/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ಪಾಕ್‌ ನೆಲದಲ್ಲಿ ತ್ರಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಯಾರು ಗೊತ್ತಾ? 39 ಬೌಂಡರಿ, 6 ಸಿಕ್ಸರ್‌ ಸೇರಿ 309 ರನ್‌ ಗಳಿಸಿದ್ದ ದಿಗ್ಗಜನೀತ

Virender Sehwag Test triple century: ಭಾರತವು 1954-55ರಲ್ಲಿ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದು, ಅಂದು ಪಾಕಿಸ್ತಾನದ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಕಂಡಿತ್ತು. ಅದಾದ ನಂತರ 2003-04 ಪ್ರವಾಸದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತವು ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿತು.  

Written by - Bhavishya Shetty | Last Updated : Oct 6, 2024, 05:36 PM IST
    • ಟೀಂ ಇಂಡಿಯಾ 2004ರಲ್ಲಿ ಕೈಗೊಂಡ ಪಾಕಿಸ್ತಾನ ಪ್ರವಾಸ ಸ್ಮರಣೀಯವಾಗಿತ್ತು
    • ಪಾಕಿಸ್ತಾನದ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಕಂಡಿತ್ತು.
    • ಸರಣಿಯ ಗೆಲುವಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅಬ್ಬರಿಸಿದ್ದರು
ಪಾಕ್‌ ನೆಲದಲ್ಲಿ ತ್ರಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಯಾರು ಗೊತ್ತಾ? 39 ಬೌಂಡರಿ, 6 ಸಿಕ್ಸರ್‌ ಸೇರಿ 309 ರನ್‌ ಗಳಿಸಿದ್ದ ದಿಗ್ಗಜನೀತ title=
Virender Sehwag

Virender Sehwag Triple Century: ಟೀಂ ಇಂಡಿಯಾ 2004ರಲ್ಲಿ ಕೈಗೊಂಡ ಪಾಕಿಸ್ತಾನ ಪ್ರವಾಸ ಸ್ಮರಣೀಯವಾಗಿತ್ತು. ಅಂದು ಪಾಕಿಸ್ತಾನ ಪ್ರವಾಸದಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು. ಅಷ್ಟೇ ಅಲ್ಲದೆ, ಭಾರತ ಪಾಕಿಸ್ತಾನ ಪ್ರವಾಸದಲ್ಲಿಇತಿಹಾಸವನ್ನೇ ಸೃಷ್ಟಿಸಿತ್ತು. 49 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ನೆಲದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿತ್ತು.

ಇದನ್ನೂ ಓದಿ:  ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ!

ಭಾರತವು 1954-55ರಲ್ಲಿ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದು, ಅಂದು ಪಾಕಿಸ್ತಾನದ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಕಂಡಿತ್ತು. ಅದಾದ ನಂತರ 2003-04 ಪ್ರವಾಸದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತವು ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿತು.

ಈ ಸರಣಿಯ ಗೆಲುವಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ ಭಾರತ ಪರ ಟೆಸ್ಟ್ʼನಲ್ಲಿ ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. 375 ಎಸೆತಗಳನ್ನು ಎದುರಿಸಿದ್ದ ಸೆಹ್ವಾಗ್‌ 309 ರನ್‌ಗಳ ಇನಿಂಗ್ಸ್ ಆಡಿದ್ದು, ಇದರಲ್ಲಿ 39 ಬೌಂಡರಿ ಮತ್ತು 6 ಸಿಕ್ಸರ್‌ ಸೇರಿತ್ತು.

ವೀರೇಂದ್ರ ಸೆಹ್ವಾಗ್‌ಗಿಂತ ಮೊದಲು ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಸಾಧನೆಯನ್ನು ಮಾಡಿರಲಿಲ್ಲ.  ಸೆಹ್ವಾಗ್ ಅವರಿಗಿಂತ ಮೊದಲು, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ವಿವಿಎಸ್ ಲಕ್ಷ್ಮಣ್ ಹೆಸರಿನಲ್ಲಿತ್ತು. ಅವರು 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೋಲ್ಕತ್ತಾ ಟೆಸ್ಟ್‌ನಲ್ಲಿ 281 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸಿದ ನಂತರ, ವೀರೇಂದ್ರ ಸೆಹ್ವಾಗ್ ಅವರನ್ನು 'ಮುಲ್ತಾನ್ ಸುಲ್ತಾನ್' ಎಂದು ಕರೆಯಲು ಪ್ರಾರಂಭಿಸಿದರು. ಮುಲ್ತಾನ್‌ನಲ್ಲಿ ಪಾಕಿಸ್ತಾನದ ಬೌಲರ್‌ಗಳು ವೀರೇಂದ್ರ ಸೆಹ್ವಾಗ್ ಅವರ ಮುಂದೆ ಅಸಹಾಯಕರಾಗಿ ಕಾಣಿಸಿದ್ದಲ್ಲದೆ, ಈತನನ್ನು ಔಟ್‌ ಮಾಡಲು ಹೆಣಗಾಡಿದ್ದರು.

