IPL 2025: BCCI ಶೀಘ್ರದಲ್ಲೇ IPL 2025ಗಾಗಿ ಧಾರಣ ನೀತಿ(retention policy)ಯನ್ನು ಹೊರಡಿಸಬಹುದು. ಈ ಸಮಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೂ, ಅಭಿಮಾನಿಗಳು ಈ ಧಾರಣ ನೀತಿಯ ಮೇಲೆ ಕಣ್ಣಿಟ್ಟಿದ್ದಾರೆ. ಏಕೆಂದರೆ ಇದರ ನಂತರ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ. ಏತನ್ಮಧ್ಯೆ ಕೆಲವು ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆಯೂ ವಿವಿಧ ರೀತಿಯ ಮಾತುಕತೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಫೇಕ್ನ್ಯೂಸ್ಗಳು ಹರಿದಾಡುತ್ತಿವೆ. ರಿಷಬ್ ಪಂತ್ ಬಗ್ಗೆಯೂ ಇದೇ ರೀತಿಯ ಗಾಳಿಸುದ್ದಿಯೊಂದು ಸಖತ್ ಸೌಂಡ್ ಮಾಡುತ್ತಿತ್ತು. ಇದಕ್ಕೆ ತಕ್ಕ ಉತ್ತರವನ್ನು ಸ್ವತಃ ಪಂತ್ ಅವರೇ ನೀಡಿದ್ದಾರೆ.
ಐಪಿಎಲ್ ಮುನ್ನವೇ ಸುಳ್ಳು ಸುದ್ದಿಗಳ ಮಹಾಪೂರ
ಐಪಿಎಲ್ 2025 ಆರಂಭವಾಗುವ ಮೊದಲು ಮೂಲಗಳನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಸುದ್ದಿಗಳನ್ನು ಹರಡಲಾಗುತ್ತಿದೆ. ಈ ಸುದ್ದಿಗಳಿಗೆ ಯಾವುದೇ ರೀತಿಯ ಮೂಲಗಳಿಲ್ಲ. ಇವು ಸಂಪೂರ್ಣವಾಗಿ ನಕಲಿ ಆಗಿದ್ದು, ಅಭಿಮಾನಿಗಳಲ್ಲಿ ತುಂಬಾ ಬೇಸರ ಮೂಡಿಸಿವೆ. ಕೆಲವು ಗಾಳಿಸುದ್ದಿಗಳಿಂದ ಆಟಗಾರರಿಗೂ ದೊಡ್ಡ ಮುಜುಗರವುಂಟಾಗಿದೆ. ಈ ಪೈಕಿ ರಿಷಬ್ ಪಂತ್ ಮುಂದಿನ ಐಪಿಎಲ್ ಸೀಸನ್ನಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದರೆ ಆರ್ಸಿಬಿಯನ್ನು ಸಂಪರ್ಕಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಆದರೆ ಸ್ವಲ್ಪ ಸಮಯದ ನಂತರ ಪಂತ್ ಅವರೇ ಇದು ಫೇಕ್ ನ್ಯೂಸ್ ಅಂತಾ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಅಪಪ್ರಚಾರ ಮಾಡುವುದರಿಂದ ದೂರವಿರಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಪಂತ್ ನಾಯಕನಾಗಲು ಆರ್ಸಿಬಿಯನ್ನು ಸಂಪರ್ಕಿಸಿದ್ದಾರೆಂದು ಅಭಿಮಾನಿಯೊಬ್ಬರು ಟ್ವಿಟರ್ನಲ್ಲಿ ಅಪ್ಡೇಟ್ ಮಾಡಿದ್ದಾರೆ. ಆದರೆ ಆರ್ಸಿಬಿ ಆಡಳಿತವು ಪಂತ್ ಮನವಿಯನ್ನು ಸ್ವೀಕರಿಸಲಿಲ್ಲ. ಅಷ್ಟೇ ಅಲ್ಲ ವಿರಾಟ್ ಕೊಹ್ಲಿಗೆ ಪಂತ್ ತಂಡದಲ್ಲಿ ಬೇಡವೆಂದು ಹೇಳಿದ್ದಾರೆʼ ಅಂತಾ ಈ ಪೋಸ್ಟ್ನಲ್ಲಿ ಹೇಳಲಾಗಿದೆ.
ರಿಷಬ್ ಪಂತ್ ನೀಡಿದ ಉತ್ತರವೇನು?
🚨 Rishabh Pant approached RCB 🚨
- Pant approached RCB through his manager earlier this week as he foresee a captaincy vacancy there but got declined by RCB's management.
