Health Benefits Of Fenugreek: ಮೆಂತ್ಯ ಕಾಳುಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ A, B, D, ಜೀವಸತ್ವಗಳು, ಫೈಬರ್ ಮತ್ತು ಕಬ್ಬಿಣದ ಅಂಶಗಳು ಶ್ರೀಮಂತವಾಗಿದೆ.
Fenugreek Health Benefits: ಮೆಂತ್ಯ ಕಾಳುಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದೊರೆಯುವ ದಿವೌಷಧವಾಗಿದೆ. ಪ್ರಾಚೀನ ಕಾಲದಿಂದಲೂ ಅಡುಗೆ ಮತ್ತು ಆಯುರ್ವೇದದಲ್ಲಿ ಔಷಧಿಯಾಗಿ ಮೆಂತ್ಯ ಕಾಳುಗಳನ್ನು ಬಳಸಿಕೊಂಡು ಬರಲಾಗುತ್ತಿದೆ. ಮೆಂತ್ಯ ಕಾಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇದು ಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅನೇಕ ಆರೋಗ್ಯ ತೊಂದರೆಗಳಿಂದ ಪಾರು ಮಾಡುತ್ತದೆ. ಇದರಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ A, B, D, ಜೀವಸತ್ವಗಳು, ಫೈಬರ್, ಕಬ್ಬಿಣದ ಅಂಶಗಳು ಶ್ರೀಮಂತವಾಗಿದೆ. ಪ್ರತಿದಿನ ಅರ್ಧ ಚಮಚ ಮೆಂತ್ಯ ಕಾಳು ಸೇವಿಸಿದರೆ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಅನ್ನೋದರ ಬಗ್ಗೆ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹ ಹೊಂದಿರುವವರು ಪ್ರತಿನಿತ್ಯ ಮೆಂತ್ಯ ಕಾಳು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಬಹುದಾಗಿದೆ. ಸಂಶೋಧನೆಯ ಪ್ರಕಾರ, ನಿಯಮಿತವಾಗಿ ಮೆಂತ್ಯ ಕಾಳು ಕಾಳು ಸೇವಿಸಿದ ಜನರಲ್ಲಿ ಮಧುಮೇಹವು ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಹಾಲುಣಿಸುವ ತಾಯಂದಿರರು ಪ್ರತಿನಿತ್ಯ ಒಂದು ಚಮಚ ಮೆಂತ್ಯ ಕಾಳು ಸೇವಿಸಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ಎದೆಯ ಹಾಲಿನ ಹೆಚ್ಚಿಸಲು ಸಹಕಾರಿಯಾಗಿದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ, ಹೀಗಾಗಿ ಹಾಲುಣಿಸುವ ತಾಯಂದಿರರು ಯಾವುದೇ ರೀತಿ ಟೆನ್ಶನ್ ಇಲ್ಲದೆ ಮೆಂತ್ಯ ಕಾಳುಗಳನ್ನು ಸೇವಿಸಬಹುದು.
ಮೆಂತ್ಯ ಕಾಳುಗಳು ಲೈಂಗಿಕ ಬಯಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಮಹಿಳೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಕಡಿಮೆ ಸೆಕ್ಸ್ ಡ್ರೈವ್ ಹೊಂದಿರುವ ಮಹಿಳೆಯರು ಮತ್ತು ಪುರುಷರು ಪ್ರತಿನಿತ್ಯ ಮೆಂತ್ಯ ಕಾಳುಗಳನ್ನು ಸೇವಿಸಬೇಕು. ಮೆಂತ್ಯಕಾಳು ಸೇವನೆಯು ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಸಹ ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ಮೆಂತ್ಯ ಕಾಳುಗಳು ದೇಹದ ಉಷ್ಣತೆ ನಿಯಂತ್ರಿಸುತ್ತದೆ. ಇದನ್ನು ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಜೀರ್ಣ, ವಾಯುವಿನಂತಹ ಅಪಾಯಗಳನ್ನು ನಿವಾರಿಸುತ್ತದೆ. ಕರುಳಿನ ಮೇಲೆ ಹಿತವಾದ ಪರಿಣಾಮ ಬೀರುತ್ತದೆ. ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು, ಸೆಳೆತ ನಿವಾರಿಸಲು ಮೆಂತ್ಯ ಕಾಳು ಪರಿಣಾಮಕಾರಿ.
ಮೆಂತ್ಯ ಕಾಳುಗಳು ಸೇವನೆಯು ಹಸಿವನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮ ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಇದು ಜೀರ್ಣಕ್ರಿಯೆ ಸುಧಾರಿಸುವ ಅತ್ಯುತ್ತಮ ಔಷಧಿಯಾಗಿದ್ದು, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರ ಪರಿಣಾಮ ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳು ಹೊಟ್ಟೆ ತುಂಬಿಸುವ ಗುಣ ಹೊಂದಿದ್ದು, ಹೆಚ್ಚು ಕ್ಯಾಲೋರಿಗಳ ಸೇವನೆ ಮಾಡುವುದನ್ನು ತಗ್ಗಿಸುತ್ತದೆ. ಇದು ಹಸಿವು ನಿಯಂತ್ರಿಸುವ ಮೂಲಕ ಸ್ಥೂಲಕಾಯ & ಬೊಜ್ಜನ್ನು ಕರಗಿಸುತ್ತದೆ.