IND vs BAN Test: ಮೊದಲ ಟೆಸ್ಟ್ ಗೆಲುವಿನ ಬೆನ್ನಲ್ಲೇ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ: ಯಾರು ಇನ್‌? ಯಾರು ಔಟ್?‌

India Squad for 2nd Test vs Bangladesh: ಭಾರತ ಮೊದಲ ಟೆಸ್ಟ್ ಅನ್ನು 280 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದ್ದು, ಎರಡನೇ ಟೆಸ್ಟ್‌ನಲ್ಲಿ ಇದೇ ರೀತಿಯ ಪ್ರದರ್ಶನವನ್ನು ಪ್ರದರ್ಶಿಸಲು ಬಯಸಿದೆ

Written by - Bhavishya Shetty | Last Updated : Sep 22, 2024, 04:21 PM IST
    • ಕಾನ್ಪುರದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಅಂತಿಮ ಟೆಸ್ಟ್
    • ಅಂತಿಮ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ತಂಡ ಪ್ರಕಟ
    • ಭಾರತ ಮೊದಲ ಟೆಸ್ಟ್ ಅನ್ನು 280 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ
IND vs BAN Test: ಮೊದಲ ಟೆಸ್ಟ್ ಗೆಲುವಿನ ಬೆನ್ನಲ್ಲೇ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ: ಯಾರು ಇನ್‌? ಯಾರು ಔಟ್?‌ title=
India Squad for 2nd Test vs Bangladesh

Team India squad for 2nd Test against Bangladesh: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಮುಂಬರುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇನ್ನು ಭಾರತೀಯ ಕ್ರಿಕೆಟ್ ಮಂಡಳಿಯು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಅದೇ ಆಟಗಾರರ ಗುಂಪಿನೊಂದಿಗೆ ಎರಡನೇ ಆಟವನ್ನು ಆಡಲು ನಿರ್ಧರಿಸಿದೆ.

ಇದನ್ನೂ ಓದಿ: ಸುನಿಲ್ ಗವಾಸ್ಕರ್ ತಂಗಿಯನ್ನು ಪಟಾಯಿಸಿ ವಿವಾಹವಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟ್ಸ್‌ಮನ್‌ ಇವರೇ ನೋಡಿ...! ಅಂದಹಾಗೆ ಈತ ಕನ್ನಡಿಗನೂ ಹೌದು

ಇನ್ನು ಭಾರತ ಮೊದಲ ಟೆಸ್ಟ್ ಅನ್ನು 280 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದ್ದು, ಎರಡನೇ ಟೆಸ್ಟ್‌ನಲ್ಲಿ ಇದೇ ರೀತಿಯ ಪ್ರದರ್ಶನವನ್ನು ಪ್ರದರ್ಶಿಸಲು ಬಯಸಿದೆ.

BCCI ತನ್ನ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, "ಬಾಂಗ್ಲಾದೇಶದ ವಿರುದ್ಧದ IDFC FIRST ಬ್ಯಾಂಕ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್‌ಗೆ ಯಾವುದೇ ಬದಲಾವಣೆಯನ್ನು ಮಾಡದೆ ಅದೇ ತಂಡವನ್ನು ಉಳಿಸಿಕೊಂಡಿದೆ. ಎರಡನೇ ಟೆಸ್ಟ್ ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ನಡೆಯಲಿದೆ" ಎಂದು ಹೇಳಿಕೊಂಡಿದೆ.  

ಭಾರತಕ್ಕೆ ಭರ್ಜರಿ ಜಯ:
ಪಾಕಿಸ್ತಾನದ ವಿರುದ್ಧ ಐತಿಹಾಸಿಕ 2-0 ಗೆಲುವಿನ ನಂತರ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶವನ್ನು ಟೀಂ ಇಂಡಿಯಾ ಪ್ರಬಲ ಆಟ ಪ್ರದರ್ಶಿಸಿ ಕಟ್ಟಿಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಶ್ವಿನ್ ಅವರ ಶತಕ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ 376 ರನ್ ಕಲೆ ಹಾಕಿತು. ನಂತರ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ಲೈನ್-ಅಪ್ 149 ರನ್‌ಗಳ ಅತ್ಯಲ್ಪ ಸ್ಕೋರ್‌ನಲ್ಲಿ ಎದುರಾಳಿಗಳನ್ನು ಬಗ್ಗುಬಡಿಯಿತು.

ಇದನ್ನೂ ಓದಿ: ಬಾಹುಬಲಿ ನಟ ಪ್ರಭಾಸ್ ನಿಜವಾದ ಹೆಸರೇನು ಗೊತ್ತಾ? ಸಿಕ್ಕಾಪಟ್ಟೆ ದೊಡ್ಡದಾಗಿ ಇವರ ಅಸಲಿ ನಾಮ!!

2ನೇ ಟೆಸ್ಟ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೀ), ಧ್ರುವ್ ಜುರೆಲ್ (ವಿಕೀ), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News