ಭಾರತದ ಪರ ಅತಿ ಹೆಚ್ಚು ಟೆಸ್ಟ್ ಸ್ಕೋರ್ ಗಳಿಸಿದ ಬ್ಯಾಟ್ಸ್‌ಮನ್
1. ವೀರೇಂದ್ರ ಸೆಹ್ವಾಗ್ 319 ರನ್, ವಿರುದ್ಧ - ದಕ್ಷಿಣ ಆಫ್ರಿಕಾ (2008)
2. ವೀರೇಂದ್ರ ಸೆಹ್ವಾಗ್ 309 ರನ್, ಪಾಕಿಸ್ತಾನ ವಿರುದ್ಧ (2004)
3. ಕರುಣ್ ನಾಯರ್, 303 ರನ್, ವಿರುದ್ಧ - ಇಂಗ್ಲೆಂಡ್ (2016)
4. ವೀರೇಂದ್ರ ಸೆಹ್ವಾಗ್ 293 ರನ್, ವಿರುದ್ಧ - ಶ್ರೀಲಂಕಾ (2009)
5. ವಿವಿಎಸ್ ಲಕ್ಷ್ಮಣ್ 281 ರನ್, ಆಸ್ಟ್ರೇಲಿಯಾ ವಿರುದ್ಧ (2001)

ಮುಲ್ತಾನ್ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಿದ ಶೋಯೆಬ್ ಅಖ್ತರ್, ಸಕ್ಲೇನ್ ಮುಷ್ತಾಕ್, ಅಬ್ದುಲ್ ರಜಾಕ್ ಮತ್ತು ಶಬ್ಬೀರ್ ಅಹ್ಮದ್ ಅವರಂತಹ ಬೌಲರ್‌ಗಳು ಸಹ ವೀರೇಂದ್ರ ಸೆಹ್ವಾಗ್ ಮುಂದೆ ಮಂಡಿಯೂರಿದ್ದರು. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಇನ್ನಿಂಗ್ಸ್‌, ಸಕ್ಲೇನ್ ಮುಷ್ತಾಕ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನೇ ಕೊನೆಗೊಳಿಸುವಂತೆ ಮಾಡಿತ್ತು. ಸಕ್ಲೇನ್ ಮುಷ್ತಾಕ್ ಅವರ ಎಸೆತದಲ್ಲಿ ವೀರೇಂದ್ರ ಸೆಹ್ವಾಗ್ ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಟ್ರಿಪಲ್ ಸೆಂಚುರಿ ಗಳಿಸಿದ ಸಾಧನೆ ಮಾಡಿದರು.

ಭಾರತ ಇತಿಹಾಸ ಸೃಷ್ಟಿ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 675 ರನ್ ಗಳಿಸಿತ್ತು. ಭಾರತದ ಪರ ವೀರೇಂದ್ರ ಸೆಹ್ವಾಗ್ 375 ಎಸೆತಗಳನ್ನು ಎದುರಿಸಿ 309 ರನ್ ಗಳಿಸಿದರು.ಸಚಿನ್ ತೆಂಡೂಲ್ಕರ್ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಜೇಯ 194 ರನ್ ಗಳಿಸಿದ್ದರು. ಭಾರತದ ಈ ಬೃಹತ್‌ ಸ್ಕೋರ್‌ಗೆ ಉತ್ತರವಾಗಿ, ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 216 ರನ್‌ಗಳಿಗೆ ಕುಸಿಯಿತು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 52 ರನ್‌ಗಳಿಂದ ಗೆದ್ದುಕೊಂಡಿತು. ಅಂತಿಮವಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿತು. 49 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ನೆಲದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿತ್ತು.

ಇದನ್ನೂ ಓದಿ: ಬ್ಲಡ್‌ ಟೆಸ್ಟ್ ಅಗತ್ಯವೇ ಇಲ್ಲ... ಚರ್ಮದ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಡಯಾಬಿಟಿಸ್ ಹೆಚ್ಚಾಗಿರುವುದು ಖಚಿತ!

ದ್ರಾವಿಡ್ ಮತ್ತು ಸಚಿನ್ ನಡುವಿನ ವಿವಾದ
ಇದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಭಾರತದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೆ 675 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡರು. ಇದನ್ನು ನೋಡಿದ ಸಚಿನ್ ತೆಂಡೂಲ್ಕರ್ ಅಚ್ಚರಿಗೊಂಡಿದ್ದರು. ಆ ಸಮಯದಲ್ಲಿ, ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅಷ್ಟೇ ಅಲ್ಲದೆ ದ್ವಿಶತಕವನ್ನು ಗಳಿಸಲು ಕೇವಲ 6 ರನ್‌ಗಳ ಅಗತ್ಯವಿತ್ತು. ಪಂದ್ಯದ ನಂತರ ರಾಹುಲ್ ದ್ರಾವಿಡ್ ಅವರನ್ನು ಸಾಕಷ್ಟು ಟೀಕಿಸಲಾಗಿತ್ತು. ರಾಹುಲ್ ಅವರ ಈ ನಿರ್ಧಾರದಿಂದ ಸಚಿನ್ ತೀವ್ರ ಕೋಪಗೊಂಡಿದ್ದರು ಎನ್ನಲಾಗಿದೆ. ಆದರೆ ಆ ವೇಳೆ ಮಾಧ್ಯಮಗಳಿಗೆ ಈ ಬಗ್ಗೆ ಹೆಚ್ಚು ಹೇಳದ ಸಚಿನ್ 2014ರಲ್ಲಿ ತಮ್ಮ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ನಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಿ ರಾಹುಲ್‌ನ ಈ ನಿರ್ಧಾರದಿಂದ ಆ ಸಮಯದಲ್ಲಿ ತುಂಬಾ ಬೇಸರವಾಗಿತ್ತು ಎಂದು ಬರೆದುಕೊಂಡಿದ್ದಾರೆ. , ಏಕೆಂದರೆ ಪಂದ್ಯದಲ್ಲಿ ಸಾಕಷ್ಟು ಸಮಯ ಉಳಿದಿತ್ತು ಮತ್ತು ಅವರು ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಬಹುದಿತ್ತು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.