Foods to avoid in pregnancy: ಗರ್ಭಿಣಿಯರ ಆಹಾರಕ್ಕೆ ಸರಿಯಾದ ಪೋಷಣೆ ಅತ್ಯಗತ್ಯ. ಏಕೆಂದರೆ ಅವರ ಆಹಾರದ ಆಯ್ಕೆಯು ಆರೋಗ್ಯಕರ ಗರ್ಭಧಾರಣೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಗರ್ಭಿಣಿಯರು ಸಮೃದ್ಧ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು ಅತ್ಯಗತ್ಯ. ಸಮತೋಲಿತ ಆಹಾರ ಸೇವನೆಯಿಂದ ಗರ್ಭಿಣಿಯರು ಮತ್ತು ಮಗುವಿನ ಆರೋಗ್ಯವು ಚೆನ್ನಾಗಿರುತ್ತದೆ. ಆದರೆ ಗರ್ಭಿಣಿಯರು ಅಪ್ಪಿತಪ್ಪಿಯೂ ಕೆಲವು ಆಹಾರಗಳನ್ನು ಸೇವಿಸಬಾರದು. ಯಾವ ಆಹಾರವನ್ನು ಗರ್ಭಿಣಿಯರು ಸೇವಿಸಬಾರದು ಅನ್ನೋದರ ಬಗ್ಗೆ ತಿಳಿಯಿರಿ...
ಇದನ್ನೂ ಓದಿ: ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್ ಆಗುತ್ತೆ! ಕನ್ನಡಕವೇ ಬೇಕಿಲ್ಲ
● ಗರ್ಭ ಧರಿಸಿದ ನಂತರ ಕುರುಕಲು ತಿಂಡಿಯಿಂದ ದೂರವಿರಿ. ನಿಮ್ಮ ಕೈಲಾದಷ್ಟು ಡ್ರೈ ಫ್ರೂಟ್ಸ್, ಹಣ್ಣುಗಳು ಹಾಗೂ ಹಾಲು ಮುಂತಾದವುಗಳನ್ನು ಸೇವಿಸಬೇಕು.
● ಗರ್ಭಿಣಿಯರು ಆಲ್ಕೋಹಾಲ್ ಸೇವಿಸಿದರೆ ಅದರಲ್ಲಿರುವ ನಂಜು ಅಥವಾ ವಿಷಕಾರಿ ಅಂಶವು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಆಕಸ್ಮಿಕವಾಗಿ ಆಲ್ಕೋಹಾಲ್ ಅಭ್ಯಾಸವಿದ್ದರೆ, ಗರ್ಭಧಾರಣೆಯ ನಂತರ ಬಿಡುವುದು ಉತ್ತಮ.
● ಅತಿಯಾಗಿ ಕೆಫೀನ್ ಸೇವನೆ ಮಾಡುವುದರಿಂದ ಅದು ಮಗುವಿನ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ ಎನ್ನಬಹುದು.
● ಗರ್ಭಾವಸ್ಥೆಯಲ್ಲಿ ಕಾಫಿ, ಟೀ, ಶಕ್ತಿವರ್ಧಕ ಪಾನೀಯಗಳು, ಪೆಪ್ಸಿ, ಕೋಲಾಗಳನ್ನು ಸೇವನೆ ಮಾಡದಿರುವುದು ಒಳ್ಳೆಯದು.
● ಆರೋಗ್ಯಕರ ಡಯಟ್ನಲ್ಲಿ ಹಣ್ಣು ಮತ್ತು ತರಕಾರಿ ಪ್ರಮುಖ ಭಾಗವಾದರೂ ಅವುಗಳನ್ನು ಸರಿಯಾಗಿ ತೊಳೆಯದೆ, ಸ್ವಚ್ಛ ಮಾಡದೆ ಬಳಸಿದರೆ ತಾಯಿ ಮತ್ತು ಭ್ರೂಣದಲ್ಲಿರುವ ಶಿಶುವಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಸೋಂಕುಗಳು ಕೂಡ ತಗಲುವ ಸಾಧ್ಯತೆ ಇರುತ್ತದೆ.
● ಗರ್ಭವತಿಯರು ಹಸಿ ಮೊಟ್ಟೆ ಸೇವಿಸುವುದು ಅಪಾಯಕಾರಿ. ಏಕೆಂದರೆ ಅದರಲ್ಲಿರುವ ಬ್ಯಾಕ್ಟೀರಿಯಾದಿಂದ ತೀವ್ರ ಸೋಂಕು ತಗಲುವ ಸಾಧ್ಯತೆಯಿದೆ. ಮೊಟ್ಟೆಯೊಳಗಿರುವ ಹಳದಿ ಲೋಳೆ ಗಟ್ಟಿಯಾಗುವವರೆಗೆ ಮೊಟ್ಟೆಯನ್ನು ಬೇಯಿಸಿ ನಂತರ ಸೇವಿಸುವುದು ಉತ್ತಮ.
● ಬಿಸಿ ಮಾಡದಿರುವ ಅಥವಾ ಪಾಶ್ಚರೀಕರಿಸದಿರುವ ಹಾಲು ಸೇವನೆ ಕೂಡ ಗರ್ಭಿಣಿಯರಿಗೆ ತೊಂದರೆಯುಂಟು ಮಾಡುವ ಸಾಧ್ಯತೆಯಿದೆ, ಅದರಿಂದ ಭ್ರೂಣಕ್ಕೂ ಅಪಾಯವಿದೆ.
● ದೊಡ್ಡ ದೊಡ್ಡ ಮೀನುಗಳಲ್ಲಿ ಹೆಚ್ಚಿನ ಸಾಂದ್ರತೆಯ ಪಾದರಸವಿರುತ್ತದೆ, ಅದು ಮಗುವಿನ ನರ ವ್ಯವಸ್ಥೆಯ ಬೆಳವಣಿಗೆಗೆ ಹಾನಿಯನ್ನುಂಟುಮಾಡುತ್ತದೆ.
ಇದನ್ನೂ ಓದಿ: ಬೆಳಿಗೆ ಎದ್ದಾಗ ಮೊದಲು ನೀವು ನಿಮ್ಮ ಫೋನ್ ನೋಡುತ್ತೀರಾ..? ತಕ್ಷಣ ಈ ಅಭ್ಯಾಸ ನಿಲ್ಲಿಸಿ.. ಇಲ್ಲಾ ಅಂದ್ರೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.