ಕರೀನಾ ಕಪೂರ್‌ ಬ್ಯೂಟಿಗೆ ಭಾರತ ತಂಡದ ಕ್ಯಾಪ್ಟನ್‌ ಕ್ಲೀನ್‌ ಬೌಲ್ಡ್‌! ನಟಿಯ ಮೇಲೆ ತಮಗಿದ್ದ ಪ್ರೀತಿಯನ್ನು ವ್ಯಕ್ತ ಪಡಿಸಿದ ರೋಹಿತ್‌ ಶರ್ಮಾ?

kareen kapoor: ಬಾಲಿವುಡ್‌ನ ಬೇಬೋ ಇಂದು (ಸೆಪ್ಟೆಂಬರ್‌ 21)ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ನಟಿಯ ಜೊತೆಗಿನ ತಮ್ಮ ಸುಂದರವಾದ ಸಂಬಂಧದ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಸಿನಿಮಾಗೂ, ಕ್ರಿಕೆಟ್‌ಗೂ ಎಲ್ಲಿನ ನಂಟು, ಇವರಿಬ್ಬರ ಆ ವಿಶೇಷವಾದ ಸಂಬಂಧ ಏನು? ತಿಳಿಯಲು ಮುಂದೆ ಓದಿ...

1 /10

ಬಾಲಿವುಡ್‌ನ ಬೇಬೋ ಇಂದು (ಸೆಪ್ಟೆಂಬರ್‌ 21)ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ನಟಿಯ ಜೊತೆಗಿನ ತಮ್ಮ ಸುಂದರವಾದ ಸಂಬಂಧದ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಸಿನಿಮಾಗೂ, ಕ್ರಿಕೆಟ್‌ಗೂ ಎಲ್ಲಿನ ನಂಟು, ಇವರಿಬ್ಬರ ಆ ವಿಶೇಷವಾದ ಸಂಬಂಧ ಏನು? ತಿಳಿಯಲು ಮುಂದೆ ಓದಿ...

2 /10

ನಟಿ ಕರೀನಾ ಕಪೂರ್ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕರೀನಾ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದು ಸೆಪ್ಟೆಂಬರ್‌ 21ರಂದು) ನಟಿ ತಮ್ಮ  43ರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಯಸ್ಸು 43ರ ಹರೆಯದಲ್ಲೂ ಕರೀನಾ ಕಪೂರ್ ಅಭಿಮಾನಿಗಳಲ್ಲಿ ಕ್ರೇಜ್ ಕಡಿಮೆಯಾಗಿಲ್ಲ.

3 /10

ಕರೀನಾ ಕಪೂರ್‌ ಕೇವಲ ತನ್ನ ವೃತ್ತಿ ಜೀವನ ಅಷ್ಟೆ ಅಲ್ಲದೆ ತನ್ನ ವೈಯಕ್ತಿಕ ಜೀವನದ ಕಾರನದಿಂದಾಗಿಯೂ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದಾರೆ. 

4 /10

ಇಂದು, ಕರೀನಾ ತನ್ನ ವೈವಾಹಿಕ ಜೀವನದಲ್ಲಿ ಸಂತೋಷವಾಗಿದ್ದಾರೆ. ಆದರೂ ಕೂಡ ಮದುವೆಗೂ ಮುಂಚೆ ನಟಿ ಕರೀನಾ ಕಪೂರ್‌ ಹೆಸರು ಹಲವರ ಜೊತೆ ಮೆಲುಕು ಹಾಕಿಕೊಂಡಿತ್ತು. ಹೀಗೆ ಹಲವರು ನಟಿಯ ಕುರಿತು ತಮ್ಮ ಭಾವನೆಗಳನ್ನು ವ್ಯಕ್ತಪಡಸಿದ್ದರು, ಅವರಲ್ಲಿ ರೋಹಿತ್‌ ಶರ್ಮಾ ಕೂಡ ಒಬ್ಬರು. 

5 /10

ಕರೀನಾ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಾಗಿಯೇ ಇದೆ, ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಸೇರಿದ್ದಾರೆ. 

6 /10

ಸಂದರ್ಶನವೊಂದರಲ್ಲಿ, ರೋಹಿತ್ ಶರ್ಮಾ ಕರೀನಾ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ನಟಿ ಕರೀನಾ ಕಪೂರ್‌ ಅವರ ಮೃಲೆ ಕ್ರಶ್‌ ಹೊಂದಿದ್ದರು, ಈ ವಿಷಯವನ್ನು ಸ್ವತಃ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. 

7 /10

ಬಾಲಿವುಡ್‌ನ ನಟಿಯರು ಕ್ರಿಕೆಟಿಗರನ್ನು ಪ್ರೀತಿಸಿ ಮದುವೆಯಾದ ಅದೆಷ್ಟೋ ಕಥೆಗಳನ್ನು ನಾವು ಇಂದು ನೋಡಬಹುದು. 2014 ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ರೋಹಿತ್ ಶರ್ಮಾ ಬಾಲಿವುಡ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. 

8 /10

" ನಾನು ಮಧುಬಾಲಾ, ವಹೀದಾ ರೆಹಮಾನ್, ಕಿಶೋರ್ ಕುಮಾರ್, ರಾಜೇಶ್ ಖನ್ನಾ ಮತ್ತು ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ, ಎಂದು ಹೇಳಿದ ರೋಹಿತ್‌ ಶರ್ಮಾ ಅವರನ್ನು ನಿರೂಪಕರು, ನಿಮ್ಮ ನೆಚ್ಚಿನ ನಟಿ ಯಾರು ಎಂದು ಕೇಳಿದರು, ಇದಕ್ಕೆ ಉತ್ತರಿಸಿದ ರೋಹಿತ್‌ ಶರ್ಮಾ ಕರೀನಾ ಕಪೂರ್ ಹೆಸರನ್ನು ತೆಗೆದುಕೊಂಡು, "ನಾನು ಕರೀನಾ ಕಪೂರ್ ಅವರನ್ನು ಪ್ರೀತಿಸುತ್ತೇನೆ. ನಾನು ಅವರ ಹೆಸರನ್ನು ಕೇಳುತ್ತಿದ್ದಂತೆ ಹುಚ್ಚನಾಗುತ್ತಿದೆ, ಆಕೆಯ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಕರೀನಾ ನನ್ನ ಕ್ರಶ್" ಎಂದು  ರೋಹಿತ್ ಶರ್ಮಾ ಈ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು.  

9 /10

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ವಿವಾಹವಾದರು. ಇಂದು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪರಸ್ಪರ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. 

10 /10

ನಟಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ, ನಟಿ ಯಾವಾಗಲೂ ತನ್ನ ಮಕ್ಕಳೊಂದಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