Deepika Padukone big decision: ದೀಪಿಕಾ ಪಡುಕೋಣೆ ತಾಯಿಯಾಗಿ ಕೆಲವೇ ದಿನಗಳಾಗಿವೆ. ಇದೀಗ ಮಗಳಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಅದು ಅವರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
ದೀಪಿಕಾ ಪಡುಕೋಣೆ ಅವರ ಮಗಳು 8 ಸೆಪ್ಟೆಂಬರ್ 2024 ರಂದು ಜನಿಸಿದರು. ಇದೀಗ ಮಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅವರು ತಮ್ಮ ಮಗಳನ್ನು ಬೆಳೆಸಲು ಅನುಷ್ಕಾ ಶರ್ಮಾ ಅವರ ಪೋಷಕರ ಶೈಲಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ..
ದೀಪಿಕಾ ಪಡುಕೋಣೆ ಕೂಡ ತನ್ನ ಮಗಳನ್ನು ಬೆಳೆಸುವಲ್ಲಿ Care Taker ಅಥವಾ ಆಯಾ ಅವರ ಸಹಾಯವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ವರದಿಯನ್ನು ನಂಬುವುದಾದರೆ, ದೀಪಿಕಾ ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳನ್ನು ಬೆಳೆಸುತ್ತಿರುವಂತೆ ಆಯಾ ಅವರ ಸಹಾಯದಿಂದ ಖುದ್ದಾಗಿ ತಾವೇ ಮಗುವನ್ನು ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಇದರಿಂದ ನಟಿಯ ಕರಿಯರ್ ಮೇಲೆ ಪರಿಣಾಮ ಬೀರಬಹುದು ಎಂದು ಮಾದ್ಯಮಗಳು ವರದಿ ಮಾಡಿವೆ..
ಇನ್ನು ಸೆಪ್ಟೆಂಬರ್ 8 ರಂದು ದೀಪಿಕಾ ಮತ್ತು ರಣವೀರ್ ಹೆಣ್ಣು ಮಗುವನ್ನು ಸ್ವಾಗತಿಸಿದರು. ಈ ಬಗ್ಗೆ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದರು.. ಬಾಲಿವುಡ್ನ ಹಲವು ತಾರಾ ಜೋಡಿಗಳು ತಮ್ಮ ಮಗಳ ಮೇಲೆ ಪ್ರೀತಿಯ ಸುರಿಮಳೆಗೈದಿದ್ದರು..
ದೀಪಿಕಾ ಪಡುಕೋಣೆ ಕೊನೆಯದಾಗಿ 'ಕಲ್ಕಿ 2898 AD' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ನಂತರ, ಮಾರ್ಚ್ 2025 ರವರೆಗೆ ಚಿತ್ರದ ಚಿತ್ರೀಕರಣದಿಂದ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
ವರದಿಯ ಪ್ರಕಾರ ದೀಪಿಕಾ ಪಡುಕೋಣೆ ಮುಂದಿನ ವರ್ಷ ಮಾರ್ಚ್ ವರೆಗೆ ಬಾಣಂತನದಲ್ಲಿರುತ್ತಾರೆ.. ನಂತರ ಅವರು ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ಪ್ರಭಾಸ್ ಅವರೊಂದಿಗೆ 'ಕಲ್ಕಿ' ಸೀಕ್ವೆಲ್ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ..
ದೀಪಿಕಾ ಪತಿ ರಣವೀರ್ ಸಿಂಗ್ ಶೀಘ್ರದಲ್ಲೇ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟನಿಗೆ 'ಡಾನ್ 3' ಚಿತ್ರ ಕೂಡ ಇದೆ. ಫರ್ಹಾನ್ ಅಖ್ತರ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.