ಹುಡುಗ ಹೀಗಿದ್ರೆ ಮಾತ್ರ ಮದುವೆಯಾಗಿ, ಇಲ್ಲಾಂದ್ರೆ ಬೇರೊಬ್ಬನ್ನ ಹುಡುಕಿ ಅಷ್ಟೇ! ನಟಿ ತನಿಷಾ ಕುಪ್ಪಂಡ ಬೋಲ್ಡ್‌ ಕಾಮೆಂಟ್

Tanisha Kuppanda: ತನಿಷಾ ಸಿನಿಜಗತ್ತಿನಲ್ಲಿ ಎಷ್ಟೇ ಕಲರ್ಫುಲ್‌ ಆಗಿದ್ದರೂ ಸಹ, ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Written by - Bhavishya Shetty | Last Updated : Sep 12, 2024, 07:31 PM IST
    • ಬಿಗ್‌ ಬಾಸ್‌ ಮೂಲಕ ಸಿಕ್ಕಾಪಟ್ಟೆ ಫೇಮಸ್‌ ಆಗಿರುವ ನಟಿ
    • ತನಿಷಾ ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು
    • ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್ʼ​ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಹುಡುಗ ಹೀಗಿದ್ರೆ ಮಾತ್ರ ಮದುವೆಯಾಗಿ, ಇಲ್ಲಾಂದ್ರೆ ಬೇರೊಬ್ಬನ್ನ ಹುಡುಕಿ ಅಷ್ಟೇ! ನಟಿ ತನಿಷಾ ಕುಪ್ಪಂಡ ಬೋಲ್ಡ್‌ ಕಾಮೆಂಟ್ title=
File Photo

Tanisha Kuppanda: ತನಿಷಾ ಕುಪ್ಪಂಡ... ಈ ಹೆಸರು ಕರ್ನಾಟಕದಲ್ಲಿ ಸಖತ್‌ ಪರಿಚಿತ. ಬಿಗ್‌ ಬಾಸ್‌ ಮೂಲಕ ಸಿಕ್ಕಾಪಟ್ಟೆ ಫೇಮಸ್‌ ಆಗಿರುವ ನಟಿ ಇದೀಗ ಬೋಲ್ಡ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಆದರೆ ಇದು ಅವರ ಲೈಫ್‌ʼಗೆ ಸಂಬಂಧಪಟ್ಟಿದ್ದಾಗಿದ್ದು, ಅನುಭವಗಳ ಮೇಲೆ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:  ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..

ತನಿಷಾ ಸಿನಿಜಗತ್ತಿನಲ್ಲಿ ಎಷ್ಟೇ ಕಲರ್ಫುಲ್‌ ಆಗಿದ್ದರೂ ಸಹ, ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು. ಈ ಬಗ್ಗೆ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪ್ರೀತಿಗಾಗಿ ನೆಚ್ಚಿನ ನಟನೆಯನ್ನೇ ತ್ಯಜಿಸಿದ್ದರು ತನಿಷಾ. ಈ ವಿಚಾರದ ಬಗ್ಗೆ ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್ʼ​ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ತನಿಷಾ ಒಬ್ಬರನ್ನು ಪ್ರೀತಿಸಿದ್ದರು. ಅವರನ್ನೇ ಮದುವೆಯಾಗುವ ಪ್ಲಾನ್‌ ಕೂಡ ಮಾಡಿದ್ದರು. ಆದರೆ ಆತ 'ನಿನಗೆ ನಾನು ಮುಖ್ಯನಾ? ಧಾರಾವಾಹಿ ಮುಖ್ಯನಾ?' ಎಂದು ಪ್ರಶ್ನೆಯಿಟ್ಟಿದ್ದ. ಕೊನೆಗೆ ಆತನಿಗಾಗಿ ನಟನೆಯನ್ನೇ ಬಿಟ್ಟರು. ಆದರೆ ನಟನೆ ಬಿಟ್ಟ ಮೇಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅನುಮಾನದ ಸ್ವಭಾವದಿಂದ  ತನಿಷಾ ಯಾರ ಜೊತೆ ಮಾತನಾಡುವಂತಿರಲಿಲ್ಲ. ಆನ್‌ʼಸ್ಕ್ರೀನ್ʼನಲ್ಲಿ ಯಾರೊಬ್ಬ ನಟನ ಜೊತೆಯೂ ಹತ್ತಿರವಾಗಿ ಮಾತನಾಡುವುದನ್ನು ಕಂಡರೂ ಜಗಳ ಮಾಡುತ್ತಿದ್ದನಂತೆ. ಇದೇ ಕಾರಣಕ್ಕೆ ಅದೆಷ್ಟೋ ನಟನೆಯ ಛಾನ್ಸ್ ಬಿಟ್ಟಿದ್ದರು ತನಿಷಾ.

ಅವನೇ ಸರ್ವಸ್ವ ಎಂದುಕೊಂಡಿದ್ದ ತನಿಷಾರಿಗೆ ಕೊನೆಗೂ ಈ ಸಂಬಂಧ ಉಳಿಸಿಕೊಳ್ಳಲು ಆಗಲೇ ಇಲ್ಲ. ಒಂದು ಹಂತದವರೆಗೆ ಸಹಿಸಿಕೊಂಡ ತನಿಷಾ ಕೊನೆಗೆ ಬ್ರೇಕಪ್​ ಮಾಡಿಕೊಂಡರು. ಈ ಬಗ್ಗೆ ಮಾತನಾಡುತ್ತಾ ಇತರ ಯುವತಿಯರಿಗೂ ನಟಿ ಕಿವಿ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ: "ಸತ್ತ ಬಳಿಕ ನನ್ನ ಆಸ್ತಿ ಯಾರಿಗೆ ಸೇರಬೇಕೆಂದರೆ..."- ವಿಲ್ ಬರೆದು ಮಾಹಿತಿ ನೀಡಿದ ಬಚ್ಚನ್‌ ದಂಪತಿ

"ನೀವು ಮದುವೆಯಾಗುವ ಹುಡುಗ, ನಿಮಗಿಂತಲೂ ಹೆಚ್ಚು ನಿಮ್ಮನ್ನು ಪ್ರೀತಿಸುವಂತಿರಬೇಕು. ಆ ರೀತಿ ಇಷ್ಟಪಡುವ ಕ್ಯಾರೆಕ್ಟರ್​ ನಿಮ್ಮ ಹುಡುಗನಿಗೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಬಿಟ್ಟುಬಿಡಿ. ಇಲ್ಲದಿದ್ದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಬೇರೊಬ್ಬನ್ನ ಹುಡುಕಿ. ಎಲ್ಲಕ್ಕಿಂತಲೂ ಮುಖ್ಯ ನಿಮ್ಮ ಜೀವನ" ಎಂಬರ್ಥದಲ್ಲಿ ತನಿಷಾ ಮಾತನಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News