ICC Test Rankings 2024: ಕುತೂಹಲಕಾರಿ ಸಂಗತಿಯೆಂದರೆ ಚೆನ್ನೈ ಟೆಸ್ಟ್‌ನಲ್ಲಿ ಜಡೇಜಾ ಅವರ ಜೊತೆಗಾರ ರವಿಚಂದ್ರನ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ 5 ವಿಕೆಟ್‌ಗಳನ್ನು ಕಬಳಿಸಿದರು. ಇದರ ಹೊರತಾಗಿಯೂ ಜಡೇಜಾ ಮತ್ತು ಅಶ್ವಿನ್ ನಡುವೆ ರೇಟಿಂಗ್‌ನಲ್ಲಿ ಭಾರೀ ವ್ಯತ್ಯಾಸವಿದೆ.
ICC Test Rankings 2024: T20 ಅಂತಾರಾಷ್ಟ್ರೀಯದಿಂದ ನಿವೃತ್ತಿಯ ನಂತರ, ಈಗ ರವೀಂದ್ರ ಜಡೇಜಾ ಅವರ ಸಂಪೂರ್ಣ ಗಮನವು ಟೆಸ್ಟ್ ಮತ್ತು ODI ಮೇಲಿದೆ. ಏತನ್ಮಧ್ಯೆ ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದ ನಂತರ ಐಸಿಸಿ ಬಿಡುಗಡೆ ಮಾಡಿರುವ ಹೊಸ ಶ್ರೇಯಾಂಕದಲ್ಲಿ, ಜಡೇಜಾ ಹಿಂದೆಂದೂ ಮಾಡದ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಮಿಂಚಿದ ಆರ್.ಅಶ್ವಿನ್ ಕೂಡ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸಾಕಷ್ಟು ಸುಧಾರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಆಲ್ ರೌಂಡರ್‌ಗಳ ಬಗ್ಗೆ ಹೇಳುವುದಾದರೆ, ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ. ಜಡೇಜಾ ಈಗಾಗಲೇ ನಂ.1 ಸ್ಥಾನದಲ್ಲಿದ್ದರೂ, ಈ ಬಾರಿ ಅವರ ರೇಟಿಂಗ್ 475 ರ‍್ಯಾಂಕಿಂಗ್‌ಗೆ ಏರಿದೆ. ಇದು ಅವರ ಸಾರ್ವಕಾಲಿಕ ಉನ್ನತ ರೇಟಿಂಗ್ ಆಗಿದೆ. ಅವರು ಹಿಂದೆಂದೂ ಈ ಸಾಧನೆ ಮಾಡಿರಲಿಲ್ಲ.
ವಿಶೇಷವೆಂದರೆ ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್ ಪಂದ್ಯವು ಸೆ.27ರಿಂದ ಕಾನ್ಪುರದಲ್ಲಿ ನಡೆಯಲಿದೆ. ಇದರಲ್ಲಿ ಜಡೇಜಾ ಆಡುವುದು ಬಹುತೇಕ ಖಚಿತವಾಗಿದೆ. ಭಾರತದ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆಗಳಿದ್ದರೂ ಜಡೇಜಾಗೆ ತಂಡದಿಂದ ಹೊರಗುಳಿಯುವುದು ಅನುಮಾನ. ಇದರರ್ಥ ಜಡೇಜಾ ತಮ್ಮ ಸಂಖ್ಯೆಯನ್ನು ಇನ್ನಷ್ಟು ಸುಧಾರಿಸಲು ಅವಕಾಶವಿದೆ. ಅವರು ಕೇವಲ 1 ರೇಟಿಂಗ್ ಪಾಯಿಂಟ್ ಅನ್ನು ಹೆಚ್ಚಿಸಿದರೂ, ತಮ್ಮ ಸಾರ್ವಕಾಲಿಕ ಉನ್ನತ ರೇಟಿಂಗ್ ಅನ್ನು ತಲುಪುತ್ತಾರೆ.
ಕುತೂಹಲಕಾರಿ ಸಂಗತಿಯೆಂದರೆ ಚೆನ್ನೈ ಟೆಸ್ಟ್‌ನಲ್ಲಿ ಜಡೇಜಾ ಅವರ ಜೊತೆಗಾರ ರವಿಚಂದ್ರನ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ 6 ವಿಕೆಟ್‌ಗಳನ್ನು ಕಬಳಿಸಿದರು. ಇದರ ಹೊರತಾಗಿಯೂ ಜಡೇಜಾ ಮತ್ತು ಅಶ್ವಿನ್ ನಡುವೆ ರೇಟಿಂಗ್‌ನಲ್ಲಿ ಭಾರೀ ವ್ಯತ್ಯಾಸವಿದೆ. ಜಡೇಜಾ ರೇಟಿಂಗ್ 475 ಆಗಿದ್ದರೆ, ಅಶ್ವಿನ್ ರೇಟಿಂಗ್ 370 ಆಗಿದೆ. ಈ ಹಿಂದೆ ಅಶ್ವಿನ್ ಅವರ ರೇಟಿಂಗ್ ಇನ್ನೂ ಕಡಿಮೆಯಾಗಿತ್ತು, ಇದಾದ ನಂತರವೂ ಅವರು 2ನೇ ಸ್ಥಾನದಲ್ಲಿದ್ದರು. ಅದು ಈಗ ಸುಧಾರಿಸಿದೆ. ಕಾನ್ಪುರ ಟೆಸ್ಟ್‌ನಲ್ಲಿ ಅಶ್ವಿನ್ ಕೂಡ ಆಡಲಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಇವರಿಬ್ಬರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ 86 ರನ್ ಗಳಿಸಿದ್ದರೆ, ಅಶ್ವಿನ್ 113 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಯಾವುದೇ ವಿಕೆಟ್ ಪಡೆಯಲಿಲ್ಲ, ಆದರೆ ಜಡೇಜಾ 2 ವಿಕೆಟ್ ಪಡೆದರು. ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 3 ವಿಕೆಟ್ ಮತ್ತು ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆದರು. ಆದರೆ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಅವರು ಬ್ಯಾಟಿಂಗ್ ಮಾಡಲಿಲ್ಲ.