"ಸತ್ತ ಬಳಿಕ ನನ್ನ ಆಸ್ತಿ 98 ಕೋಟಿ ಬಂಗಾರ ಯಾರಿಗೆ ಸೇರಬೇಕೆಂದರೆ..."- ವಿಲ್ ಬರೆದು ಮಾಹಿತಿ ನೀಡಿದ ಬಚ್ಚನ್‌ ದಂಪತಿ

Amitabh Bachchan -Jaya Bachchan Property Heir: ಅಫಿಡವಿಟ್ ಪ್ರಕಾರ ಸದ್ಯ ಜಯಾ ಬಚ್ಚನ್ ಖಾತೆಯಲ್ಲಿ 10 ಕೋಟಿ 11 ಲಕ್ಷ 33 ಸಾವಿರದ 172 ಜಮಾ ಆಗಿದ್ದರೆ, ಅಮಿತಾಬ್ ಬಚ್ಚನ್ ಖಾತೆಯಲ್ಲಿ 1 ಸಾವಿರ ಕೋಟಿ 20 ಕೋಟಿ 45 ಲಕ್ಷ 62 ಸಾವಿರದ 83 ಜಮಾ ಆಗಿದೆ.  

Written by - Bhavishya Shetty | Last Updated : Sep 12, 2024, 07:01 PM IST
    • ಅಮಿತಾಭ್ ಬಚ್ಚನ್ ಪತ್ನಿ ಹಾಗೂ ಹಿರಿಯ ನಟಿ ಜಯಾ ಬಚ್ಚನ್ ಭರ್ಜರಿ ಆಸ್ತಿ ಹೊಂದಿದ್ದಾರೆ
    • ಈ ಹಿಂದೆ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ
    • ಅಮಿತಾಬ್‌ ಬಚ್ಚನ್‌ ತನ್ನ ಬಳಿಕ ಆಸ್ತಿ ಯಾರ ಹೆಸರಿಗೆ ಸೇರಬೇಕೆಂಬುದರ ಬಗ್ಗೆ ವಿಲ್‌ ಬರೆದಿಟ್ಟಿದ್ದಾರೆ.
"ಸತ್ತ ಬಳಿಕ ನನ್ನ ಆಸ್ತಿ 98 ಕೋಟಿ ಬಂಗಾರ ಯಾರಿಗೆ ಸೇರಬೇಕೆಂದರೆ..."- ವಿಲ್ ಬರೆದು ಮಾಹಿತಿ ನೀಡಿದ ಬಚ್ಚನ್‌ ದಂಪತಿ title=
File Photo

Amitabh Bachchan -Jaya Bachchan Property Heir: ಅಮಿತಾಭ್ ಬಚ್ಚನ್ ಪತ್ನಿ ಹಾಗೂ ಹಿರಿಯ ನಟಿ ಜಯಾ ಬಚ್ಚನ್ ಭರ್ಜರಿ ಆಸ್ತಿ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯೆಯಾಗಿರುವ ಜಯಾ, ಈ ಹಿಂದೆ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಶತಕೋಟಿ ಆಸ್ತಿ ಹೊಂದಿರುವ ಅಮಿತಾಬ್‌ ಬಚ್ಚನ್‌ ತನ್ನ ಬಳಿಕ ಆಸ್ತಿ ಯಾರ ಹೆಸರಿಗೆ ಸೇರಬೇಕೆಂಬುದರ ಬಗ್ಗೆಯೂ ವಿಲ್‌ ಬರೆದಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕುಬೇರನಿಗೆ ಅತಿ ಪ್ರಿಯವಾದ ರಾಶಿಗಳಿವು.. ಹಣದ ಕೊರತೆ ಎಂದಿಗೂ ಬಾರದು, ಸುಖ ಸಂಪತ್ತು ಕೊಟ್ಟು ಕಾಯುವನು.. ಇವರಂಥ ಅದೃಷ್ಟವಂತರೇ ಇಲ್ಲ!

