/kannada/photo-gallery/shubha-yoga-will-be-formed-by-venus-mercury-conjunction-people-of-this-zodiac-sign-will-get-a-lot-of-wealth-249438 ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!  ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ! 249438

ತನ್ನ 15 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಶತಕ ಬಾರಿಸಿಲ್ಲ ಈ ಕ್ರಿಕೆಟಿಗ... ಆದ್ರೂ ಈತನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ! ಯಾರೆಂದು ಗೆಸ್‌ ಮಾಡಿ ನೋಡೋಣ

Shane Warne career: ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ 708 ವಿಕೆಟ್ ಪಡೆದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 37 ಬಾರಿ 5 ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ವಾರ್ನ್ ಬೌಲಿಂಗ್ ನಲ್ಲಿ ಪರಿಣತಿ ಹೊಂದಿದ್ದರು.  

Written by - Bhavishya Shetty | Last Updated : Oct 6, 2024, 03:11 PM IST
    • ಬೌಲಿಂಗ್‌ನಲ್ಲಿ ಮಾಂತ್ರಿಕ ವರ್ಚಸ್ಸು ಹೊಂದಿರುವ ಸ್ಪಿನ್ನರ್ ಶೇನ್ ವಾರ್ನ್
    • ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ 708 ವಿಕೆಟ್ ಪಡೆದಿದ್ದಾರೆ
    • ಒಂದು ಇನ್ನಿಂಗ್ಸ್‌ನಲ್ಲಿ 37 ಬಾರಿ 5 ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ವಾರ್ನ್
ತನ್ನ 15 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಶತಕ ಬಾರಿಸಿಲ್ಲ ಈ ಕ್ರಿಕೆಟಿಗ... ಆದ್ರೂ ಈತನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ! ಯಾರೆಂದು ಗೆಸ್‌ ಮಾಡಿ ನೋಡೋಣ title=
File Photo

Shane Warne career: ಬೌಲಿಂಗ್‌ನಲ್ಲಿ ಮಾಂತ್ರಿಕ ವರ್ಚಸ್ಸು ಹೊಂದಿರುವ ಸ್ಪಿನ್ನರ್ ಎಂದು ಶೇನ್ ವಾರ್ನ್ ಅವರ ಹೆಸರು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ತಮ್ಮ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದರೂ ಸಹ, ಅದೊಂದು ದಾಖಲೆ ಮಾತ್ರ ಇಂದಿಗೂ ಯಾರಿಂದಲೂ ಸಹ ಮುರಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:  ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!

ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ 708 ವಿಕೆಟ್ ಪಡೆದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 37 ಬಾರಿ 5 ಅಥವಾ ಹೆಚ್ಚಿನ ವಿಕೆಟ್‌ಗಳನ್ನು ಪಡೆದ ವಾರ್ನ್ ಬೌಲಿಂಗ್ ನಲ್ಲಿ ಪರಿಣತಿ ಹೊಂದಿದ್ದರು.

ಶೇನ್ ವಾರ್ನ್ ಆಸ್ಟ್ರೇಲಿಯ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಜೊತೆಗೆ ಕೆಲವು ಪಂದ್ಯಗಳಲ್ಲಿ ಗೆಲುವಿಗೆ ಕೊಡುಗೆ ಕೂಡ ನೀಡಿದ್ದರು. ಸಮಯಕ್ಕೆ ಸರಿಯಾಗಿ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆದಿದ್ದರೆ, ಅವರು ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಎಂದು ಸಾಬೀತುಪಡಿಸುತ್ತಿದ್ದರು. ವಾರ್ನ್ ಟೆಸ್ಟ್‌ನ 199 ಇನ್ನಿಂಗ್ಸ್‌ಗಳಲ್ಲಿ 3154 ರನ್ ಗಳಿಸಿದ್ದಾರೆ.

ಶೇನ್ ವಾರ್ನ್ ಟೆಸ್ಟ್ ಇತಿಹಾಸದಲ್ಲಿ ಶತಕವಿಲ್ಲದೆ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಈ ವಿಶಿಷ್ಟ ದಾಖಲೆ ಇಂದಿಗೂ ಹಾಗೇ ಇದೆ. ವಾರ್ನ್ ತಮ್ಮ 3154 ಟೆಸ್ಟ್ ರನ್‌ಗಳಲ್ಲಿ ಒಂದೇ ಒಂದು ಶತಕವನ್ನು ಗಳಿಸಿಲ್ಲ. ದುರದೃಷ್ಟವಶಾತ್ ಅವರ ಗರಿಷ್ಠ ಸ್ಕೋರ್ 99 ರನ್. ಒಂದು ರನ್‌ ಗಳಿಸಿದ್ದರೂ ಸಹ ಶತಕದ ಬರ ನೀಗುತ್ತಿತ್ತು.

ಇದನ್ನೂ ಓದಿ: ಆ ಒಂದು ಇಸವಿಯಲ್ಲಿ ಕಣ್ಮರೆಯಾಗಿತ್ತು 10 ದಿನ! ಅಕ್ಟೋಬರ್‌ 4 ರಿಂದ 15ನೇ ದಿನಾಂಕಕ್ಕೆ ಜಂಪ್‌!!

12 ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅಲ್ಲದೆ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು. ವಾರ್ನ್ ನಂತರ, ಟೆಸ್ಟ್‌ನಲ್ಲಿ ಶತಕವಿಲ್ಲದೆ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಶ್ರೀಲಂಕಾದ ನಿರೋಶನ್ ಡಿಕ್ವೆಲ್ಲಾ. ಅವರು 54 ಟೆಸ್ಟ್ ಪಂದ್ಯಗಳಲ್ಲಿ 30.97 ಸರಾಸರಿಯಲ್ಲಿ 2757 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಟಿಮ್ ಸೌಥಿ 100 ಪಂದ್ಯಗಳಲ್ಲಿ 2098 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 89 ಪಂದ್ಯಗಳಲ್ಲಿ 2093 ರನ್ ಗಳಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.