕಾಂಗ್ ವಿಶ್ವವಿದ್ಯಾಲಯದ ಪ್ಯಾಥಾಲಾಜಿ ವಿಭಾಗದ ಪ್ರೊ. ಡಾ.ಜಾನ್ ನಿಕೊಲಸ್ ಅವರ ಹೇಳಿಕೆಯನ್ನು ನಂಬುವುದಾದರೆ ಕೊರೊನಾ ವೈರಸ್ ಒಟ್ಟು ಮೂರು ವಸ್ತುಗಳನ್ನು ದ್ವೇಶಿಸುತ್ತದೆ ಎಂದಿದ್ದಾರೆ. ಬಿಸಿಲು, ಉಷ್ಣಾಂಶ ಹಾಗೂ ಸಾಂಧ್ರತೆ. ಬಿಸಿಲು ಈ ವೈರಸ್ ನ ಪಸರಿಸುವ ಶಕ್ತಿಯನ್ನು ಶೇ.50ರಷ್ಟು ಕುಂಠಿತಗೊಳಿಸುತ್ತದೆ. ಕತ್ತಲ ಪ್ರದೆಶದಲ್ಲಿ ಈ ವೈರಸ್ 13 ಇಂದ 20 ನಿಮಿಷ ಬದುಕಿದರೆ, ಬಿಸಿಲಿನಲ್ಲಿ ಈ ವೈರಸ್ 2.5 ನಿಮಿಷ ಬದುಕುತ್ತದೆ ಎನ್ನುತ್ತಾರೆ.
ಆದರೆ, ಕೊರೊನಾ ವೈರಸ್ ನಿಂದ ಸಂಪೂರ್ಣ ಮುಕ್ತಿಹೊಂದಲು ಕೇವಲ ಉಷ್ಣಾಂಶ ಅಥವಾ ವಾತಾವರಣದ ಮೇಲೆ ಅವಲಂಭಿಸುವುದು ತಪ್ಪು. ಎಕೆಂದರ ಸಧ್ಯ ಈ ವೈರಸ್ ಮಹಾಮಾರಿಯ ರೂಪ ತಳೆದಿದೆ. ಅಮೆರಿಕಾದ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯದ ಗ್ಲೋಬಲ್ ಹೆಲ್ತ್ ನ ಪ್ರೊ.ಸಲವಾನ್ ಹೇಳುವಂತೆ ವಾತಾವರಣದಿಂದ ಭೂಮಿಯ ಮೇಲ್ಮೈ ಮೇಲೆ ಇರುವ ವೈರಸ್ ಅಂತ್ಯಕಂಡರೂ ಕೂಡ ಜನರ ದೇಹದಲ್ಲಿ ಸೇರಿಸುವ ವೈರಸ್ ಹಾಗೂ ಇದರಿಂದ ಉಂಟಾಗುವ ಸೊಂಕಿನ ಮೇಲೆ ಇದರ ಯಾವುದೇ ಪ್ರಭಾವ ಉಂಟಾಗುವುದಿಲ್ಲ
ಹೀಗಾಗಿ ಕೊರೊನಾ ವೈರಸ್ ನಿಂದ ಪಾರಾಗಲು ಜನರು ತಮ್ಮ ಕಡೆಗೆ ಹೆಚ್ಚಿನ ಗಮನ ನೀಡುವುದಿ ಅಗತ್ಯವಾಗಿದ್ದು, ಮನೆಯಿಂದ ಹೊರಬೀಳಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗುತ್ತಿದ್ದು, ಯಾರು ಮನೆಯಿಂದ ಹೊರಬೀಳಬಾರದು.