ಅಫಿಡವಿಟ್ ಪ್ರಕಾರ ಸದ್ಯ ಜಯಾ ಬಚ್ಚನ್ ಖಾತೆಯಲ್ಲಿ 10 ಕೋಟಿ 11 ಲಕ್ಷ 33 ಸಾವಿರದ 172 ಜಮಾ ಆಗಿದ್ದರೆ, ಅಮಿತಾಬ್ ಬಚ್ಚನ್ ಖಾತೆಯಲ್ಲಿ 1 ಸಾವಿರ ಕೋಟಿ 20 ಕೋಟಿ 45 ಲಕ್ಷ 62 ಸಾವಿರದ 83 ಜಮಾ ಆಗಿದೆ.

ಆಭರಣಗಳ ಬಗ್ಗೆ ಮಾತನಾಡುವುದಾದರೆ, ಜಯಾ ಬಚ್ಚನ್ ಬಳಿ 40.97 ಕೋಟಿ ಮೌಲ್ಯದ ವಜ್ರ ಮತ್ತು ಚಿನ್ನದ ಆಭರಣಗಳಿವೆ. ಬಿಗ್ ಬಿ ಬಳಿ 54.77 ಕೋಟಿ ಮೌಲ್ಯದ ಚಿನ್ನಾಭರಣಗಳಿವೆ ಎಂದು ಅಫಿಡವಿಟ್ʼನಲ್ಲಿ ತಿಳಿಸಲಾಗಿದೆ.

ರಾಜಕೀಯದ ಹೊರತಾಗಿ, ಜಯಾ ಬಚ್ಚನ್ ಚಲನಚಿತ್ರಗಳು ಮತ್ತು ಬ್ರಾಂಡ್‌ʼಗಳ ಪ್ರಚಾರದಿಂದ ಸಾಕಷ್ಟು ಗಳಿಸುತ್ತಾರೆ. 2023 ರಲ್ಲಿ ನಿವ್ವಳ ಮೌಲ್ಯ 1 ಕೋಟಿ 63 ಲಕ್ಷದ 56 ಸಾವಿರ ಮತ್ತು ಅಮಿತಾಬ್ ಬಚ್ಚನ್ ಅವರ ನಿವ್ವಳ ಮೌಲ್ಯ 2 ಬಿಲಿಯನ್ 73 ಕೋಟಿ 74 ಲಕ್ಷ 96 ಸಾವಿರದ 590 ಆಗಿತ್ತು.

ಇದಲ್ಲದೇ ಬಿಗ್ ಬಿ ಮುಂಬೈನಲ್ಲಿ ಎರಡು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದು, ವಿದೇಶದಲ್ಲಿ ಮನೆಯನ್ನೂ ಹೊಂದಿದ್ದಾರೆ. ಇದಲ್ಲದೆ, ಇತ್ತೀಚೆಗೆ ಅವರು ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..

ಒಟ್ಟಾರೆಯಾಗಿ ಈ ಎಲ್ಲಾ ಆಸ್ತಿ ಪಾಸ್ತಿಯಲ್ಲಿ ಅವರಿಬ್ಬರ ಮಕ್ಕಳಾದ ಶ್ವೇತಾ ಮತ್ತು ಅಭಿಷೇಕ್‌ ಬಚ್ಚನ್ʼಗೆ ಸಮಾನವಾಗಿ ಹಂಚಿಕೆಯಾಗಬೇಕೆಂದು ವಿಲ್‌ ಬರೆದಿಟ್ಟಿದ್ದಾರೆ.  ಈ ಬಗ್ಗೆ ಅಮಿತಾಬ್‌ ಸ್ಪಷ್ಟನೆ ನೀಡಿದ್ದು, "ನಾನು ಸತ್ತ ಬಳಿಕ ನನ್ನ ಆಸ್ತಿ ನಮ್ಮ ಮಕ್ಕಳಿಗೆ ಸೇರುತ್ತದೆ. ನನಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಹೀಗಾಗಿ ಇವರಿಬ್ಬರಿಗೆ ಸಮನಾಗಿ ಹಂಚಲಾಗುವುದು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News