IPL 2025: ದಿನೇಶ್ ಕಾರ್ತಿಕ್ ಐಪಿಎಲ್ನಲ್ಲಿ ಹಲವು ತಂಡಗಳಿಗಾಗಿ ಆಡಿದ್ದಾರೆ ಆದರೆ ಅವರು ಕೊನೆಯದ್ದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಿದ್ದರು. ಕಳೆದ ಋತುವಿನಲ್ಲಿ ಆರ್ಸಿಬಿ ತಂಡದ ಪರ ಆಡಿದ್ದ ದಿನೇಶ್ ಕಾರ್ತಿಕ್, ಈ ಋತುವಿನ ನಂತರ ನಿವೃತ್ತಿ ಘೋಷಿಸಿದ್ದರು.
ದಿನೇಶ್ ಕಾರ್ತಿಕ್ ಐಪಿಎಲ್ನಲ್ಲಿ ಹಲವು ತಂಡಗಳಿಗಾಗಿ ಆಡಿದ್ದಾರೆ ಆದರೆ ಅವರು ಕೊನೆಯದ್ದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಿದ್ದರು. ಕಳೆದ ಋತುವಿನಲ್ಲಿ ಆರ್ಸಿಬಿ ತಂಡದ ಪರ ಆಡಿದ್ದ ದಿನೇಶ್ ಕಾರ್ತಿಕ್, ಈ ಋತುವಿನ ನಂತರ ನಿವೃತ್ತಿ ಘೋಷಿಸಿದ್ದರು.
ಇದೀಗ ಆರ್ಸಿಬಿ ತಂಡದಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ಬಲಿಷ್ಠ ಆಟಗಾರನ ಅವಶ್ಯಕತೆ ಇದ್ದು, ವಿಕೆಟ್ಕೀಪರ್ನ ಪಾತ್ರವನ್ನು ಸಹ ನಿಔಅಯಿಸಬಲ್ಲ ಆಟಗಾರನಿಗಾಗಿ ಫ್ರಾಂಚೈಸಿ ಭಾರಿ ಹುಡುಕಾಟ ನಡೆಸಿದೆ.
ಮುಂಬರುವ ಐಪಿಎಲ್ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಆರ್ಸಿಬಿ ತಂಡದಲ್ಲಿ ಹೊಸ ಹೆಸರು ಬರಲಿದ್ದು, ದೊಡ್ಡ ಬಿಡ್ ಮಾಡಬಹುದಾದ ಅವಕಾಶ ಇದೆ.
ಇನ್ನೂ ದಿನೇಶ್ ಕಾರ್ತಿಕ್ ಸ್ಥಾನವನ್ನು ತುಂಬಬಲ್ಲ ಆಟಗಾರರು ಯಾರೆಂದು ನೋಡುವುದಾದರೆ, ಈ ಪಟ್ಟಿಯಲ್ಲಿ ಮೂರು ಹೆಸರು ಕೇಳಿ ಬಂದಿದೆ. ಅದರಲ್ಲಿ ಮೊದಲನೆಯದ್ದಾಗಿ ಕನ್ನಡಿಗ ಕೆ ಎಲ್ ರಾಹುಲ್ ಅವರ ಹೆಸರು ಕೇಳಿ ಬಂದಿದ್ದು, ಇವರು ಲಕ್ನೋ ತಂಡವನ್ನು ತೊರೆದರೆ, ಬೆಂಗಳೂರು ತಂಡ ಹರಾಜಿನಲ್ಲಿ ಕೆ ಎಲದದ ರಾಹುಲ್ ಅವರ ಮೇಲೆ ಕಣ್ಣಿಡಲಿದೆ.
ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪರ ಬಿರುಸಿನ ಶತಕ ಗಳಿಸಿದ ನಂತರ ಜೋಶ್ ಇಂಗ್ಲಿಸ್ ಹೆಸರು ಭಾರಿ ಚರ್ಚೆಯಲ್ಲಿದೆ. ಐಪಿಎಲ್ ಹರಾಜಿನಲ್ಲಿ ಉತ್ತಮ ಮೊತ್ತ ಪಡೆಯಬಹುದೆಂಬ ಊಹಾಪೋಹಗಳು ಕೇಳಿಬರುತ್ತಿವೆ. ಅವರ ಬಲಿಷ್ಠ ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ಆರ್ಸಿಬಿ ಅವರನ್ನು ತಂಡಕ್ಕೆ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡಬಹುದು.
ಜಿತೇಶ್ ಶರ್ಮಾ ಅವರ ಡ್ಯಾಶಿಂಗ್ ಸ್ಟೈಲ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಈ ಮುಂಚೆ ಜಿತೇಶ್ ಪಂಜಾಬ್ ಕಿಂಗ್ಸ್ ತಂಡದ ಕೀಪರ್ ಆಗಿದ್ದರು. ಈ ಬಾರಿ ಆರ್ಸಿಬಿ ಅವರನ್ನು ಬಿಡ್ ಮಾಡಬಹುದು