Virat doesn't want Pant in RCB due to his Political Tactics in Indian team as well as in DC.
- RCB Source pic.twitter.com/B6KY2gj4gp
— Rajiv (@Rajiv1841) September 26, 2024
ಇದಾದ ಬಳಿಕ ರಿಷಬ್ ಪಂತ್ರಿಂದ ತಕ್ಕ ಉತ್ತರ ಹೊರಬಿದ್ದಿದೆ. ಇದೆಲ್ಲಾ ಸುಳ್ಳು ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ನೀವು ಯಾಕೆ ಇಷ್ಟೊಂದು ಸುಳ್ಳು ಸುದ್ದಿ ಹಬ್ಬಿಸುತ್ತೀರಿ? ಅಂತಾ ಪಂತ್ ಗರಂ ಆಗಿದ್ದಾರೆ. ಸಂವೇದನಾಶೀಲತೆಯನ್ನು ಹೊಂದಿರಿ, ವಿನಾಕಾರಣ ಇಂತಹ ವಾತಾವರಣ ನಿರ್ಮಾಣ ಮಾಡಬೇಡಿ. ಇದು ಮೊದಲ ಬಾರಿಯೂ ಅಲ್ಲ ಮತ್ತು ಕೊನೆಯ ಬಾರಿಯೂ ಅಲ್ಲ, ಆದರೆ ನಾನು ಇದಕ್ಕೆ ಸ್ಪಷ್ಟನೆ ನೀಡಬೇಕಾಗಿದೆ, ಹೀಗಾಗಿ ನೀಡುತ್ತಿದ್ದೇನೆ. ದಯವಿಟ್ಟು ಯಾರೂ ಈ ರೀತಿಯ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಹಾಗೂ ನಂಬಬೇಡಿ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಪ್ರತಿದಿನ ಇಂತಹ ನೂರಾರು ಫೇಕ್ನ್ಯೂಸ್ಗಳು ಹರಿದಾಡುತ್ತಿರುತ್ತವೆ. ಹೀಗಾಗಿ ಯಾವುದೇ ಸುದ್ದಿಯನ್ನು ನಂಬಬೇಕಾದರೆ ಅದರ ಮೂಲವನ್ನು ಪರಿಶೀಲಿಸಿ. ತಪ್ಪು ಮಾಹಿತಿ ಹರಡುತ್ತಿರುವ ಅನೇಕರಿಗೆ ನಾನು ಮನವಿ ಮಾಡುತ್ತಿದ್ದೇನೆ. ಇದನ್ನು ಇಲ್ಲಿಗೆ ನಿಲ್ಲಿಸಿ, ಉಳಿದಂತೆ ನಿಮಗೆ ಬಿಟ್ಟದ್ದುʼ ಎಂದು ಪಂತ್ ಹೇಳಿದ್ದಾರೆ.
ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಮಾತ್ರ ಆಡಲಿದ್ದಾರೆ
ರಿಷಬ್ ಪಂತ್ ಪ್ರಸ್ತುತ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ನಾಯಕರಾಗಿದ್ದಾರೆ. ಇತ್ತೀಚೆಗೆ ಪಂತ್ DCಯ ಅಗ್ರ ಧಾರಣ ಆಯ್ಕೆಯಾಗಲು ಸಿದ್ಧರಾಗಿದ್ದಾರೆಂದು ಉಲ್ಲೇಖಿಸಿ ಸುದ್ದಿಯಾಗಿದೆ. ಪಂತ್ ಮೊದಲ ಸೀಸನ್ನಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಮೊದಲು ಆಟಗಾರನಾಗಿ ಆಡುತ್ತಿದ್ದ ಅವರು ಈಗ ನಾಯಕರಾಗಿದ್ದಾರೆ. ಮುಂದಿನ ಋತುವಿನಲ್ಲಿಯೂ ಅವರು ಅದೇ ತಂಡದ ನಾಯಕರಾಗಿ ಉಳಿಯುವ ನಿರೀಕ್ಷೆಯಿದೆ. ಐಪಿಎಲ್ನಲ್ಲಿ ಆಡಿದ ನಂತರವೇ ರಿಷಬ್ ಪಂತ್ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಫೇಕ್ನ್ಯೂಸ್ ಕೂಡ ಬರಲಿವೆ, ಆದರೆ ಅವುಗಳ ಬಗ್ಗೆಯೂ ಎಚ್ಚರದಿಂದಿರಬೇಕು ಅಂತಾ ಪಂತ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.